ಜಿಲ್ಲೆಯ ಸಿದ್ದಾಪುರದ ಪ್ರಮುಖ ಸಹಕಾರಿ ಸಂಘ ಟಿ.ಎಂ.ಎಸ್ ನ ಅಮೃತ ಮಹೋತ್ಸವ ಜನವರಿ 11 ಮತ್ತು 12 ರಂದು ಟಿ.ಎಂ.ಎಸ್ ಆವರಣದ ದಿ. ಶಿವರಾಮ ಹೆಗಡೆ ವೇದಿಕೆಯಲ್ಲಿ ನಡೆಯಲಿದೆ.
1947 ರಲ್ಲಿ ಪ್ರಾರಂಭವಾದ ಟಿ.ಎಂ.ಎಸ್ ಸಿದ್ದಾಪುರ ಸಹಕಾರಿ ಕ್ಷೇತ್ರದಲ್ಲಿನ ಸಾಧನೆಗಳೊಂದಿಗೆ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ಜಿಲ್ಲೆಯ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲೊಂದಾದ ಸಿದ್ದಾಪುರ ಟಿ.ಎಂ.ಎಸ್ ಶ್ರೇಷ್ಠ ಸಹಕಾರಿ ಸಂಘ ಅನ್ನೋ ಪ್ರಶಸ್ತಿಯನ್ನೂ ಕೂಡ ತನ್ನದಾಗಿಸಿಕೊಂಡಿದೆ. ಸಂಘದಲ್ಲಿ ಸುಮಾರು 6000 ಸದಸ್ಯರಿದ್ದು ಸಂಘದ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಾರೆ. ಸಂಘ ಹಲವಾರು ವಿಭಾಗಗಳನ್ನ ತೆರೆದಿದ್ದು, ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸಂಘಕ್ಕೆ ಈಗ 75 ತುಂಬಿದ್ದು, ಸಂಭ್ರಮದ ಅಮೃತ ಮಹೋತ್ಸವ ನಡೆಯಲಿದೆ ಅಂತಾ ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ ಹೆಗಡೆ ಬಾಳೇಸರ ತಿಳಿಸಿದರು.