ಪಂಚಮಸಾಲಿ ಸಮುದಾಯಕ್ಕೆ ಅವಮಾನ, ನಟ ಚೇತನ ಸಿನೇಮಾ ಬಹಿಷ್ಕಾರಕ್ಕೆ ಕರೆ

ಆದ್ಯೋತ್ ಸುದ್ದಿನಿಧಿ
ಪಂಚಮಸಾಲಿ ಸಮಾಜಕ್ಕೆ ಅವಮಾನವಾಗುವಂತಹ ಹೇಳಿಕೆ ನೀಡಿರುವ ನಟ ಚೇತನ ನಟಿಸಿರುವ ಸಿನೇಮಾಗಳನ್ನು ಮುಂಬರುವ ದಿನಗಳಲ್ಲಿ ಪಂಚಮಸಾಲಿ ಸಮಾಜದ ಯುವಕರು ಬಹಿಷ್ಕರಿಸುವುದರ ಜೊತೆಗೆ ಅವರ ಹೇಳಿಕೆಯನ್ನು
ವಿರೋಧಿಸಬೇಕು ಎಂದು ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಯುವ ಮುಖಂಡ ಎಸ್ಎಂಎಲ್ ಪ್ರವೀಣ್ ಭರಮಸಾಗರ ಕರೆಕೊಟ್ಟಿದ್ದಾರೆ

ನಮ್ಮ ಸಮುದಾಯದಲ್ಲಿ ಕೃಷಿಯನ್ನು ಅವಲಂಬಿತರಾಗಿ 80% ಪ್ರತಿಶತ ಬಡವರಿದ್ದಾರೆ. ಉದ್ಯೋಗ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದು ರಾಜಕೀಯ ಮೀಸಲಾತಿ ಹೋರಾಟ ಅಲ್ಲ.ಹಲವಾರು ದಶಕಗಳಿಂದ ಎಲ್ಲಾ ಸರ್ಕಾರಗಳು ಮೋಸ ಮಾಡುತ್ತ ಬಂದಿವೆ. ಇತ್ತೀಚಿಗೆ ನಮ್ಮ ಪಾದಯಾತ್ರೆ ಹೋರಾಟದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮೇಲೆ ನಮ್ಮ ಸಮುದಾಯದ ನಾಯಕರು ಭರವಸೆ ಇಟ್ಟಿದ್ದಾರೆ.ಈಗಾಗಲೇ ಶಾಶ್ವತ ಹಿಂದುಳಿದ ಆಯೋಗವು ಪಂಚಮಸಾಲಿ ಸಮುದಾಯದ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಡಿಸೆಂಬರ್19ರ ಒಳಗಾಗಿ ಮುಖ್ಯಮಂತ್ರಿಗಳಿಗೆ ನೀಡಲಿದೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಲಿಂಗಾಯತ ಸಮುದಾಯದ ಹೋರಾಟಗಾರರು ಕೇವಲ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಹೇಳುತ್ತಿಲ್ಲ. ನಾಡಿನಲ್ಲಿ ಅನ್ಯಾಯಕ್ಲೆ ಒಳಗಾದ ಎಲ್ಲ ಸಮುದಾಯಗಳಿಗೂ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೆವೆ
ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ,ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್, ಶಿವಶಂಕರ್ ನಿರಂತರ ಹೋರಾಟ ಮಾಡುತ್ತಿದ್ದಾರೆ. ಜೊತೆಗೆ ಎಲ್ಲಾ ಲಿಂಗಾಯತರಿಗೆ ಕೇಂದ್ರ OBC ಪಟ್ಟಿಗೆ ಸೇರಿಸಿ ಎಂದು ಹೋರಾಟ ಮಾಡುತ್ತಿದ್ದಾರೆ. ಈಗ ನಮ್ಮ ಸಮುದಾಯವು ರಾಜ್ಯದದ್ಯಂತ ಪ್ರತಿ ಗ್ರಾಮಗಳಲ್ಲಿ ಜಾಗೃತಗೊಳ್ಳುವುದರ ಜೊತೆಗೆ ಒಗ್ಗಟ್ಟಾಗಿದ್ದೇವೆ. ದಶಕಗಳ ಕಾಲದ ಹೋರಾಟದ ಬಗ್ಗೆ ಅರಿವಿಲ್ಲದವ ನಟ ಚೇತನ ಬಾಲೀಶ ಹೇಳಿಕೆ ಕೊಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ಇಂತಹ ಹೇಳಿಕೆಗಳನ್ನು ಕೊಡುವುದರ ಮೂಲಕ ಹಿರೋ ಆಗಬಹುದು ಎಂಬ ಭ್ರಮೆಯನ್ನು ಅವರು ಬಿಡಬೇಕು ಎಂದು ಹೇಳಿದ್ದಾರೆ

About the author

Adyot

Leave a Comment