ಆದ್ಯೋತ್ ಸುದ್ದಿನಿಧಿ:
ಕಳೆದ ತಿಂಗಳು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಬಳಿ ಮಾರಕ ಆಯುಧವನ್ನು ತೋರಿಸಿ ಲಕ್ಷಾಂತರ ರೂಪಾಯಿ ಅಪಹರಿಸಿದ್ದ ದರೋಡೆಕೋರನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 19 ರಂದು ಅಂಡಗಿ ಬಳಿ ಹಸನ್ ಖಾನ್ ಎಂಬ ಅಡಿಕೆ ವ್ಯಾಪಾರಿಗೆ ಸೇರಿದ 50 ಲಕ್ಷ ರೂಪಾಯಿಗಳನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಹಣದೋಚಿ ಪರಾರಿಯಾಗಿದ್ದರು. ಕಾರಿಗೆ ಅಳವಡಿಸಿದ್ದ ಜಿಪಿಎಸ್ ಟ್ರಾಕರ್ ಸಹಾಯದಿಂದ ದರೊಡೆ ನಡೆಸಿದ್ದರು. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಶನಿವಾರದಂದು 9 ಜನ ಅಂತರ್ ಜಿಲ್ಲಾ ದರೊಡೆಕೊರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ 13 ಲಕ್ಷ ರೂಪಾಯಿ ಹಣವನ್ನು ಜಪ್ತು ಮಾಡಲಾಗಿದೆ.
ಸಾಗರದ ಆಸಿಫ್ ಸತ್ತಾರ್, ಅಬ್ದುಲ್ ಸತ್ತಾರ್, ಮನ್ಸೂರ್ ಜಾಫರ್ ಖಾನ್, ನೆಜ್ಜೂರಿನ ಅಜಿಮುಲ್ಲಾ ಸಾಬ್, ಭಟ್ಕಳದ ಅಬ್ದುಲ್ ರೆಹಮಾನ್ ವಟರಾಗ, ಚಿಕ್ಕಮಗಳೂರಿನ ರಿಯಾಜ್ ಫಯಾಜ್, ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ಹಾಗೂ ತೀರ್ಥಹಳ್ಳಿಯ ಇಕ್ಬಾಲ್ ಅಬ್ದುಲ್ ಕೆ ಬಂಧಿತ ಆರೋಪಿಗಳು.
ಬಂಧಿತರಿಂದ 13.82 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಒಂದು ರಿಡ್ಜ್ ಹಾಗೂ ಒಂದು ಓಮಿನಿ ಮತ್ತು 12 ಮೊಬೈಲ್ ಹಾಗೂ ಒಂದು ಜಿ.ಪಿ.ಎಸ್ ಟ್ರಾಕರ್ ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳ ಪತ್ತೆ ಹಾಗೂ ನಗದು ಜಪ್ತು ಬಾಕಿ ಇದ್ದು ತನಿಖೆ ಮುಂದುವರೆದಿದೆ.