ಆದ್ಯೋತ್ ಸುದ್ದಿನಿಧಿ:
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೇಟ್ ಆಕಾಂಕ್ಷಿಗಳ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಫಾರಂಗೆ ಐದುಸಾವಿರರೂ. ಹಾಗೂ ಅರ್ಜಿಯ ಜೊತೆಗೆ ಎರಡುಲಕ್ಷರೂ. ನೀಡಬೇಕಾಗಿದೆ. ಟಿಕೇಟ್ ಸಿಗಲಿ ಬಿಡಲಿ ಹಣ ವಾಪಸ್ಸ ಸಿಗುವುದಿಲ್ಲ.ಸಾವಿರಾರು ಜನರು ಟಿಕೇಟಗಾಗಿ ಅರ್ಜಿ ಸಲ್ಲಿಸಿದ್ದು ಇದರಿಂದ ಕಾಂಗ್ರೆಸ್ ಗೆ ಕೋಟ್ಯಂತರರೂ. ಸಂಗ್ರಹವಾಗಿದೆ.
ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಕ್ಕೆ 30 ಜನರು ಅರ್ಜಿ ಸಲ್ಲಿಸಿದ್ದು ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಬರೋಬ್ಬರಿ 14 ಜನರು ಅರ್ಜಿ ಸಲ್ಲಿಸಿದ್ದು ಯಲ್ಲಾಪುರ,ಹಳಿಯಾಳ ಕ್ಷೇತ್ರಕ್ಕೆ ಕೇವಲ ಒಂದು ಅರ್ಜಿ ಬಂದಿದೆ.ಹಳಿಯಾಳಕ್ಕೆ ಆರ.ವಿ.ದೇಶಪಾಂಡೆ ಅರ್ಜಿ ಸಲ್ಲಿಸಿದ್ದು ಬೇರೆ ಯಾರೂ ಸಲ್ಲಿಸಿರದಿರುವುದು ಸಹಜವಾಗಿದೆ ಆದರೆ ಯಲ್ಲಾಪುರದಿಂದ ಕೇವಲ 1 ಅರ್ಜಿ ಬಂದಿರುವುದು ಆಶ್ಚರ್ಯ ಉಂಟುಮಾಡಿದೆ.ಬಿಜೆಪಿಯ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಸೇರಿರುವ ವಿ.ಎಸ್.ಪಾಟೀಲ್,ದೇಶಪಾಂಡೆಯವರ ಪುತ್ರ ಪ್ರಶಾಂತ ದೇಶಪಾಂಡೆ ಅರ್ಜಿಸಲ್ಲಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಿರಸಿ ವಿಧಾನಸಭಾ ಕ್ಷೇತ್ರಕ್ಕೆ ರವೀಂದ್ರ ನಾಯ್ಕ ಹಾಗೂ ನಿವೇದಿತಾ ಆಳ್ವಾ ಪ್ರಬಲ ಟಿಕೇಟ್ ಆಕಾಂಕ್ಷಿಗಳು ಎನ್ನಲಾಗುತ್ತಿತ್ತು ಆದರೆ ಇಬ್ಬರೂ ಅರ್ಜಿ ಸಲ್ಲಿಸದಿರುವುದು ಕುತೂಹಲವಾಗಿದೆ.
ಕುಮಟಾ ವಿಧಾನಸಭಾ ಕ್ಷೇತ್ರ
ಶಾರದ ಶೆಟ್ಟಿ
ಶಿವಾನಂದ ಹೆಗಡೆ ಕಡತೋಕಾ
ಹೊನ್ನಪ್ಪ ನಾಯ್ಕ
ಆರ್.ಹೆಚ್.ನಾಯ್ಕ
ರವಿ ಶೆಟ್ಟಿ ಕವಲಕ್ಕಿ
ಕೃಷ್ಣ ಗೌಡ
ಭುವನ ಭಾಗವತ
ರತ್ನಾಕರ ನಾಯ್ಕ
ಪ್ರದೀಪ ನಾಯಕ
ಭಾಸ್ಕರ ಪಟಗಾರ
ಗಾಯತ್ರಿ ಗೌಡ
ಮಂಜುನಾಥ ನಾಯ್ಕ
ಯಶೋಧರ ನಾಯ್ಕ
ಸಾಯಿ ಗಾವಂಕರ
ಭಟ್ಕಳ ವಿಧಾನಸಭಾ ಕ್ಷೇತ್ರ
ಮಂಕಾಳ ವೈದ್ಯ
ಜೆ.ಡಿ.ನಾಯ್ಕ
ಸಂತೋಷ ನಾಯ್ಕ
ದೀಪಕ ನಾಯ್ಕ
ಅಯ್ಯಪ್ಪ ನಾಯ್ಕ
ಶ್ರೀಧರ ನಾಯ್ಕ
ಆರ್.ಎನ್.ನಾಯ್ಕ
ಕಾರವಾರ ವಿಧಾನಸಭಾ ಕ್ಷೇತ್ರ
ಸತೀಶ ಸೈಲ್
ಚೈತ್ರಾ ಕೊಠಾರಕರ
ಶಿರಸಿ ವಿಧಾನಸಭಾ ಕ್ಷೇತ್ರ
ಭೀಮಣ್ಣ ನಾಯ್ಕ
ಶ್ರೀಪಾದ ಹೆಗಡೆ
ವಸಂತ ನಾಯ್ಕ
ಸತೀಶ ಪಾಂಡುರಂಗ ನಾಯ್ಜ
ವಿ.ಎನ್.ನಾಯ್ಕ
ಹಳಿಯಾಳ ವಿಧಾನಸಭಾ ಕ್ಷೇತ್ರ
ಆರ.ವಿ.ದೇಶಪಾಂಡೆ
ಯಲ್ಲಾಪುರ ವಿಧಾನಸಭಾ ಕ್ಷೇತ್ರ
ಲಕ್ಷ್ಮಣ ಬಾನಸೋದ್