ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಲಯನ್ಸ್ ಕ್ಲಬ್ ಗೆ ಈಗ ಸುವರ್ಣ ಸಂಭ್ರಮ.
1972-73ರಲ್ಲಿ ವೈದ್ಯಕೀಯ ಸೇವೆಗಾಗಿ ಇಲ್ಲಿಗೆ ಆಗಮಿಸಿ ಇಲ್ಲಿಯವರೇ ಆಗಿಹೋದ ದಿ.ಡಾ.ಎಂ.ಪಿ.ಶೆಟ್ಟಿ ಇದರ ಸ್ಥಾಪಕರು.ಈಡೀ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಸ್ಥಾಪಿತಗೊಂಡಿದ್ದು ಸಿದ್ದಾಪುರ ಲಯನ್ಸ್ ಕ್ಲಬ್.ನಂತರದ ದಿನದಲ್ಲಿ ಹಲವು ಪ್ರಥಮಗಳನ್ನು ಈ ಲಯನ್ಸ್ ಕ್ಲಬ್ ಮಾಡಿದ್ದು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕ್ಲಬ್ ಗೆ ವಿಶೇಷ ಮನ್ನಣೆ ಇದೆ.
ಲಯನ್ಸ್ ಸ್ಥಾಪಿತವಾಗುವ ಸಮಯದಲ್ಲಿ ಸಿದ್ದಾಪುರ ಗ್ರಾಮೀಣ ಭಾಗದ ಪುಟ್ಟಪಟ್ಟಣ.ಗ್ರಾಮೀಣ ಭಾಗದಲ್ಲಿದ್ದು ಜಿಲ್ಲೆಯ ಮೊದಲ ಲಯನ್ಸ ಕ್ಲಬ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸ್ಥಳೀಯ ಲಯನ್ಸ ಕ್ಲಬ್ ಕಳೆದ 50 ವರ್ಷಗಳಲ್ಲಿ ತನ್ನ ಜನಪರವಾದ, ಸಾಮಾಜಿಕ ಸೇವೆಯ ಮೂಲಕ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ
ಉ.ಕ.ಜಿಲ್ಲೆಯ ಮೊಟ್ಟಮೊದಲ ಲಯನ್ಸ್ ಕ್ಲಬ್,ಗೋವಾ ಮತ್ತು ಉತ್ತರಕರ್ನಾಟಕ ಭಾಗದ ಲಯನ್ಸ್ ಜಿಲ್ಲೆಯ ಮೊದಲ ಗವರ್ನರ್ ಆದವರು ಡಾ.ರವಿ ಹೆಗಡೆ ಹೂವಿನಮನೆ,ದಕ್ಷಿಣಭಾರತದಲ್ಲೆ ಮೊದಲಬಾರಿಗೆ ವೃತ್ತಿಪರ ತರಬೇತಿ ಮತ್ತು ವಸತಿ ಶಾಲೆ ನಡೆಸುತ್ತಿರುವ ಮೊದಲ ಕ್ಲಬ್ ಹಾಗೆ ಭಾಷಾಪ್ರಯೋಗಾಲಯವನ್ನು ಸ್ಥಾಪಿಸಿರುವ ಏಕೈಕ ಲಯನ್ಸ್ ಕ್ಲಬ್.
ಈಗ ಪ್ರಾಂತೀಯ ಧರ್ಮಾಧ್ಯಕ್ಷರಾಗಿರುವ
ಪೀಟರ್ ಮಚಾಡೋ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡ,ಸಹಕಾರ ರತ್ನ ಪ್ರಶಸ್ತಿ ಪುರಸ್ಕ್ರತ ಆರ್.ಎಂ.ಹೆಗಡೆ ಬಾಳೇಸರ ಈ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದವರು.
ಕಳೆದ 50 ವರ್ಷಗಳಲ್ಲಿ 15 ಸಾವಿರ ಉಚಿತ ಕಣ್ಣಿನ ತಪಾಸಣಾ ಶಿಬಿರ,500ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರ ನಡೆಸುವದರ ಜೊತೆಗೆ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಒದಗಿಸಲಾಗಿದೆ. ತಾಲೂಕಿನಲ್ಲಿ 3 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವದರ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದೆ. ಕೊವಿಡ್ ಸಂದರ್ಭದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಹಸ್ತ ನೀಡಿದೆ.
ಕ್ಲಬ್‍ಗೆ ಲಯನ್ಸ ಅಂತಾರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡಿದ್ದು
ಈವರೆಗೆ 7 ಅಂತಾರಾಷ್ಟ್ರೀಯ ನಿರ್ದೇಶಕರು, 140ಕ್ಕೂ ಹೆಚ್ಚು ಜಿಲ್ಲಾ ಗವರ್ನರ್ ಭೇಟಿ ನೀಡಿದ್ದಾರೆ.
ಸಾಕಷ್ಟು ಜನರು ಲಯನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಲಯನ್ಸ್ ಬೆಳವಣಿಗೆಗೆ ಕಾರಣರಾಗಿದ್ದಾರೆ 2015-16ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಸತೀಶ ಗೌಡರ್ ಲಯನ್ಸ್ ಬಾಲಭವನದ ನವೀಕರಣ ಹಾಗೂ ಮೇಲಂತಸ್ತನ್ನು ಕಟ್ಟಿದ್ದು ಇದರ ಬಾಡಿಗೆಯಿಂದ ಸಾಕಷ್ಟು ಅನುಕೂಲವಾಗಿದೆ ಮೇ.13 ಮತ್ತು 14ರಂದು ನಡೆಯುವ ಸುವರ್ನಮಹೋತ್ಸವ ಸವಿನೆನಪಿನಲ್ಲಿ ಈ ಕ್ಲಬ್‍ನ ಸಂಸ್ಥಾಪಕ ಅಧ್ಯಕ್ಷರಾಗಿ ತಮ್ಮ ಮರಣದವರೆಗೂ ಹಲವು ಕೊಡುಗೆಗಳನ್ನು ನೀಡಿದ ಡಾ|ಎಂ.ಪಿ.ಶೆಟ್ಟಿಯವರ ಸ್ಮರಣೆಯಲ್ಲಿ ಗೋಲ್ಡನ್ ಜ್ಯೂಬಿಲಿ ಹಾಲ್ ನಿರ್ಮಿಸಲಾಗುತ್ತಿದೆ.
ದಿ.-13 ಶುಕ್ರವಾರ ದಿ.-14 ಶನಿವಾರ ಪಟ್ಟಣದ ನೆಹರೂ ಮೈದಾನದಲ್ಲಿ ಸುವರ್ಣಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಅಲ್ಲದೆ ಶನಿವಾರ ಬೆಳಿಗ್ಗೆ ಶಿವಮೊಗ್ಗ ನಾರಾಯಣ ಹೃದಯಾಲಯದ ತಜ್ಞವೈದ್ಯರಿಂದ ಉಚಿತ ಹೃದಯತಪಾಸಣಾ ಶಿಬಿರ ನಡೆಸಲಾಗುತ್ತಿದೆ
ಸಮಾಜಮುಖಿ ಕೆಲಸ ಮಾಡುತ್ತಿರುವ ಸಿದ್ದಾಪುರ ಲಯನ್ಸ್ ಕ್ಲಬ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.