ಆದ್ಯೋತ್ ಸುದ್ದಿನಿಧಿ:
ಆದ್ಯೋತ್ ವೆಬ್ ನ್ಯೂಸ್ ನಲ್ಲಿ ಹಲವು ತಿಂಗಳುಗಳ ಕಾಲ ಅಂಕಣವನ್ನು ಬರೆದಿರುವ ನಮ್ಮ ನ್ಯೂಸ್ ನ ಮಾರ್ಗದರ್ಶಕರೂ ಆದ ಗಂಗಾಧರ ಕೊಳಗಿಯವರು ಅಂಕಣದಲ್ಲಿ ಬಂದ ಬರಹಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದು
ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಾಸದ ನೆನಪುಗಳು ಹೆಸರಿನ
ಕೃತಿಯ ಬಿಡುಗಡೆ ಸಮಾರಂಭ ಅ.6 ಶನಿವಾರ ಮಧ್ಯಾಹ್ನ-೩ ಗಂಟೆಯಿಂದ ಸಿದ್ದಾಪುರ ಪಟ್ಟಣದ ಲಯನ್ಸ ಬಾಲಭವನದಲ್ಲಿ ನಡೆಯಲಿದೆ.
ಸಾಹಿತಿ, ವಿಮರ್ಶಕಿ ಡಾ| ಮೈತ್ರೇಯಿಣಿ ಗದಿಗೆಪ್ಪ ಗೌಡರ್ ಬೆಳಗಾವಿ ಕೃತಿ ಬಿಡುಗಡೆಗೊಳಿಸಲಿದ್ದು ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಕೃತಿ ಪರಿಚಯಿಸಲಿದ್ದು ಮುಖ್ಯ ಅತಿಥಿಗಳಾಗಿ ಸಂಸ್ಕøತಿ ಸಂಪದದ ಮುಖ್ಯಸ್ಥ ದೊಡ್ಮನೆ ವಿಜಯ ಹೆಗಡೆ ಪಾಲ್ಗೊಳ್ಳುವರು. ಗೌರವ ಉಪಸ್ಥಿತಿಯಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ, ಆದ್ಯೋತ್ ವೆಬ್ ನ್ಯೂಸ್‍ನ ಗಣೇಶ ಭಟ್ಟ ಹೊಸೂರು ಪಾಲ್ಗೊಳ್ಳುವರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜೊರ್ಜ ಫರ್ನಾಂಡಿಸ್, ಗೌರವ ಕೊಶಾಧ್ಯಕ್ಷ ಮುರ್ತುಜಾಹುಸೇನ, ತಾಲೂಕು ಕಸಾಪದ ಗೌರವ ಕಾರ್ಯದರ್ಶಿಗಳಾದ ನಾಗರಾಜ ಶೇಟ್, ಅಣ್ಣಪ್ಪ ನಾಯ್ಕ, ಗೌರವ ಕೋಶಾಧ್ಯಕ್ಷ ಪಿ.ಬಿ.ಹೊಸೂರ ಕೋರಿಕೊಂಡಿದ್ದಾರೆ.