ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಜೋಡೊ ಕಾರ್ಯಕ್ರಮದ ಕುರಿತು ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷಗಳ ಸುಮಾರು 200 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಉ.ಕ.ಜಿಲ್ಲೆಯ ಉಸ್ತುವಾರಿ ಐವಾನ್ ಡಿಸೋಜ್ ಮಾತನಾಡಿ,ಬಿಜೆಪಿ ಸರಕಾರ ಜನಸ್ಪಂದನೆ ಕಾರ್ಯಕ್ರಮ ಮಾಡಿರುವುದು ಸರಕಾರದ ಹಣ ಪೋಲು ಮಾಡಲು ಇಂತಹ ಜನಸ್ಪಂದನ ಕಾರ್ಯಕ್ರಮ ಮಾಡುವ ಬದಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೆಲೆ ಏರಿಕೆ,ಬ್ರಷ್ಟಾಚಾರ ಕಡಿಮೆ ಮಾಡುವ ಮೂಲಕ ಜನಸ್ಪಂದನೆ ಮಾಡಬೇಕು.ರಾಜ್ಯಕ್ಕೆ ಒಳ್ಳೆಯದಾಗಲು ಕಾಂಗ್ರೆಸ್ ಅಗತ್ಯ ಎನ್ನುವ ಭಾವನೆ ಜನತೆಯಲ್ಲಿದೆ. ಪಕ್ಷದ ಧುರೀಣರು, ಕಾರ್ಯಕರ್ತರೂ ಹುಮ್ಮಸ್ಸಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.ಉ.ಕ.ಜಿಲ್ಲೆಯಲ್ಲೂ ಅತ್ಯಂತ ಸಮರ್ಥವಾಗಿ ಸಂಘಟನೆ ಕಾರ್ಯ ನಡೆದಿದೆ. ನಾನು ಉಸ್ತುವಾರಿಯಾಗಿ ಬಂದಾಗ ಇಲ್ಲಿ ಒಳಜಗಳ,ಗುಂಪುಗಾರಿಕೆ ಇದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಅಂಥ ಮನಸ್ತಾಪಗಳು ಇಲ್ಲಿ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಒಳಿತಿಗೆ,ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಈಗಿನ ಸರಕಾರದ ಭೃಷ್ಟಾಚಾರಕ್ಕೆ ಬೇಸತ್ತ ಮತದಾರರು ಬರುವ ಚುನಾವಣೆಯಲ್ಲಿ ಬದಲಾವಣೆ ಬಯಸಿರುವದು ಸ್ಪಷ್ಟವಾಗಿದೆ. ಮುಖ್ಯಮಂತ್ರಿಗಳು ಜನಸ್ಪಂದನ ಸಮಾವೇಶದಲ್ಲಿ ತಾಕತ್ತಿದ್ದರೆ ತಡೆಯಿರಿ ಎಂದದ್ದು ಆಶ್ಚರ್ಯ ತಂದಿದೆ. ನಾನು ಅವರಿಗೆ ಕೇಳುವದು ನೀವು ಯಾರಿಗೆ ಸವಾಲು ಹಾಕ್ತಿದ್ದೀರಾ? ಕಾಂಗ್ರೆಸಿಗಾ? ಜನತೆಗಾ? ನಾವು ತಡೆಯುವದು ಬೇಡ. ಮತದಾರರೇ ನಿಮ್ಮನ್ನು ತಡೆಯುತ್ತಾರೆ. ನಿಮ್ಮ ಭ್ರಮೆಯನ್ನು ಬಿಟ್ಟಿಬಿಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಲು ಇಚ್ಚಿಸುತ್ತೇನೆ.ನೀವು ಮಾಡಿರುವ ಪಠ್ಯಪುಸ್ತಕ ಬದಲಾವಣೆ, ನಾರಾಯಣ ಗುರುಗಳಿಗೆ ಅವಮಾನ ಯಾವ ಪುರುಷಾರ್ಥಕ್ಕೆ? ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐವಾನ್ ಡಿಸೋಜ ಭಾರತ ಜೋಡೋ ಯಾತ್ರೆ ಕುರಿತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆದಿದ್ದು ಬುಧವಾರ ಶಿರಸಿಯಲ್ಲಿ ಸಭೆ ನಡೆಯಲಿದೆ. ಆರ್.ವಿ.ದೇಶಪಾಂಡೆ ದೇಶದ,ರಾಜ್ಯದ ಪ್ರಶ್ನಾತೀತ ನಾಯಕರು.ಅವರ ಸಲಹೆ,ಸೂಚನೆಯಯಂತೆ ಪಕ್ಷದ ಕಾರ್ಯಕ್ರಮಗಳು ನಡೆಯುತ್ತಿವೆ. ಅವರ ಬಗ್ಗೆ ವಿವಾದದ ಹೇಳಿಕೆ ಬಂದಿರುವದು ಮಾಧ್ಯಮಗಳ ಸೃಷ್ಟಿ. ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವದು ಕಾಂಗ್ರೆಸ್ ಪಕ್ಷದ ಆಗ್ರಹ ಕೂಡ. ಆ ಕುರಿತಂತೆ ಪಕ್ಷದಿಂದ ಒತ್ತಡಗಳನ್ನು ಹಾಕಲಾಗುತ್ತಿದ್ದು, ಮಂಜೂರಿಯಾಗದಿದ್ದರೆ ತೀವ್ರವಾದ ಹೋರಾಟ ನಡೆಸುತ್ತೇವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ, ಧುರೀಣರಾದ
ವಿ.ಎನ್.ನಾಯ್ಕ,ಎಸ್,ಆರ್.ಹೆಗಡೆ, ಸೀಮಾ ಹೆಗಡೆ, ಸಿ.ಆರ್.ನಾಯ್ಕ, ನಾಸೀರ ಖಾನ್ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇದರಲ್ಲಿ ಸಮಾಜವಾದಿ ಪಕ್ಷದ 55, ಜೆ.ಡಿಎಸ್.ನಿಂದ 90, ಬಿಜೆಪಿಯಿಂದ 43 ಕಾರ್ಯಕರ್ತರಿದ್ದು ಐವನ್ ಡಿಸೋಜ, ಭೀಮಣ್ಣ ನಾಯ್ಕ ಪಕ್ಷದ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು.
#############
ಕೆಪಿಸಿಸಿಯ ನೂತನ ಸದಸ್ಯರಾಗಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಹೆಚ್.ಎನ್ನ ತಿಪ್ಪೇಸ್ವಾಮಿಯವರು ಆಯ್ಕೆಯಾಗಿದ್ದಾರೆ.
ಇದಲ್ಲದೆ ಜಿಲ್ಲಾಕಾಂಗ್ರೆಸ್ ಸಮಿತಿಗೆ ಎಂ.ತಿಪ್ಪೇಸ್ವಾಮಿ,ಆರ್.ಕೃಷ್ಣಮೂರ್ತಿ,ದಾದಾಫೀರ್ ಕೆ.,ಪಿ.ಬಿ.ಪ್ರಕಾಶ,ಶ್ರೀಮತಿ ಕುಬೇರಮ್ಮ,ದುರ್ಗೇಶ ಪೂಜಾರ ಈ ಆರು ಮಂದಿಯನ್ನು ನೇಮಕ ಮಾಡಲಾಗಿದೆ.