ಶಿರಸಿಯಲ್ಲಿ ಎನ್ ಐ ಎ ದಾಳಿ ಓರ್ವನ ಬಂಧನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗುರುವಾರ ಬೆಳಿಗ್ಗೆ
ಎನ್ ಐ ಎ ದಾಳಿ ನಡೆಸಿದ್ದು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಶಿರಸಿ ಟಿಪ್ಪುನಗರದಲ್ಲಿ ವಾಸ್ತವ್ಯ ಹೂಡಿದ್ದ 45 ವರ್ಷದ
ಅಜೀಜ್ ಅಬ್ದುಲ್ ಶುಕೂರ್ ಹೊನ್ನಾವರ್ ಬಂಧಿತ ಆರೋಪಿಯಾಗಿದ್ದಾನೆ. ಹೊನ್ನಾವರ ಮೂಲದ ವ್ಯಕ್ತಿ ಎಂದು ಹೇಳಲಾಗುತ್ತಿದ್ದು ಎಸ್ ಡಿ ಪಿ ಐ ಮುಖಂಡ ಎನ್ನಲಾಗಿದೆ.
ಈಗಾಗಲೇ ರಾಜ್ಯದ ವಿವಿಧೆಡೆಯಲ್ಲಿ ರಾಷ್ಟ್ರೀಯ ತನಿಖಾದಳದವರು ದಾಳಿ ನಡೆಸುತ್ತಿದ್ದು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆದಿದೆ ಎನ್ನಲಾಗಿದೆ.
ಬೆಳಿಗ್ಗೆ 3.30 ರಿಂದಲೇ ಅಬ್ದುಲ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು. ಸುಮಾರು 6 ಗಂಟೆಯ ವೇಳೆಗೆ ಅಬ್ದುಲ್ ಮನೆಗೆ ಪೊಲೀಸರು ಹೊಕ್ಕಿದ್ದು, ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿಯನ್ನು ಜಪ್ತು ಮಾಡಲಾಗಿದೆ ಎಂದು ಸುದ್ದಿಮೂಲಗಳಿಂದ ತಿಳಿದುಬಂದಿದೆ.

About the author

Adyot

Leave a Comment