ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಸಿದ್ದಾಪುರ ನೆಹರೂ ಮೈದನಾದಲ್ಲಿ ಸ್ಥಳೀಯ ಲಯನ್ಸ್ ಕ್ಲಬ್‍ನ ಸುವರ್ಣಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಉಚಿತ ಹೃದಯ ತಪಾಸಣಾ ಶಿಬಿರ,ಯಕ್ಷಗಾನ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಚಲನಚಿತ್ರ ನಟ ಶ್ರೀನಾಥ ಮಾತನಾಡಿ,ಸಿದ್ದಾಪುರಕ್ಕೂ ನನಗೂ ಅವಿನಾವಭಾವ ಸಂಬಂಧವಿದೆ ಇಲ್ಲಿಯ ಅಂಧರ ಶಾಲೆಯ ಸಾಕಷ್ಟು ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆನೆ ಇಲ್ಲಿರುವ ಎಲ್ಲಾ ಸಂಘಟನೆಗಳೂ ಸಕ್ರೀಯವಾಗಿದೆ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ನಾವು ಸಿನೇಮಾ ನಟರು ಎಲ್ಲರಿಗಿಂತ ದೊಡ್ಡವರಲ್ಲ ನಮ್ಮನ್ನು ಬೆಳೆಸಿದ ಜನರು ದೊಡ್ಡವರು. ಸಂಘಟನೆಗಳ,ಜನರಿಂದಾಗಿ ಸಿನೇಮಾ ನಟರು ರೂಪುಗೊಳ್ಳುತ್ತಾರೆ ಹೀಗಾಗಿ ಸಿನೇಮಾ ನಟರಿಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಒಂದು ಊರು ಅಭಿವೃದ್ಧಿಯಾಗಲು ಸರಕಾರದ ಭಾಗವಾಗಿ ಜನಪ್ರತಿನಿಧಿಗಳು ಎಷ್ಟು ಮುಖ್ಯವೋ ಆ ಭಾಗದ ಸಾಮಾಜಿಕ ಸಂಘಟನೆಗಳೂ ಅಷ್ಟೆ ಮುಖ್ಯವಾಗಿರುತ್ತಾರೆ. ಕೇವಲ ರಾಜಕೀಯ ವ್ಯಕ್ತಿಗಳಿಂದ ಎಲ್ಲವೂ ಸಾದ್ಯವಿಲ್ಲ ಎಲ್ಲರೂ ಕೈಜೋಡಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ.ಸಮಾಜ ಎನ್ನುವುದು ಒಂದು ಕುಟುಂಬ ಇದ್ದಂತೆ ವ್ಯಕ್ತಿಗೆ ಸಂಸ್ಕಾರ ನೀಡಿದಂತೆ ಸಮಾಜಕ್ಕೂ ಸಂಸ್ಕಾರದ ಅವಶ್ಯಕತೆ ಇರುತ್ತದೆ. ಲಯನ್ಸ್ ಸಾಮಾಜಿಕ ಕಾರ್ಯಮಾಡುವುದರಲ್ಲಿ ಮಂಚೂಣಿಯಲ್ಲಿರುವ ಸಂಸ್ಥೆ ಲಯನ್ಸ್ ಉದ್ದೇಶವನ್ನು ಸ್ಥಳೀಯ ಲಯನ್ಸ್ ಕ್ಲಬ್ ಅತ್ಯುತ್ತಮವಾಗಿ ಕಾರ್ಯಗತಗೊಳಿಸುತ್ತಿದೆ. ಶೈಕ್ಷಣಿಕ,ಪರಿಸರ,ಆರೋಗ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ರಚನಾತ್ಮಕ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ,ಧರ್ಮಶ್ರೀ ಫೌಂಡೇಷನ್ ಅಧ್ಯಕಲ್ಷ ರಾಮಮೋಹನ ಹೆಗಡೆ ಹೂವಿನಮನೆ, ಬ್ಲೂಮ ವ್ಯಾಲ್ಯುಕಾರ್ಪೋರೇಷನ ಸಹಸಂಸ್ಥಾಪಕಿ ಸಂಪೂರ್ಣ ಹೆಗಡೆ ಮಾತನಾಡಿದರು.
ವೇದಿಕೆಯಲ್ಲಿ ಡಾ.ರವಿ ಹೆಗಡೆ ಹೂವಿನಮನೆ,ರಾಘವೇಂದ್ರ ಭಟ್ಟಕಲ್ಲಾಳ ಉಪಸ್ಥಿತರಿದ್ದರು.
ಲಯನ್ಸ್ ಅಧ್ಯಕ್ಷೆ ಶಯಾಮಲಾ ಹೆಗಡೆ ಸ್ವಾಗತಿಸಿದರು. ಲ.ಸಿ.ಎಸ್.ಗೌಡರ್ ನಿರೂಪಣೆ ಮಾಡಿದರು. ಅರ್ಚನಾ ಪ್ರಾರ್ಥನೆ ಹಾಡಿದರು.
ಇದೇ ಸಂದರ್ಭದಲ್ಲಿ ಅನಾರೋಗ್ಯ ಪೀಡಿತಳಾದ ಶಾರಾದ ಸುರೇಶ ಜೋಗಿಯವರಿಗೆ ಧರ್ಮಶ್ರೀ ಫೌಂಡೇಷನ್‍ವತಿಯಿಂದ ಹತ್ತುಸಾವಿರರೂ. ಚೆಕ್‍ನ್ನು ಶ್ರೀನಾಥ ಮೂಲಕ ವಿತರಿಸಲಾಯಿತು.
ನಂತರ ಆಯ್ದ ಕಲಾವಿದರಿಂದ ಗದಾಯುದ್ಧ ಯಕ್ಷಗಾನ ಪ್ರದರ್ಶನ ನಡೆಯಿತು.
—–
ಗ್ರೀನ್ ವ್ಯಾಲಿ ಸಂಸ್ಥೆಯ ರಾಘವೇಂದ್ರ ಶಾಸ್ತ್ರೀ,ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಆರ್.ಎಂ.ಹೆಗಡೆ ಬಾಳೆಸರ,ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ,ಭಾರತೀಯ ಸೇನೆಯ ಕ್ಯಾಪ್ಟನ್ ರಾಜೇಶ ನಾಯ್ಕ,ಧರ್ಮಶ್ರೀ ಫೌಂಡೇಷನ್ ಅಧ್ಯಕ್ಷ ರಾಮಮೋಹನ ಹೆಗಡೆ ಹೂವಿನಮನೆ,ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಎಸ್.ಆರ್.ಹೆಗಡೆ ಹಾರ್ಸಿಮನೆ,ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡು,ರಾಷ್ಟ್ರಪ್ರಶಸ್ತಿ ಪುರಸ್ಕøತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ,ಮಹಿಲಾ ಸಾಧಕಿ ಸಂಪೂರ್ಣ ಹೆಗಡೆಯವರನ್ನು ಲಯನ್ಸ್ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.