ಕುಮಟಾದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಬೃಹತ್ ಜನಜಾಗೃತಿ ಸಮಾವೇಶ

ಆದ್ಯೋತ್ ಸುದ್ದಿನಿಧಿ:
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು ಉ೫ತ್ತರಕನ್ನಡ ಜಿಲ್ಲೆಯ ಆರು ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.
ಇದರ ಅಂಗವಾಗಿ ಗುರುವಾರ ಕುಮಾಟದಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಜನಜಾಗೃತಿ ಸಮಾವೇಶವನ್ನು ನಡೆಸಿತು.

ಸಮಾವೇಶದ ನೇತೃತ್ವವಹಿಸಿದ್ದ ಆರ್.ವಿ.ದೇಶಪಾಂಡೆ ಮಾತನಾಡಿ,ಬಿಜೆಪಿ ಸರಕಾರ ಸುಳ್ಳುಗಳನ್ನು ಹೇಳುತ್ತ ಅಧಿಕಾರವನ್ನು ಅನುಭವಿಸುತ್ತಿದ್ದಾರೆ.ಪರೇಶ ಮೇಸ್ತ ಸಾವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಅಧಿಕಸ್ಥಾನ ಪಡೆದರು ಆದರೆ ಈಗ ಅವರ ಬಣ್ಣ ಬಯಲಾಗಿದೆ.ಬಡಸಾಮಾನ್ಯರು ಜೀವನ ನಡೆಸುವುದೆ ಕಷ್ಟವಾಗುತ್ತಿದೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಹಿಂದೆ ಸಿದ್ದರಾಮಯ್ಯನವರ ಕಾಲದಲ್ಲಿ ನೀಡಿದ್ದ ಜನಪರ ಯೋಜನೆಗಳನ್ನು ಮುಂದುವರಿಸಲಾಗದೆ,ಹೊಸಯೋಜನೆಗಳನ್ನು ತರಲಾರದೆ ಜನರ ಪ್ರಾಣವನ್ನು ಹಿಂಡಲಾಗುತ್ತಿದೆ ಎಂದರು.
ಮಧು ಬಂಗಾರಪ್ಪ ಮಾತನಾಡಿ,ರಾಜ್ಯದ ಜನರಿಗೆ ಭೂ ಹಕ್ಕನ್ನು ನೀಡಿದವರು ದೇವರಾಜ ಅರಸು ಹಾಗೂ ಬಂಗಾರಪ್ಪನವರು ಈಗ ಬಿಜೆಪಿ ಸರಕಾರ ಬಡವರನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡುತ್ತಿದೆ.ರೈತರಿಗೆ ಉಚಿತ ವಿದ್ಯುತ್ ನ್ನು ಬಂಗಾರಪ್ಪ ನೀಡಿದ್ದರು ಆದರೆ ಬಿಜೆಪಿ ರೈತರ ವಿದ್ಯುತ್ ಗೆ ಮೀಟರ್ ಅಳವಡಿಸಲಾಗುತ್ತಿದೆ. ಇಲ್ಲಿಯ ಸಂಸದರು ಸಂವಿಧಾನ ಬದಲಿಸುತ್ತೇನೆ ಎನ್ನುತ್ತಾರೆ ಅವರು ಚುನಾವಣೆಯ ಸಂದರ್ಭದಲ್ಲಿ ಹೆಡೆ ಎತ್ತುತ್ತಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ ಮಾತನಾಡಿ,
ದೇಶಕ್ಕೆ ಸ್ವಾತಂತ್ರಯ ಕೊಟ್ಟ. ಪಕ್ಷ ಕಾಂಗ್ರೆಸ್ ನಮ್ಮ ರಾಷ್ಟ್ರ ಧ್ವಜ ನಮ್ಮ ಸಂವಿಧಾನ ನೀಡಿದ್ದು ಕಾಂಗ್ರೆಸ್ ಹಿಂದೂ,ಮುಸ್ಲಿಂಕ್ರೀಶ್ಚನ್ ಸೇರಿದಂತೆ ನಾವೆಲ್ಲರೂ ಒಂದು ಎನ್ನುವುದು ಕಾಂಗ್ರೆಸ್ ಧ್ಯೇಯ ಆದರೆ ಬಿಜೆಪಿಗರು ಜನರನ್ನು ಒಡೆದು ಅಧಿಕಾರ ಪಡೆಯುವವರು ಎಂದು ಹೇಳಿದರು.
ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ ಗೋವಾದಿಂದ ಕಾರವಾರದ ಮೂಲಕ ಜಿಲ್ಲೆಗೆ ಪ್ರವೇಶಿಸಿದರು.
ಕುಮಟಾ ತಾಲೂಕಿನ ಮಿರ್ಜಾನ್‌ನಲ್ಲಿರುವ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಗುರುಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ಪಡೆದರು.

ಡಿ. ಕೆ. ಶಿವಕುಮಾರ್ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಜಯವಾಗಲಿ ಎಂಬ ಘೋಷಣೆಯನ್ನು ಕೂಗಿದರು. ಇದರಿಂದ ಕೆಲವು ಸಮಯ ಡಿಕೆ ಶಿವಕುಮಾರ್ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮನಸ್ತಾಪಕ್ಕೆ ಕಾರಣವಾಯಿತು
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಕಾಂಗ್ರೆಸ್ ಪ್ರಮುಖ ಭಾಸ್ಕರ್ ಪಟಗಾರ ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಡಿಕೆ ಶಿವಕುಮಾರ್ ಬೆಂಬಲಿಗರು ಹಸಿರು ಶಾಲನ್ನು ಧರಿಸಿದ್ದರು ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಶಾಲನ್ನು ಧರಿಸಿದ್ದರು

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.-
ಇವತ್ತು ನಾವು ಕುಮಟಾಕ್ಕೆ ಬಂದಿರುವ ಉದ್ದೇಶ
ಕರಾವಳಿ ಪ್ರದೇಶ ಉತ್ತರ ಕನ್ನಡ ಜಿಲ್ಲೆ ಜನರು ನೊಂದು ಬೆಂದಿದ್ದಿರಿ. ನಿಮ್ಮ ಸಮಸ್ಯೆ ಕೇಳಲು ನಿಮ್ಮ ಜೊತೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ, ಈ ಭಾಗಕ್ಕೆ ನ್ಯಾಯವನ್ನು ಕೊಡಿಸಬೇಕು ಜಾಗೃತಿಯನ್ನು ಮೂಡಿಸಿ ಈ ಭಾಗವನ್ನು ಅಭಿವೃದ್ಧಿಯಾಗಿ ವಲಸೆ ಹೋಗುವುದನ್ನು ತಪ್ಪಿಸಬೇಕು ಅನ್ನೋದು ನಮ್ಮ ಉದ್ದೇಶ ಬಿಜೆಪಿ ಸರ್ಕಾರ ಹೇಳಿದಂತೆ ನಡೆಯಲಿಲ್ಲ ನಿಮಗೆ ಯಾರಿಗೂ ಕೂಡ 15 ಲಕ್ಷ ರೂ ಹಣವನ್ನು ಹಾಕಿಲ್ಲ.ಕಾಂಗ್ರೆಸ್ ಸರಕಾರ ಇದ್ದಾಗ ಗ್ಯಾಸ್ ಸಿಲೆಂಡರ್ ಬೆಲೆ 400ರೂ ಇತ್ತು ಈಗ ರೂ.1000 ಆಗಿದೆ ಬೆಲೆಗಳು ಆಕಾಶಕ್ಕೆ ಹೋಗಿದೆ. ನಿಮಗೆ ನ್ಯಾಯ ಒದಗಿಸಿ ಕೊಡ್ಬೇಕು ಯುವಕರಿಗೆ ಖಾಸಗಿ ಉದ್ಯೋಗ ಆಗಲಿ, ಸರ್ಕಾರಿ ಉದ್ಯೋಗ ಕಲ್ಪಿಸಿ ಕೊಡಬೇಕು.
ನುಡಿದಂತೆ ನಡೆಯದ ಈ ಬಿಜೆಪಿ ಪಕ್ಷವನ್ನು ಕಿತ್ತೊಗೆದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ಕೊಡುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ಪಕ್ಷವು ಯಾರಿಗೆ ಟಿಕೆಟ್ ನೀಡಲಿ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೇಸ್ ಕಾರ್ಯಕರ್ತನ ಮೇಲಿದೆ.ಜಿಲ್ಲೆಯ ಆರೂ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಬೇಕು ಎಂದು ಹೇಳಿದರು.

About the author

Adyot

Leave a Comment