ಸಿದ್ದಾಪುರದಲ್ಲಿ ಆರೋಗ್ಯ ಮೇಳ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ತಾಲೂಕಾ ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯದ 75ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ಅಚರಿಸಲಾಗುತ್ತಿದೆ ಇದರ ಅಂಗವಾಗಿ ಪ್ರತಿ ತಾಲೂಕಿನಲ್ಲಿ ಆರೋಗ್ಯಮೇಳವನ್ನು ಏರ್ಪಡಿಸಲಾಗುತ್ತಿದೆ ಸರಕಾರ ಸಾಕಷ್ಟು ಜನಪರ ಯೋಜನೆಗಳನ್ನು ತರುತ್ತಿದೆ ಅದರ ಉಪಯೋಗವನ್ನು ಜನರಿಗೆ ತಿಳಿಸುವ ಕೆಲಸವನ್ನು ಇಲಾಖೆಗಳು ಮಾಡಬೇಕು. ನಮ್ಮ ಆರೋಗ್ಯವನ್ನು ನಾವೆ ರಕ್ಷಿಸಿಕೊಳ್ಳಬೇಕು ಇಂದಿನ ಆಹಾರ ಪದ್ದತಿಯಿಮದ ಹಲವು ಖಾಯಿಲೆಗಳು ನಮ್ಮನ್ನು ಕಾಡುತ್ತಿವೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದರ ಮೂಲಕ ಸಾಕಷ್ಟು ಖಾಯಿಲೆಯನ್ನು ತಡೆಗಟ್ಟಬಹುದು. ಸರಕಾರ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರುತ್ತಿದೆ ಇದರಿಂದ 5 ಲಕ್ಷರೂ.ವರೆಗೆ ಉಚಿತ ಚಿಕಿತ್ಸೆ ದೊರಕುತ್ತದೆ. ಇದರ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಪಪಂ ಸದಸ್ಯರಾದ ಮಾರುತಿ ನಾಯ್ಕ,ಗುರುರಾಜ ಶಾನಬಾಗ,ನಂದನ ಬೋರ್ಕರ್,ತಹಸೀಲ್ದಾರ ಸಂತೋಷ ಭಂಡಾರಿ,ಡಾ.ಪ್ರಕಾಶ ಪುರಾಣಿಕ ಮುಂತಾದವರು ಉಪಸ್ಥಿತರಿದ್ದರು.
ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಡಾ.ನಾಡಿಗೇರ್ ಸ್ವಾಗತಿಸಿದರು.
ಇದೇ ವೇಳೇಯಲ್ಲಿ ಸಿದ್ದಾಪರ ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರತಿ ವರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಾ ಕೇಂದ್ರದಲ್ಲಿ ಕೆ.ಎಫ್.ಡಿ ಘಟಕ ಸ್ಥಾಪಿಸುವಂತೆ ತಾಲೂಕಾ ಆರೋಗ್ಯ ಇಲಾಖೆವತಿಯಿಂದ ತಾಲೂಕವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ ನಾಯ್ಕ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪಪಂ ಸದಸ್ಯ ಮಾರುತಿ ನಾಯ್ಕ ಹಾಗೂ ಕೆಲವು ಸದಸ್ಯರು, ಗ್ರಾಮೀಣ ಭಾಗದಲ್ಲಿ ಆರ್.ಟಿ.ಸಿ ಇಲ್ಲದಿದ್ದರೂ ವಾಸ್ತವ್ಯದ ದಾಖಲೆ ಇದ್ದರೆ ಸರಕಾರದ ಯೋಜನೆಗಳ ವಸತಿ ನೀಡಲಾಗುತ್ತಿದ್ದು ಇದನ್ನು ಪಟ್ಟಣದ ವ್ಯಾಪ್ತಿಗೂ ಅನ್ವಯಿಸಬೇಕು ಎಂದು ಮನವಿ ಸಲ್ಲಿಸಿದರು.

########
ಹಾರ್ಸಿಕಟ್ಟಾದಲ್ಲಿ ದಕ್ಷಿಣವಲಯ ಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ
ತಾಲೂಕಿನ ಹಾರ್ಸಿಕಟ್ಟಾದ ಯೂತ್ ಸ್ಪೋಟ್ರ್ಸ್ ಕ್ಲಬ್ ಇವರ ಆಶ್ರಯದಲ್ಲಿ ದಕ್ಷಿಣ ವಲಯ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ಉಚಿತ ವಾಲಿಬಾಲ್ ಪಂದ್ಯಾವಳಿ ಹಾರ್ಸಿಕಟ್ಟಾದಲ್ಲಿ ಏ.29ರಂದು ಸಂಜೆ 6ರಿಂದ ಆರಂಭಗೊಳ್ಳಲಿದೆ ಎಂದು ಪಂದ್ಯಾವಳಿಯ ಸ್ವಾಗತ ಸಮಿತಿ ಮುಖ್ಯಸ್ಥ ಎಸ್.ಆರ್.ಹೆಗಡೆ ಕುಂಬಾರಕುಳಿ ಹೇಳಿದರು.

ದಕ್ಷಿಣ ವಲಯಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಭಾರಿಗೆ ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ವಿವಿಧ ರಾಜ್ಯದ ಖ್ಯಾತ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಸ್ಥಳಿಯ ಎಲ್ಲ ಧರ್ಮದ, ಜಾತಿಯ ಯುವಕರು ಹಾಗೂ ಕ್ರಿಡಾಸಕ್ತರು ಸಮನ್ವಯತೆಯಿಂದ ಕಳೆದ ಒಂದು ತಿಂಗಳಿನಿಂದ ಪಂದ್ಯಾವಳಿಯ ಯಶಸ್ಸಿಗಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೆ ವಿವಿಧ ಸಮಿತಿಗಳನ್ನು ಸಹ ರಚಿಸಲಾಗಿದೆ. ಪಂದ್ಯಾವಳಿಗೆ ಐದರಿಂದ ಆರು ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ವಾಹನ ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕೇರಳ, ಸೂನಿ ಫ್ರೆಂಡ್ಸ್, ರೈಲ್ವೇಸ್, ಹೈದರಾಬಾದ್, ತಮಿಳುನಾಡು ಹಾಗೂ ಮಂಗಳೂರು ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ಪಂದ್ಯಾವಳಿ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅಧ್ಯಕ್ಷತೆವಹಿಸುವರು. ಜಯಾನಂದ ಜೆ.ಪಟಗಾರ ಕುಮಟಾ, ಶ್ರೀಪಾದ ಹೆಗಡೆ ಕಡವೆ, ಮಧು ಬಂಗಾರಪ್ಪ. ಗೋಪಾಲಕೃಷ್ಣ ಬೇಳೂರು, ಕೆ.ಜಿ.ನಾಗರಾಜ್, ವಸಂತ ನಾಯ್ಕ, ವಿ.ಎನ್.ನಾಯ್ಕ ಬೇಡ್ಕಣಿ, ಶಿರಸಿ ಡಿವೈಎಸ್‍ಪಿ ರವಿ ನಾಯ್ಕ, ಉಪೇಂದ್ರ ಪೈ, ಜಿ.ಬಿ.ಭಟ್ಟ ನೆಲೆಮಾಂವ, ಕೆ.ಕೆ.ನಾಯ್ಕ, ಶ್ರೀಧರ ಪಿ.ಹೆಗಡೆ ಬೆಂಗಳೂರು, ತಹಸೀಲ್ದಾರ ಸಂತೋಷ ಭಂಡಾರಿ, ವಿವೇಕ್ ಭಟ್ಟ ಗಡಿಹಿತ್ಲ, ಸಿಪಿಐ ಕುಮಾರ ಕೆ, ರಾಜೇಶ ನಾಯ್ಕ ಮತ್ತಿತರರು ಉಪಸ್ಥಿತರಿರುತ್ತಾರೆ.ಏ.29ರಂದು ಸಂಜೆ 6ಕ್ಕೆ ಹಾರ್ಸಿಕಟ್ಟಾ ಮುಖ್ಯರಸ್ತೆಯಿಂದ ಆಟಗಾರರನ್ನು, ಉದ್ಘಾಟಕರು, ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳನ್ನು ಡೊಳ್ಳು,ಕೋಲಾಟ ಮತ್ತು ಮೆರವಣಿಗೆಯ ಮೂಲಕ ಆಡದ ಮೈದಾನಕ್ಕೆ ಕರೆತರಲಾಗವುದು ಎಂದು ಮಾಹಿತಿ ನೀಡಿದರು.
ಯೂತ್ ಸ್ಪೋಟ್ರ್ಸ್ ಕ್ಲಬ್‍ನ ಮುಖ್ಯಸ್ಥ ಅಶೋಕ ನಾಯ್ಕ ಹಾರ್ಸಿಕಟ್ಟಾ, ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ಸಿದ್ಧಾರ್ಥ ಗೌಡರ್ ಮುಠ್ಠಳ್ಳಿ, ಪ್ರಚಾರ ಸಮಿತಿಯ ರಮೇಶ ಹೆಗಡೆ ಹಾರ್ಸಿಮನೆ ಉಪಸ್ಥಿತರಿದ್ದರು

About the author

Adyot

Leave a Comment