ಗಣೇಶ ಫಾಲ್ಸ್ ಹಳ್ಳಕ್ಕೆ 11.26ಕೋಟಿರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ

ಆದ್ಯೋತ್ ಸುದ್ದಿನಿಧಿ:
ಶಿರಸಿ-ಯಲ್ಲಾಪುರ ತಾಲೂಕನ್ನು ಸಂಪರ್ಕಿಸುವ ಗಣೇಶಫಾಲ್ಸ್ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಮಂಜೂರಿ ದೊರೆತಿದ್ದು ಹಲವಾರು ವರ್ಷಗಳಿಂದ ಈ ಭಾಗದ ಜನರ ಬೇಡಿಕೆ ಈಡೇರುವ ಲಕ್ಷಣ ಕಾಣುತ್ತಿದೆ.11.26ಕೋಟಿರೂ.ವೆಚ್ಚದಲ್ಲಿ ನಿರ್ಮಾಣಕ್ಕೆ ಶುಕ್ರವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾರ್ಮಿಕ ಸಚೀವ ಶಿವರಾಮ ಹೆಬ್ಬಾರ್
ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,
ಶಿರಸಿ-ಯಲ್ಲಾಪುರ ತಾಲೂಕಿಗೆ ಸಂಪರ್ಕ ಕೊಂಡಿಯಾಗಿರುವ ಹಾಗೂ ಸಾರ್ವಜನಿಕರ ದಶಕಗಳ ಬೇಡಿಕೆಯಾದ ಗಣೇಶ್ ಫಾಲ್ಸ್ ಹಳ್ಳಕ್ಕೆ 11.26 ಕೋಟಿ ರೂಪಾಯಿಗಳ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಇಂದು ಕಾಲಾವಕಾಶ ಕೂಡಿಬಂದಿದೆ. ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಗಡಿ ಭಾಗವಾದ ಇಳೆ ಹಳ್ಳಿ ಹಾಗೂ ಜಡ್ಡಿಗದ್ದೆ ಗ್ರಾಮವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಈ ಸೇತುವೆ ಬಹುಪಯೋಗಿಯಾಗಿದೆ ನನ್ನ ಹಾಗೂ ಶಿವರಾಮ್ ಹೆಬ್ಬಾರ್ ಅವರ ದಾಖಲೆ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸನ್ನು ಗೆದ್ದಿವೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮಿಬ್ಬರಿಗೂ ಸುಲಭವಾಗಿ ಗೆಲುವನ್ನು ತಂದು ಕೊಡಲಿವೆ. ಮುಂಬರುವ ಚುನಾವಣೆಯಲ್ಲಿ ನಾನು ಹಾಗೂ ಸಚಿವ ಹೆಬ್ಬಾರ್ ಗೆದ್ದೇ ಗೆಲ್ಲುತ್ತೇವೆ. ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕರಾಗಿ ಬಂದು ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇವೆ ಎಂದು ಹೇಳಿದರು

ಸರ್ಕಾರ ಅಡಿಕೆ ರೋಗಕ್ಕೆ ಹಾಗೂ ಜಾನುವಾರು ರೋಗಕ್ಕೆ ಸೂಕ್ತ ಸಮಯದಲ್ಲಿ ಜನರಿಗೆ ಸ್ಪಂದಿಸಿ ಪರಿಹಾರ ನೀಡಿದೆ. ಕಾಡುಪ್ರಾಣಿ ಹಾನಿಗೂ ಸಹ ಸರ್ಕಾರ ಸ್ಪಂದಿಸಿ ರೈತರಿಗೆ ಪರಿಹಾರ ನೀಡಿದೆ. ಅರಣ್ಯ ಅತಿಕ್ರಮಣದಾರರ ಪರವಾಗಿ ಸರ್ಕಾರ ಇದೆ ಯಾವುದೇ ಕಾರಣಕ್ಕೂ ಸರ್ಕಾರ ಅರಣ್ಯ ಅತಿಕ್ರಮಣದಾರರ ಕೈ ಬಿಡುವುದಿಲ್ಲ. ಸರ್ಕಾರ ಅರಣ್ಯ ಅತಿಕ್ರಮಣದಾರರ ಪರವಾಗಿದೆ ಎಂದು ಕಾಗೇರಿ ಹೇಳಿದರು


ಶಿವರಾಂ ಹೆಬ್ಬಾರ್ ಮಾತನಾಡಿ,ಹಲವಾರು ದಶಕಗಳಿಂದ ನನಗೂದಿಗೆ ಬಿದ್ದಿದ್ದ ಶಿರಸಿ-ಯಲ್ಲಾಪುರ ತಾಲೂಕಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಭೂಮಿ ಪೂಜೆ ಕಾಮಗಾರಿ ನೆರವೇರಿಸುತ್ತಿರುವುದು ನನಗೆ ಅತೀವ ಸಂತಸವನ್ನುಂಟು ಮಾಡಿದೆ.ನನ್ನ ಕ್ಷೇತ್ರದ ಪ್ರತಿಯೊಂದು ಮನೆಗೂ ರಸ್ತೆ ಸಂಪರ್ಕ ವಿದ್ಯುತ್ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದ್ದು ಅದರಂತೆ ಕಾರ್ಯ ಮಾಡುತ್ತಿದ್ದೇನೆ ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಂದಾಗಿ ಜನ ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಜಿಲ್ಲೆಗೆ ಬಂದಂತಹ ಅರಣ್ಯ ಅಧಿಕಾರಿಗಳು ಸಣ್ಣಪುಟ್ಟ ಅಭಿವೃದ್ಧಿ ಕೆಲಸಗಳಾದ ರಸ್ತೆ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಕಾರ್ಯಗಳಲ್ಲಿ ಅನವಶ್ಯಕವಾಗಿ ತೊಂದರೆ ಕೊಡಬಾರದು. ಯಾವುದೇ ಅಧಿಕಾರಿಗಳು ಇಲ್ಲಿ ಪುಸ್ತಕ ಓದಿಕೊಂಡು ಬಂದು ಕೆಲಸ ಮಾಡುವುದು ಬೇಡ. ಸ್ಥಳೀಯ ಪರಿಸ್ಥಿತಿ ಹಾಗೂ ಜನಜೀವನ ನೋಡಿ ಕೆಲಸ ಮಾಡಿ ಎಂದು ಹೇಳಿದರು.

###

About the author

Adyot

Leave a Comment