“ವಿಜಯಪತಾಕೆ” ಚಲನಚಿತ್ರದ ಟೈಟಲ್ ಅನಾವರಣ

ಆದ್ಯೋತ್ ಸುದ್ದಿನಿಧಿ:
ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್‌ರವರು ನಿರ್ಮಿಸುತ್ತಿರುವ ‘ವಿಜಯ ಪತಾಕೆ’ ಕನ್ನಡ ಚಲನಚಿತ್ರದ ಟೈಟಲ್ ಪೋಸ್ಟರ್ ಅನಾವರಣ ಕಾರ್ಯಕ್ರಮ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಜರುಗಿತು.
ಶ್ರೀ ಮ.ನಿ.ಪ್ರ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಟೈಟಲ್ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ನಟ, ನಿರ್ಮಾಪಕ, ನಿರ್ದೇಶಕ ಆರ್.ಶೈನ್ , ನಾಯಕಿ ನಟಿ ಪೂಜಾ ಕೊಟ್ಟೂರ, ಹರೀಶ ಪತ್ತಾರ, ಸಂಗನಗೌಡ ಕುರುಡಗಿ, ರವಿವರ್ಮ, ಸಂತೋಷ ಮುಂಡರಗಿ, ರಾಜಕುಮಾರ ಪಾಟೀಲ ಸಿದ್ದಾರ್ಥ ಜಾಲಿಹಾಳ, ರಂಗಸ್ವಾಮಿ ಜಿ, ಬಸು ಕಲಾವಿದರು, ತಂತ್ರಜ್ಞರು ಹಾಜರಿದ್ದರು.

ಗ್ರಾಮೀಣ ಕಥಾ ಸಾರದ ಹಿನ್ನಲೆ ಹೊಂದಿರುವ ಈ ಚಿತ್ರದ ಕಥೆ ವಿಭಿನ್ನವಾಗಿದ್ದು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಿ ಹರಸಲಿ. ಕುಟುಂಬದ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ ಇದಾಗಿದೆ ಎಂದು ನಿರ್ದೇಶಕ ಆರ್.ಶೈನ್ ಹೇಳಿದರು. ಚಿತ್ರೀಕರಣ ಇದೇ ತಿಂಗಳು ಆರಂಭಗೊಳ್ಳಲಿದೆ, ಈಗಾಗಲೇ ಕಲಾವಿದರು, ತಂತ್ರಜ್ಞರ ಆಯ್ಕೆ ಮುಗಿದಿದ್ದು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಕಲಾವಿದರು, ತಂತ್ರಜ್ಞರೇ ಇದ್ದಾರೆ, ಗಜೇಂದ್ರಗಡ, ಬಾದಾಮಿ, ಕೊಪ್ಪಳ ಸುತ್ತಮುತ್ತ ಹಾಗೂ ಮಲೆನಾಡು ಭಾಗದಲ್ಲಿ ಚಿತ್ರೀಕರಣವಾಗಲಿದೆ.

ಛಾಯಾಗ್ರಹಣ ರಂಗಸ್ವಾಮಿ ಜಿ, ವರ್ಣಾಲಂಕಾರ ದೇವರಾಜ್, ಸಾಹಸ ಗಣೇಶ ಬಿ, ಸಾಹಿತ್ಯ ಸುಭಾಷ ಬೆಟಗೇರಿ, ಸಂಗೀತ ರಾಘವ ಸುಭಾಸ, ಸಂಕಲನ ಸಿದ್ದಾರ್ಥ ಜಾಲಿಹಾಳ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರೊಡಕ್ಷನ್ ಮ್ಯಾನೇಜರ್ ರವಿವರ್ಮ, ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಆರ್.ಶೈನ್ ಮಾಡುತ್ತಿದ್ದಾರೆ. ಷಣ್ಮುಖಪ್ಪ ಆರ್.ಎಲ್.ಚಿತ್ರ ನಿರ್ಮಿಸುತ್ತಿದ್ದಾರೆ.

About the author

Adyot

Leave a Comment