ಆದ್ಯೋತ್ ಸುದ್ದಿನಿಧಿ:
ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಸ್ಥಳೀಯ ರೋಟರಿ ಕ್ಲಬ್ ಹಾಗೂ ದೃಷ್ಠಿ ಕಣ್ಣಿನ ಆಸ್ಪತ್ರೆ ಚಿತ್ರದುರ್ಗ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಸ್.ಎಂ.ಎಲ್.ಪ್ರವೀಣ, ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖ ಅಂಗವಾಗಿದ್ದು ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.
ಕಣ್ಣಿನ ಸಮಸ್ಯೆ ಕಂಡುಬಂದ ಕೂಡಲೇ ಮೊದಲು ವೈದ್ಯರಿಗೆ ತೋರಿಸಬೇಕು ಸ್ವಯಂ ಔಷಧವನ್ನು ಮಾಡಬಾರದು.
ಆಧುನಿಕ ಯುಗದಲ್ಲಿ ಟಿವಿ, ಮೊಬೈಲ್, ವೀಕ್ಷಣೆಯಿಂದ ನಮ್ಮ ಕಣ್ಣುಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇವುಗಳ ವೀಕ್ಷಣೆಯ ಸಮಯದಲ್ಲಿ ಸೂಕ್ತ ಮುನ್ನೆಚ್ಚರಿಕೆವಹಿಸಬೇಕು
ಸಕ್ಕರೆ ಕಾಯಿಲೆ ಇದ್ದವರು ಹಾಗೂ ಬಿಪಿ ಇವರೆಲ್ಲರೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ರೋಟರಿ ಕ್ಲಬ್ ಉತ್ತಮ ಕೆಲಸ ಮಾಡುತ್ತಿದ್ದು ಇಂತಹ ಶಿಬಿರವನ್ನು ಆಯೋಜಿಸುವುದರಿಂದ ಅನೇಕ ಬಡಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ರೋಟರಿಕ್ಲಬ್ ನ ಸುರೇಶರಾಜ್,ಶಿವಕುಮಾರ ಗ್ರಾಪಂ ಅಧ್ಯಕ್ಷೆ ಮಂಜುಳಾ ಕರಿಬಸಪ್ಪ,ಭರಮಸಾಗರ ರೋಟರಿಕ್ಲಬ್ ಅಧ್ಯಕ್ಷ ಸಿ.ಟಿ.ಮಾಂತೇಶ,ಪ್ರದಾನ ಕಾರ್ಯದರ್ಶಿ ಕೆಟಿಸಿ ಮಂಜುನಾಥ,ದೃಷ್ಠಿ ಕಣ್ಣಿನ ಆಸ್ಪತ್ರೆಯ ಶಂಕರ ಗೌಡ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಾ ನಾಯಕ ಭಾಗವಹಿಸಿದ್ದರು.
ಬಿ.ಟಿ.ನಿರಂಜನಮೂರ್ತಿ ಸ್ವಾಗತಿಸಿದರುಯೋಗಾ ತಿಪ್ಪೆಸ್ವಾಮಿ ನಿರೂಪಣೆ ಮಾಡಿದರು.ಎನ್.ಕೆ. ಸಂತೋಷ ವಂದನಾರ್ಪಣೆ ಮಾಡಿದರು.
ರೋಟರಿ ಕ್ಲಬ್ ನ ಸದಸ್ಯರಾದ ನಿಸರ್ಗ ಸಂತೋಷ್. ಕಿರಣ್ ಕುಮಾರ್. ದಿವ್ಯ ದರ್ಶನ್. ರುದ್ರೇಶ್. ಪ್ರದೀಪ್ ಗೌಡ. ಮಾರುತಿ ಮುಂತಾದವರು ಉಪಸ್ಥಿತರಿದ್ದರು.