ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ರವಿವಾರ ಬೆಳಿಗ್ಗೆ ಯಲ್ಲಾಪುರ ಜೋಡಕೆರೆ ಚೆಕ್ ಪೋಸ್ಟ್ ಹತ್ತಿರ ಕರ್ತವ್ಯದಲ್ಲಿದ್ದ ಪಿಎಸೈ ಬಸವರಾಜ ಮಬನೂರು ಲಾರಿಯನ್ನು
ನಿಲ್ಲಿಸಲು ಸೂಚಿಸಿದರು ನಿಲ್ಲಿಸದೆ ಹೋದಾಗ ಯಲ್ಲಾಪುರ ಸಂಕಲ್ಪ ಕ್ರಾಸ್ ಹತ್ತಿರ ತಡೆದು ನಿಲ್ಲಿಸಿದಾಗ ಸುಮಾರು ಮೂರುಲಕ್ಷರೂ. ಮೌಲ್ಯದ ಆರು ಒಂಟೆಗಳು ಇರುವುದು ಕಂಡು ಬಂದಿದೆ.
ಆರು ಒಂಟೆಗಳನ್ನು ಲಾರಿ ಸಹಿತ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ಹಾವೇರಿ ಶಿಡನೂರು ಗ್ರಾಮದ ಕಾಂತೇಶ ಭಜಂತ್ರಿ,ಪ್ರಕಾಶ ನಾಯಕ,ಈರಪ್ಪ ಮೇಗಪ್ಪ ನಾಯಕರನ್ನು ಬಂಧಿಸಲಾಗಿದೆ.