ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಎಡವಟ್ಟನ್ನು ಮಾಡಿದ್ದು ಕಾರವಾರ ಪಟ್ಟಣದ ಕೆಲವು ರಸ್ತೆಗಳ ನಾಮಫಲಕವನ್ನು ಕನ್ನಡದ ಜೊತೆಗೆ ಮರಾಠಿ ಭಾಷೆಯಲ್ಲೂ ಬರೆಯುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ನಗರಸಭೆ ಹಿಂದಿ ಲಿಪಿಯಲ್ಲಿ ಮರಾಠಿ ಭಾಷೆ ಬರೆದು ನಾಮಫಲಕ ಹಾಕಿದೆ.
ಪಟ್ಟಣದ ಮುರಳಿಧರ್ ಮಠ ರಸ್ತೆ, ಗ್ರೀನ್ ಸ್ಟ್ರೀಟ್ ರಸ್ತೆ ಇತರೆ ಕಡೆಗಳಲ್ಲಿ ನಾಮಫಲಕಗಳನ್ನ ಹಾಕಲಾಗಿದೆ.
ನಗರಸಭೆಯ ಈ ಪ್ರಮಾದದಿಂದ ಭಾಷಾ ವಿವಾದಕ್ಕೆ ಕಿಡಿ ಇಟ್ಟಿದೆ. ಕನ್ನಡದ ನೆಲದಲ್ಲಿ ಮರಾಠಿ ಭಾಷೆಯ ನಾಮಫಲಕವನ್ನು ಅಳವಡಿಸುವ ಮೂಲಕ ಬೆಳಗಾವಿಗೆ ಸೀಮಿತವಾಗಿದ್ದ ಮರಾಠಿ ಭಾಷಾ ವಿವಾದ ಉತ್ತರ ಕನ್ನಡದಲ್ಲೂ ಪ್ರಾರಂಭಿಸುತ್ತಿದೆ.ಮರಾಠಿ ಭಾಷೆಯಲ್ಲಿ ನಾಮಫಲಕ ಬರೆಸುವಂತೆ ಯಾವುದೇ ಒತ್ತಡ ಇಲ್ಲದಿದ್ದರೂ ನಗರಸಭೆಯ ಈ ನಿರ್ಣಯ ಪಟ್ಟಣಿಗರಲ್ಲೂ ಆಶ್ಚರ್ಯ ಹುಟ್ಟಿಸಿದೆ.
ತಕ್ಷಣ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಭಾಷಾ ವಿವಾದ ಅಡಿಯಲ್ಲಿ ಮುಂಬರುವ ದಿನಗಳಲ್ಲಿ ಆಗಬಹುದಾದ ಸಮಸ್ಯೆಗಳನ್ನು ತಕ್ಷಣ ಪರಿಹರಿಸ ಬೇಕಾಗಿದೆ ಇಲ್ಲದಿದ್ದರೆ ಕರಾವಳಿ ಜಿಲ್ಲೆಯಲ್ಲಿ ಅಶಾಂತಿ ಮೂಡುವ ಸಾಧ್ಯತೆ ಇದೆ.