ಆದ್ಯೋತ್ ಸುದ್ದಿನಿಧಿ
ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿಯ ಉಸ್ತವಾರಿ ಅರುಣ್ ಸಿಂಗ್ ಪಂಚಮಸಾಲಿ ಮುಖಂಡರಾದ
ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ನಿರ್ದೇಶಕ ಎಸ್ಎಂಎಲ್ ಪ್ರವೀಣ್ ತೀವ್ರವಾಗಿ ಖಂಡಿಸಿದ್ದಾರೆ
ರಾಜ್ಯದಲ್ಲಿ ಕೃಷಿ ಅವಲಂಬಿಸಿರುವ ಲಿಂಗಾಯತ ಪಂಚಮಸಾಲಿ ಸಮುದಾಯದಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿರುವ ವಿಜಾಪುರದ ಶಾಸಕ ಬಸನಗೌಡ ಯತ್ನಾಳ ಬಿಜೆಪಿ ನಾಯಕರೇ ಅಲ್ಲವೆಂದು ಹೇಳಿಕೆ ನೀಡಿರುವುದು ದುರದೃಷ್ಟಕರ ಸಂಗತಿ.ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿದೆ ಹಾಗೂ ಜನ ಸಂಕಲ್ಪ ಯಾತ್ರೆಗೆ ಜನ ಬೆಂಬಲ ದೊರೆಯುತ್ತಿಲ್ಲ.ಯಡಿಯೂರಪ್ಪರ ಜನಪ್ರಿಯತೆ ಕಡಿಮೆಯಾಗುತ್ತಿದೆ ಇಂತಹ ಸಮಯದಲ್ಲಿ ಅರುಣಸಿಂಗ್ ಹತಾಶರಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ.
ಅಕ್ಟೋಬರ್ 21ಕ್ಕೆ ಹುಕ್ಕೇರಿಯಲ್ಲಿ ನಡೆಯುವ 2A ಮೀಸಲಾತಿಯ ಹಕ್ಕೊತ್ತಾಯ ಸಮಾವೇಶದಲ್ಲಿ ಸೇರುವ ಜನಸ್ತೋಮದಿಂದ ಯಾರು ನಾಯಕರು ಯಾರು ನಾಯಕರಲ್ಲ ಎನ್ನುವುದು ಗೊತ್ತಾಗುತ್ತದೆ.
ಶಾಸಕರಾದ ಯತ್ನಾಳ್ ಹಾಗೂ ಬೆಲ್ಲದ್ ವಿರುದ್ಧ ಅರುಣ್ ಸಿಂಗ್ ನೀಡಿರುವ ಹೇಳಿಕೆ ಪಂಚಮಸಾಲಿ ಸಮಾಜದ ಗೌರವಕ್ಕೆ ದಕ್ಕೆ ತಂದಿದೆ. ಕೂಡಲೇ ಅವರ ಮೇಲೆ ಬಿಜೆಪಿಯ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮಾಜದವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಪ್ರವೀಣ ಎಚ್ಚರಿಸಿದ್ದಾರೆ.