ಸಿದ್ದಾಪುರದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ, ಯಲ್ಲಾಪುರದಲ್ಲಿ ಸಿಡಿಲಿಗೆ ಯುವಕ ಬಲಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಹೆಗ್ಗೋಡುಮನೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಹೆಗ್ಗೋಡುಮನೆ ಗ್ರಾಮದ ನಾಗರತ್ನ ಮಂಜುನಾಥ ಚನ್ನಯ್ಯ ಪತಿಯಿಂದ ಕೊಲೆಯಾದ ದುರ್ದೈವಿ ಯಾಗಿದ್ದು ಕೊಲೆ ಮಾಡಿಧ ಅವಳ ಗಂಡ ಮಂಜುನಾಥ ಕೆರಿಯಾ ಚನ್ನಯ್ಯನನ್ನು ಪೊಲೀಸ್ ರು ಬಂಧಿಸಿದ್ದಾರೆ.

ಗಂಡ- ಹೆಂಡತಿ ದಿನನಿತ್ಯ ಜಗಳವಾಡುತ್ತಿದ್ದು ಮಂಜುನಾಥ ಮಧ್ಯವ್ಯಸನಿ ಎನ್ನಲಾಗಿದೆ. ಆಧಾರ ಕಾರ್ಡ ಹುಡುಕಿಕೊಡುವಂತೆ ಹೆಂಡತಿಯನ್ನು ಪೀಡಿಸಿದವನು ಅವಳು ಈಗ ಹುಡುಕಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ರೊಚ್ಚಿಗೆದ್ದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸಿದ್ದಾಪುರ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
######
ಯಲ್ಲಾಪುರದಲ್ಲಿ ಸಿಡಿಲು ಬಡಿದು ಯುವಕ ಸಾವು
ಯಲ್ಲಾಪುರ ತಾಲೂಕಿನ ಮದನೂರುವಗ್ರಾಪಂ ವ್ಯಾಪ್ತಿಯ ಖಂಡ್ರೇನಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ 21 ವರ್ಷದ ಯುವಕನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮದನೂರು ಗ್ರಾಮದ ಗೌಳವಾಡದ ವ್ಯಕ್ತಿ ಆನಂದ ತಂದೆ ದೊಂಡು ಬರಗಾಡೆ ಮದನೂರು ಗ್ರಾ.ಪಂ ವ್ಯಾಪ್ತಿಯ ಖಂಡ್ರೇನ್ ಕೊಪ್ಪದಲ್ಲಿರುವ ತನ್ನ ಜಮೀನಿನಲ್ಲಿರುವಾಗ್ಗೆ
ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತನು ವಿದ್ಯಾರ್ಥಿಯಾಗಿದ್ದು ಕಾಲೇಜಿಗೆ ಹೋಗುತ್ತಿದ್ದು ಬಿಡುವಿನ ಸಮಯದಲ್ಲಿ ತಮ್ಮ ಹೊಲದ ಕೆಲಸಕ್ಕೆ ಹೋಗುತ್ತಿದ್ದನೆಂದು ಹೇಳಲಾಗುತ್ತಿದೆ.

About the author

Adyot

Leave a Comment