ಆದ್ಯೋತ್ ಸುದ್ದಿನಿಧಿ:
ಆಹಾರವನ್ನು ಅರಸಿ ಪಟ್ಟಣಕ್ಕೆ ಬಂದ ಕಾಡುಕುರಿ ಮರಿಯೊಂದು ನಾಯಿ ದಾಳಿಗೆ ತುತ್ತಾಗಿ ಮೃತಪಟ್ಟ ಘಟನೆ ಪಟ್ಟಣದ ಚಂದ್ರಗುತ್ತಿ ಸರ್ಕಲ್ ನಲ್ಲಿ ಶನಿವಾರ ಸಂಜೆ ನಡೆದಿದೆ ಸುಮಾರು ಎರಡರಿಂದ ಎರಡುವರೆ ವರ್ಷ ಪ್ರಾಯದ ಕಾಡು ಕುರಿಮರಿ ಇದಾಗಿದ್ದು ಒಂಟಿಯಾಗಿ ಬಂದು ಗಾಬರಿಗೊಂಡು ಓಡುತ್ತಿರುವಾಗ ನಾಯಿಗಳು ಬೆನ್ನಟ್ಟಿದ ಪರಿಣಾಮ ತಪ್ಪಿಸಿಕೊಳ್ಳಲು ಆಗದೆ ನಾಯಿಯ ಬಾಯಿಗೆ ಸಿಲುಕಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು
ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.