ಸಭಾಧ್ಯಕ್ಷ ಕಾಗೇರಿ ಪ್ರಯತ್ನ, ಮತ್ತೊಮ್ಮೆ ರೈಲು ಮಾರ್ಗ ಸಮೀಕ್ಷೆಗೆ ಹಣ

ಶಿರಸಿ : ಕರ್ನಾಟಕ ವಿಧಾನಸಭಾಧ್ಯಕ್ಷ ಹಾಗೂ ಶಿರಸಿ ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ಮತ್ತೊಮ್ಮೆ ತಾಳಗುಪ್ಪ – ಹುಬ್ಬಳ್ಳಿ ರೈಲು ಮಾರ್ಗ ಸರ್ವೆ ಕಾರ್ಯಕ್ಕೆ ಅನುದಾನ ಮಂಜೂರಾಗಿದೆ.

ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಸಿದ್ದಾಪುರ – ತಾಳಗುಪ್ಪ ರೈಲು ಮಾರ್ಗಕ್ಕೆ ಅನುದಾನ ತಂದಿದ್ರು. ಆದ್ರೆ ನಂತರದ ದಿನಗಳಲ್ಲಿ ತೋರಿದ ನಿರಾಸಕ್ತಿಯಿಂದ ಬಿಡುಗಡೆಯಾಗಿದ್ದ ಅನುದಾನ ಕೂಡ ವಾಪಸ್ ಹೋಗಿತ್ತು. ಆದ್ರೆ ಈಗ ಕೆಲ ತಿಂಗಳುಗಳ ಹಿಂದೆ ತಾಳಗುಪ್ಪ – ಸಿದ್ದಾಪುರ – ಶಿರಸಿ – ಮುಂಡಗೋಡ – ತಡಸ್ – ಹುಬ್ಬಳ್ಳಿ ರೈಲು ಮಾರ್ಗ ಮಂಜೂರಿಗೊಳಿಸುವ ಕುರಿತು ಸಭಾಧ್ಯಕ್ಷ ಕಾಗೇರಿ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಸುರೇಶ ಅಂಗಡಿಯವರೊಂದಿಗೆ ಚರ್ಚಿಸಿ, ರೈಲು ಮಾರ್ಗಕ್ಕೆ ಬೇಡಿಕೆ ಇಟ್ಟಿದ್ರು. ಈಗ ಅದಕ್ಕೆ ಸ್ಪಂದನೆ ದೊರತಿದ್ದು, ಮಾರ್ಗದ ಪಿಇಟಿ ಸರ್ವೇ ನಡೆಸೋದಕ್ಕೆ 79 ಲಕ್ಷ ರೂಪಾಯಿ ಮಂಜೂರಾಗಿದೆ. ಅತಿ ಶೀಘ್ರದಲ್ಲಿ ಸರ್ವೇ ಕಾರ್ಯ ನಡೆಯಲಿದೆ ಅಂತ ಕಾಗೇರಿ ತಿಳಿಸಿದ್ದಾರೆ.

About the author

Adyot

Leave a Comment