ಆದ್ಯೋತ್ ಸುದ್ದಿನಿಧಿ:
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರವಿವಾರ
ಬೆಂಗಳೂರಿನಲ್ಲಿ, ಬೆಂಗಳೂರು ಮತ್ತು ಸುತ್ತಮುತ್ತ ನೆಲೆಸಿರುವ ಶಿರಸಿ-ಸಿದ್ದಾಪುರ ಭಾಗದ ಬಂಧುಗಳೊಂದಿಗೆ “ಸಹ್ಯಾದ್ರಿ ಸ್ನೇಹ ಸಮ್ಮಿಲನ” ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತಮ್ಮ ಕ್ಷೇತ್ರದ ಜನತೆಯೊಂದಿಗೆ ಆತ್ಮೀಯವಾಗಿ ಕ್ಷೇತ್ರದ ವಿವಿಧ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಚಿತ್ರನಟರಾದ ನೀರ್ನಳ್ಳಿ ರಾಮಕೃಷ್ಣ, ಎಸ್.ಎಮ್.ಹೆಗಡೆ, ಶ್ರೀಕಾಂತ್ ಭಟ್, ಪ್ರಶಾಂತ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.