ಆದ್ಯೋತ್ ಸುದ್ದಿನಿಧಿ:
ಸರಕಾರದ ದಿವ್ಯ ನಿರ್ಲಕ್ಷ,ಅಧಿಕಾರಿಗಳ ಬೇಜವಾಬ್ದಾರಿತನದಿಂದ
ಕಬ್ಬು ಬೆಳೆಗಾರರು ಆತಂಕಗೊಂಡಿದ್ದು ಕಳೆದ 42 ದಿನದಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆ ಮುಂದುವರಿಸಲು ಕಬ್ಬು ಬೆಳೆಗಾರರು ತೀರ್ಮಾನಿಸಿದ್ದಾರೆ.
ಒಂದೂವರೆ ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಗೆ ದಿವ್ಯ ನಿರ್ಲಕ್ಷ ತೋರಿದ್ದ ಸರಕಾರ ಪ್ರತಿಭಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತುಕೊಂಡು ಸಂಧಾನಕ್ಕೆ ಮುಂದಾಗಿದೆ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ
ಸಂಧಾನ ಸಭೆಯಲ್ಲಿ ತರಕಾರಿ ವ್ಯಾಪಾರದಂತೆ ಚೌಕಾಶಿ ನಡೆದು ಕೊನೆಗೆ 150ರೂ. ಹೆಚ್ಚುವರಿಯಾಗಿ ನೀಡಲು ಪ್ಯಾರಿ ಸಕ್ಕರೆ ಕಾರ್ಖಾನೆ ಆಡಳಿತಮಂಡಳಿ ಒಪ್ಪಿಗೆ ನೀಡಿದೆ.
ಒಟ್ಟೂ 2521ರೂ. ಆಗುವುದರಿಂದ ರೈತರು ಒಪ್ಪಿ ಪ್ರತಿಭಟನೆ ಹಿಂಪಡೆಯಲು ತೀಮಾನಿಸಿದ್ದಾರೆ.
ಈ ಬಗ್ಗೆ ಗುರುವಾರ ಸರಕಾರ ಸಭೆ ನಡೆಸಲು ತೀರ್ಮಾನಿಸಿ ಕಬ್ಬುಬೆಳೆಗಾರರ ಪ್ರಮುಖರ ಸಭೆ ನಿಗದಿಯಾಗಿತ್ತು ಆದರೆ ಸರಕಾರಕ್ಕೆ,ಅಧಿಕಾರಿಗಳಿಗೆ ಅದೇನು ಅನಿವಾರ್ಯ ಕಾರಣವೋ
ಏಕಾಎಕಿ ಸಭೆಯನ್ನು ನ.20 ಕ್ಕೆ ಮುಂದೂಡಲಾಗಿದೆ
ಇದರಿಂದ ಹತಾಶೆಗೊಂಡಿರುವ ರೈತರು ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದು ಕೇವಲ ಹಗಲಿನಲ್ಲಿ ಮಾತ್ರ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
######