ಮಕ್ಕಳಿಗೆ ಶಾಲಾ ದಾಖಲಾತಿ ಮಾಡಲು ಹಿಂದೆ ಇದ್ದ ಕ್ರಮವನ್ನೆ ಮುಂದುವರಿಸಲು ಗುರಿಕಾರ ಆಗ್ರಹ

    ಆದ್ಯೋತ್ ಸುದ್ದಿನಿಧಿ:
    1ನೇ ತರಗತಿಗೆ 5 ವರ್ಷ 5 ತಿಂಗಳ ಬದಲಾಗಿ 6 ವರ್ಷಕ್ಕೆ ದಾಖಲಾತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಈ
    ಆದೇಶವನ್ನು ವಾಪಸ್ ಪಡೆದು ಮೊದಲಿನಂತೆ 5 ವರ್ಷ 5 ತಿಂಗಳಿಗೆ 1 ನೆ ತರಗತಿಗೆ ದಾಖಲಾತಿ ಹೊಂದಲು ಅವಕಾಶ ನೀಡಬೇಕೆಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಕಾರ್ಯಾದ್ಯಕ್ಷ ಬಸವರಾಜ ಗುರಿಕಾರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

    ಶಿಕ್ಷಣ ಹಕ್ಕು ಕಾಯ್ದೆಯಲ್ಲಿರುವ ಎಲ್ಲ ಅಂಶಗಳನ್ನು ಸರಕಾರ ಇಲ್ಲಿಯವರೆಗೆ ಜಾರಿಗೆ ತಂದಿಲ್ಲ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಎಲ್ಲ ಶಾಲೆಗಳಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಆದರೆ ಇಲ್ಲಿಯವರೆಗೂ ಮೂಲಬೂತ ಸೌಲಭ್ಯ ಒದಗಿಸಿರುವದಿಲ್ಲ,ವಿಷಯ ವಾರು ,ವರ್ಗವಾರು ಶಿಕ್ಷಕರ ನೇಮಕ ವಾಗಿರುವದಿಲ್ಲ.ಶಿಕ್ಷಣ ಹಕ್ಕು ಕಾಯ್ದೆಯಲ್ಲಿರುವ ಅಂಶಗಳನ್ನು ಮೊದಲು ಜಾರಿಗೆ ತರುವದನ್ನು ಬಿಟ್ಟು ಶಿಕ್ಷಣ ಹಕ್ಕು ಕಾಯ್ದೆ ನೆಪದಲ್ಲಿ ಶಾಲಾ ದಾಖಲಾತಿ ವಯೋಮಿತಿ ಹೆಚ್ಚಳ ಮಾಡಲು ಸರಕಾರ ಹೊರಟಿದೆ.
    ಇದರಿಂದ ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಸರ್ಕಾರ ಪೂರ್ವಾಪರ ವಿಚಾರ ಮಾಡದೆ ಈ ಆದೇಶ ಮಾಡಿದೆ .ಈ ಹಿಂದೆ ಶಿಕ್ಷಣ ತಜ್ಞರು, ಪಾಲಕ ಪೋಷಕ ರ ಅಬಿಪ್ರಾಯದ ಮೇರೆಗೆ 5 ವರ್ಷ 5 ತಿಂಗಳು ತುಂಬಿದ ವಿದ್ಯಾರ್ಥಿಗಳಿಗೆ 1ನೇ ತರಗತಿಗೆ ಪ್ರವೇಶ ಹೊಂದಲು ಆದೇಶ ಮಾಡಲಾಗಿದೆ ಕಾರಣ ಈ ಹಿಂದಿನ ಆದೇಶ ಮುಂದುವರೆಸ ಬೇಕೆಂದು ಗುರಿಕಾರ ಒತ್ತಾಯಿಸಿದ್ದಾರೆ.

About the author

Adyot

Leave a Comment