ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬಿಎಸ್‌ಎನ್‌ಡಿಪಿ ಸಂಘಟನೆಯ ತಾಲೂಕು ಘಟಕದಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವದ ಪ್ರಯುಕ್ತ ಸಾದಕರಿಗೆ ಸನ್ಮಾನ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನಡೆಯಿತು.
ಬಿ.ಎಸ್.ಎನ್.ಡಿ.ಪಿಯ ಧ್ವಜಾರೋಹಣವನ್ನು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ನೆರವೇರಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಿರಸಿಯ ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜವನ್ನು ಪ್ರತಿಯೊಬ್ಬರು ಪ್ರೀತಿಸಿ ಗೌರವಿಸಬೇಕು. ಸಮಾಜದ ಯುವ ಪೀಳಿಗೆ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂಬುದರ ಕುರಿತು ಚಿಂತನೆ ನಡೆಸಬೇಕಿದೆ. ಹಸಿದ ಹೊಟ್ಟೆಗೆ ಅನ್ನ ಕೊಡುವ ಕೆಲಸ ಸಮಾಜ ಬಾಂಧವರಿAದ ಆಗಬೇಕು. ಸಮಾಜದಲ್ಲಿ ಶಿಕ್ಷಣಕ್ಕೆ ಹಾಗೂ ಸಂಘಟನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಯುವಕರು ಸಂಘಟನೆ ಮಾಡುವುದರ ಜೊತೆಗೆ ಕ್ರೀಯಾಶೀಲವಾಗಿರಬೇಕು ಎಂದು ಹೇಳಿದರು.

ಬಿಎಸ್‌ಎನ್‌ಡಿಪಿ ಸಂಘಟನೆ ರಾಜಾಧ್ಯಕ್ಷ ಸೈದಪ್ಪ ಗುತ್ತೆದಾರ್ ಪ್ರಾಸ್ತಾವಿಕ ಮಾತನಾಡಿ, ಸಮಾಜದ ಸಂಘಟನೆಯೇ ಸಂಘದ ಆಸ್ತಿ ಎಂದು ಭಾವಿಸುತ್ತೇವೆ. ಈಡಿಗ ಸಮಾಜದ ೨೬ ಉಪಪಂಗಡಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಂಘಟಿಸಲು ಬಿ.ಎಸ್.ಎನ್.ಡಿ.ಪಿ ಸಂಘಟನೆ ಶ್ರಮಿಸುತ್ತಿದೆ. ಸಮಾಜ ಅಂತ ಬಂದಾಗ ಎಲ್ಲರೂ ರಾಜಕೀಯ ಬಿಟ್ಟು ಬರಬೇಕು. ಸಂಘಟನೆ ಜತೆ ಕೈಜೋಡಿಸಬೇಕು ಎಂದು ಹೇಳಿದರು.
ಸಿದ್ದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರತ್ನಾಕರ ನಾಯ್ಕ ಉಪನ್ಯಾಸ ನೀಡಿ, ನಾರಾಯಣಗುರುಗಳು ಸಮಾಜದ ತುಳಿತಕ್ಕೊಳಗಾದವರ ಧ್ವನಿಯಾಗಿದ್ದರು ಆಧ್ಯಾತ್ಮದ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದ್ದರು. ಇಂತಹ ಗುರುಗಳು ನಮಗೆ ಆದರ್ಶವಾಗಬೇಕು ಸಮಾಜದ ಪ್ರತಿಯೊಬ್ಬರಿಗೂ ನಾರಾಯಣಗುರುಗಳ ಪುಸ್ತಕವನ್ನು ನೀಡಿ. ನಾರಾಯಣಗುರುಗಳ ಕುರಿತ ಅಧ್ಯಯನ ಪೀಠವಾಗಬೇಕು. ಸಮಾಜದವರ ಏಳಿಗೆ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಕೆಲಸ ಮಾಡಬೇಕು. ತುಳಿತಕ್ಕೊಳಗಾದ ತಳ ಸಮುದಾಯವನ್ನು ಜಾಗೃತಿಗೊಳಿಸೋಣ ಎಂದರು.
ಬಿ.ಎಸ್.ಎನ್.ಡಿ.ಪಿ ಸಂಘಟನೆ ತಾಲೂಕಾ ಅಧ್ಯಕ್ಷ ವಿನಾಯಕ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಿವೃತ್ತ ಸರ್ವೆಯರ್ ಡಿ.ಸಿ.ನಾಯ್ಕ ಅವರಗುಪ್ಪ, ನಿವೃತ್ತ ಅಭಿಯೋಜಕ ಬಿ.ಜಿ.ನಾಯ್ಕ ಹಲಗೇರಿ, ಬಿ.ಎಸ್.ಎನ್.ಡಿ.ಪಿ ಜಿಲ್ಲಾಧ್ಯಕ್ಷ ಜಗದೀಶ ನಾಯ್ಕ, ಸಮಾಜದ ಪ್ರಮುಖರಾದ ಗೋಪಾಲ ನಾಯ್ಕ ಭಾಶಿ, ವಸಂತ ನಾಯ್ಕ ಮನಮನೆ, ವೀರಭದ್ರ ನಾಯ್ಕ, ಕೆ.ಜಿ.ನಾಗರಾಜ, ಕೆ.ಆರ್.ವಿನಾಯಕ, ಹೆಸ್ಕಾಂನ ರವಿ ನಾಯ್ಕ ಉಪಸ್ಥಿತರಿದ್ದರು.
ಭೂಮಾಪನ ಇಲಾಖೆಯ ಉಷಾ ನಾಯ್ಕ ನಿರೂಪಿಸಿದರು. ಅಣ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿದರು.

About the author

Adyot

Leave a Comment