ಭಟ್ಕಳದಲ್ಲಿ ಮಹಾದ್ವಾರ ನಿರ್ಮಾಣದ ವಿಚಾರದಲ್ಲಿ ಎರಡು ಕೋಮಿನ ನಡುವೆ ತಿಕ್ಕಾಟ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಹಾದ್ವಾರದ ನಿರ್ಮಾಣದ ವಿಷಯದಲ್ಲಿ ಎರಡು ಕೋಮಿನ ನಡುವೆ ತಿಕ್ಕಾಟ ನಡೆದಿದ್ದು ಸ್ಥಳೀಯ ಆಡಳಿತದ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

ಭಟ್ಕಳದ ನಿಚ್ಚಲಮಕ್ಕಿ ಶ್ರೀ ವೆಂಕಣರಮಣ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಸ್ಥಳೀಯ ಶಾಸಕ ಸುನಿಲಕುಮಾರ ನಾಯ್ಕ ಮುಂದಾಗಿದ್ದು ಯಢವುದೇ ಅನುಮತಿ ಪಡೆದಿಲ್ಲ ಎನ್ನಲಾಗಿದೆ.ಇದನ್ನು ವಿರೋಧಿಸುವುದಕ್ಕಾಗಿ ಅನ್ಯಕೋಮಿನ ಯುವಕರು ಹಳೆಬಸ್ ನಿಲ್ದಾಣದಿಂದ ಸುಲ್ತಾನ್ ಸ್ಟ್ರೀಟ್ ಮಾಗ್೯ ಮದ್ಯದಲ್ಲಿ ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಇದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.


ತಾಲೂಕು ಆಡಳಿತ ತಹಶೀಲ್ದಾರ್ ಮುಂದಾಳತ್ವದಲ್ಲಿ ಸ್ಥಳಕ್ಕೆ ಪೊಲೀಸರೊಂದಿಗೆ ಹೋಗಿ ಸದರಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ದೇವಸ್ಥಾನದ ದ್ವಾರ ಹಾಗೂ ಟಿಪ್ಪು ಸುಲ್ತಾನ್ ಗೇಟ್ ಕಾಮಗಾರಿಗಳು ಮಾಡದಂತೆ ತಡೆದು ನಿಲ್ಲಿಸಿ ಕಟ್ಟಡ ಸಾಮಗ್ರಿಗಳನ್ನು ತೆರವುಗೊಳಿಸಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.

About the author

Adyot

Leave a Comment