ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಜಿಲ್ಲೆಯ ಕಟ್ಟಕಡೆಯ ತಾಲೂಕಾಗಿದ್ದು ದಿ.ರಾಮಕೃಷ್ಣ ಹೆಗಡೆಯವರಂತಹ ಧೀಃಮಂತ ವ್ಯಕ್ತಿಯನ್ನು ನೀಡಿದ ತಾಲೂಕಾಗಿದೆ ಹಲವು ನಾಯಕರು ಈ ತಾಲೂಕಿನಲ್ಲಿ ಇದ್ದಿದ್ದು ರಾಜ್ಯ,ರಾಷ್ಟ್ರಮಟ್ಟದಲ್ಲಿ ತಾಲೂಕನ್ನು ಗುರುತಿಸುವಂತಾಗಿತ್ತು.ಆದರೆ ಕಳೆದ 30 ವರ್ಷದಿಂದ ತಾಲೂಕು ರಾಜಕೀಯ ನಾಯಕರ ಕೊರತೆಯನ್ನು ಅನುಭವಿಸುತ್ತಿತ್ತು.ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಈ ಮೂರು ರಾಜಕೀಯ ಪಕ್ಷದಲ್ಲಿ ಎರಡನೇ ಸ್ತರದ ನಾಯಕರ ಕೊರತೆ ಕಾಣುತ್ತಿತ್ತು ಆದರೆ ಈಗ ಕಾಂಗ್ರೆಸ್ ನಲ್ಲಿ ಇಂತಹ ನಾಯಕನೊಬ್ಬ ಕಾಣಿಸುತ್ತಿದ್ದು ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ.
ಸೋಮವಾರ ಅವರ 40ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲು,ಅನಾಥಾಶ್ರಮ,ಅಂಧರ ಶಾಲೆಗೆ ಹಣ್ಣು-ಹಂಪಲು ಹಂಚುವ ಮೂಲಕ,ರಕ್ತದಾನ ಮಾಡುವ ಮೂಲಕ
ಅರ್ಥಪೂರ್ಣವಾಗಿ ಆಚರಿಸಿದರು.
ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ ಮಾತನಾಡಿ,ಜಾತಿ,ಧರ್ಮ ಬೇಧವಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ವಸಂತ ನಾಯ್ಕ ಯುವಕರಿಗೆ ಮಾದರಿಯಾಗಿದ್ದಾರೆ.ಇಂತಹ ಯುವಕರು ರಾಜಕೀಯದಲ್ಲಿ ಮುಂದೆಬರಬೇಕು ವಸಂತ ನಾಯ್ಕರಿಗೆ ಇನ್ನಷ್ಟು ಅವಕಾಶ ರಾಜಕೀಯದಲ್ಲಿ ಸಿಗುವಂತಾಗಲಿ ಎಂದು ಹೇಳಿದರು
ಕಾಂಗ್ರೆಸ್ ಮುಖಂಡ ಎಸ್.ಆರ್.ಹೆಗಡೆ,ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಸಿದ್ದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ, ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ಲಾ ಹೆರೂರ, ಸುಮಂಗಲಾ ನಾಯ್ಕ, ಉದ್ಯಮಿ ಉಪೇಂದ್ರ ಪೈ, ಶಿರಸಿ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಪ್ರಮುಖರಾದ ಸಿ.ಆರ್.ನಾಯ್ಕ, ಸಾವೇರ ಡಿಸಿಲ್ವಾ, ಸೀತಾರಾಮ ಗೌಡ, ಎಚ್.ಕೆ.ಶಿವಾನಂದ, ಸುರೇಂದ್ರ ಗೌಡ, ಶಾಂತಕುಮಾರ ಪಾಟೀಲ್, ಎಸ್.ಆರ್.ಹೆಗಡೆ, ವಿವೇಕ ಭಟ್, ರಾಮಣ್ಣ ಗುಡ್ಡೆಮನೆ ಉಪಸ್ಥಿತರಿದ್ದರು. ಚಂದ್ರಕಾಂತ ನಾಯ್ಕ ಕಲ್ಲೂರ ಕಾರ್ಯಕ್ರಮ ನಿರೂಪಿಸಿದರು. ಜನ್ಮದಿನ ಅಭಿನಂದನಾ ಸಮಿತಿ ಅಧ್ಯಕ್ಷ ನಾಸಿರವಲ್ಲಿ ಖಾನ್ ಸ್ವಾಗತಿಸಿ-ಪ್ರಾಸ್ತಾವಿಕ ಮಾತನಾಡಿದರು.