ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಶಿರಸಿಯ ತೋಟಗಾರಿಕಾ ಕಲ್ಯಾಣ ಮಂಟಪದಲ್ಲಿ ಉ.ಕ.ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳಿಯ ಜಿಲ್ಲಾ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಭಾಗವಹಿಸಿದ್ದ ಸೊಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ,ಹಿಂದೂ ದೇವಾಲಯಗಳು ಭಕ್ತರ ಮೂಲಕ ನಡೆಯುತ್ತಿದೆ. ದೇವಾಲಯಗಳ ಸ್ವಾಯತ್ತತೆ ಕುರಿತು ಕಳೆದ 40 ವರ್ಷದಿಂದ ಹೋರಾಟ ನಡೆಯುತ್ತಿದೆ. ಹಿಂದೆ ಬಿಜೆಪಿ ಸರಕಾರ ಇರುವಾಗ ರಾಮಾಜೋಯಿಸ್ ಸಮಿತಿ ರಚಿಸಿತ್ತು ಆದರೆ ಅದೇ ಸರಕಾರ ಸಮಿತಿಯ ವರದಿಯನ್ನು ಜಾರಿಗೆ ತರುತ್ತಿಲ್ಲ ವಕ್ಪ್ ಮಂಡಳಿಗೆ ಸ್ವಾಯತ್ತತೆ ಕೊಡುತ್ತಿರಿ ಹಿಂದೂ ದಾರ್ಮಿಕ ಪರಿಷತ್‍ಗೆ ಯಾಕೆ ಸ್ವಾಯತ್ತತೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಹಿಮದೆ ರಾಜಮಹಾರಾಜರು ದೆವಾಲಯವನ್ನು ಕಟ್ಟಿದ್ದಾರೆ,ಜನಸಾಮಾನ್ಯರು ಕಟ್ಟಿದ್ದಾರೆ ವ್ಯಕ್ತಿಗಳು ಕಟ್ಟಿದ್ದಾರೆ ಸರಕಾರ ಯಾವುದೇ ದೇವಾಲಯವನ್ನು ಕಟ್ಟಿಲ್ಲ ಆದರೆ ಅದನ್ನು ವಶಕ್ಕೆ ಪಡೆಯುತ್ತದೆ 645 ದೇವಾಲಯಗಳಿಗೆ ಆಡಳಿತ ಮಂಡಳಿ ತರಲು ಹೊರಟಿದೆ ಇದನ್ನು ಎಲ್ಲರೂ ವಿರೋಧಿಸಬೇಕು ಹಿಂದೂ ಸಮಾಜ ಸಂಘಟಿತರಾಗಬೇಕು ಅಧಿಕಾರಿಗಳು ದೇವಾಲಯ ನಡೆಸುವುದು ಸರಿಯಲ್ಲ ಸರಕಾರ ಹೊಸಕಾನೂನು ತರುವ ಮೂಲಕ ಅನಿಶ್ಚಿತತೆಯನ್ನು ಪರಿಹರಿಸಬೇಕು ಎಂದು ಹೇಳಿದರು.
ಹುಬ್ಬಳ್ಳಿಯ ದಯಾನಂದ ಗುರುಕುಲದ ಶ್ರೀ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ- ಸರಕಾರ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಬಾರದು ನಮ್ಮ ದೇವಸ್ಥಾನದಲ್ಲಿ ನಮಗೆ ಅಧಿಕಾರವಿಲ್ಲ ಯಾವ ಸರಕಾರವೂ ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಹಿಂದೂಗಳು ಸಂಘಟಿತರಾಗಿ ಅಂದೋಲನ ಮಾಡಬೇಕು ಎಂದು ಹೇಳಿದರು.
ಸ್ವಾದಿ ಜೈನಮಠದ ಜಗದ್ಗುರು ಅಕಲಂಕಕೆಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ-ಧಾರ್ಮಿಕ ವಿಷಯದಲ್ಲಿ ರಾಜಕೀಯ ಪ್ರವೇಶವಾಗಬಾರದು ಪರಂಪರೆಗೆ ದಕ್ಕೆ ಬರದಂತೆ ದೇವಸ್ತಾನವನ್ನು ನಡೆಸಲು ಅಧಿಕಾರಿಗಳಿಗೆ ಆಗುವುದಿಲ್ಲ ಎಂದು ಹೇಳಿದರು
ಜಡೆ ಸಂಸ್ಥಾನಮಠದ ಶ್ರೀ ಮ.ನಿ.ಪ್ರ.ಮಹಾಂತ ಸ್ವಾಮೀಜಿ-ಹಿಂದೂಗಳು ಜಾತಿ-ಮತ-ಪಂಥ ಎಂದು ಕಿತ್ತಾಡಿಕೊಳ್ಳದೆ ಒಗ್ಗಟ್ಟಿನಿಂದ ಹೋರಾಡಿ ಕಾನೂನಿನ ಮೂಲಕ ದೇವಾಲಯಗಳ ಸ್ವಾಯತ್ತತೆ ಕಾಪಾಡಿಕೊಳ್ಳಬೇಕು.
ಸಿದ್ದಾಪುರ ಶಿರಳಗಿಶ್ರೀಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ-ಹಿಂದೂ ಸಮಾಜದ ಆಚರಣೆಗೆ ತೊಂದರೆಯಾದರೆ ವಿರೋಧ ವ್ಯಕ್ತಪಡಿಸಬೇಕು ಭಗವದ್ಗೀತೆ,ಯಜ್ಞಯಾಗಾದಿಗಳ ಬಗ್ಗೆ ಮಾತನಾಡಿದಾಗಲೂ ಧ್ವನಿ ಎತ್ತುವುದಿಲ್ಲ ಧ್ವನಿ ಎತ್ತುವ ಸ್ವಬಾವ ಹಿಂದುಗಳಲ್ಲಿ ಬರಬೇಕು
ಸುಪ್ರಿಂಕೋರ್ಟ ವಕೀಲ ಅರುಣಾಚಲ ಹೆಗಡೆ-ಹಳೆಯ ಬಾಂಬೆ ಪಬ್ಲಿಕ್ ಆಕ್ಟ್ ದೇವಾಲಯಗಳಿಗೆ ಸ್ವಾಯತ್ತತೆ ನೀಡಿತ್ತುದೇವಾಲಯದ ಪರಂಪರೆ ಸಂಸ್ಕøತಿ ಸ್ವಾಯತ್ತತೆ ಉಳಿಸಿಕೊಂಡು ಬರಬೇಕು.ಕರ್ನಾಟಕದ ಉಚ್ಚ ನ್ಯಾಯಾಲಯ ಎರಡು ಬಾರಿ ರದ್ದುಪಡಿಸಿದ ಕಾನೂನನ್ನು ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಸುಪ್ರೀಂಕೋರ್ಟಲ್ಲಿ ಸರ್ಕಾರ ಕಳಿಸಿದ ಮೇಲ್ಮನವಿಯನ್ನು ಹಿಂಪಡೆಯಬೇಕು
ಸಮಾವೇಶದಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳು
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಹಿಂದೂ ದೇವಾಲಯಗಳನ್ನು ಭಕ್ತರ ಕೈಗೆ ಕೊಡುವುದಾಗಿ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಮಹಾಮಂಡಳವು ಸ್ವಾಗತಿಸುತ್ತದೆ. ಜೊತೆಯಲ್ಲಿ ಈ ರೀತಿ ಭಕ್ತರ ಕೈಗೆ ಕೊಡುವ ಕ್ರಮವನ್ನು ಅತೀ ಶೀಘ್ರದಲ್ಲಿ ಜಾರಿಗೊಳಿಸಬೇಕು.
ರಾಜ್ಯದ ಹಿಂದೂಗಳಿಗೆ ದೇವಾಲಯಗಳ ಪರಂಪರೆ, ಶತಮಾನಗಳಿಂದ ನಡೆದು ಬಂದ ಸಂಪ್ರದಾಯ, ಧಾರ್ಮಿಕ ಸ್ವಾತಂತ್ರಕ್ಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ಹೊಸ ಸರ್ವ ಸಮ್ಮತವಾದ ಕಾನೂನನ್ನು ಜಾರಿಗೆ ತರಬೇಕು
ಹೊಸ ಸರ್ವ ಸಮ್ಮತ ಕಾನೂನು ಜಾರಿಗೆ ಬರುವವರೆಗೆ ದೇವಸ್ಥಾನಗಳ ಆಡಳಿತ ಮಂಡಳಿ ನೇಮಕಾತಿ, ಆಡಳಿತಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ನೇಮಕಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.ಸರ್ವೋಚ್ಚ ನ್ಯಾಯಾಲಯದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮದ ಸಂವಿಧಾನ ಬದ್ಧತೆ ಕುರಿತು ವಿಚಾರಣೆಗೆ ಬಾಕಿ ಇರುವ ಮೇಲ್ಮನವಿಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು.ದೇವಸ್ಥಾನಗಳ ಸ್ವಾಯತ್ತತೆ ಇಟ್ಟುಕೊಳ್ಳುವ ದೃಷ್ಟಿಯಿಂದ ಇಡೀ ಹಿಂದೂ ಸಮಾಜ ಸಂಘಟಿತರಾಗಲು ಜಾಗೃತರಾಗಬೇಕೆಂದು ಈ ಸಮಾವೇಶವು ಹಿಂದೂ ಸಮಾಜಕ್ಕೆ ಕರೆ ನೀಡುತ್ತದೆ.