ಆದ್ಯೋತ್ ಸುದ್ದಿನಿಧಿ:
ಸರಕಾರ ಕೃಷಿಕರಿಗೆ ಅತ್ಯಗತ್ಯ ದಾಖಲೆಯಾದ ಪಹಣಿ ಬೆಲೆಯನ್ನು 15ರೂ.ರಿಂದ 25 ರೂ ಗೆ ಬೆಲೆ ಏರಿಕೆ ಮಾಡಿರುವುದನ್ನು ಚಿತ್ರದುರ್ಗ ಭರಮಸಾಗರದ ಕಾಂಗ್ರೆಸ್ ಮುಖಂಡ ಎಸ್ಎಂಎಲ್ ಪ್ರವೀಣ್ ತೀವ್ರವಾಗಿ ಖಂಡಿಸಿದ್ದಾರೆ.
ಸಣ್ಣ ಮತ್ತು ಅತಿ ಸಣ್ಣ ಸಾಲ ಸೌಲಭ್ಯ ಪಡೆಯಲು,ಇಲಾಖೆಗಳಿಂದ ಲಭ್ಯವಾಗುವ ಸೌಲಭ್ಯವನ್ನು ಪಡೆಯಲು, ಸಹಕಾರಿ ಸಂಘಗಳಿಂದ ಬೆಳೆ ಸಾಲ,ಇನ್ನಿತರ ಸಹಾಯ ಪಡೆಯಲು ಪಹಣಿ ಅಗತ್ಯವಾಗಿ ಬೇಕಾಗಿದೆ.
ಕೆಲವೊಮ್ಮೆ ವರ್ಷದಲ್ಲಿ ಕೃಷಿಕರು ಹತ್ತಾರು ಬಾರಿ ಪಹಣಿಯನ್ನು ಪಡೆಯಬೇಕಾಗಿದೆ ಪರಿಸ್ಥಿತಿಯೂ ಇದೆ. ಇದರ ಬೆಲೆ ಏರಿಸಿ ರೈತರ ಜೇಬಿಗೆ ಕತ್ತರಿ ಹಾಕಿರುವುದು ಸರಿ ಇಲ್ಲ
ಪಹಣಿ ಬೆಲೆಯನ್ನು ಇದ್ದಕ್ಕಿದ್ದಂತೆ ಏರಿಸಿರುವುದು ರಾಜ ಬಿಜೆಪಿ ಸರ್ಕಾರವು ರೈತರ ವಿರೋಧಿಯಾಗಿರುವುದು ಸ್ಪಷ್ಟವಾಗಿದೆ.
2017 ರಲ್ಲಿ ಇದರ ಬೆಲೆ 10 ಇತ್ತು.25 ರೂಗೆ ಏರಿಸಿರುವುದು ಸಮರ್ಥನೆ ಅಲ್ಲ. ಇದು ರೈತರ ವಿರೋಧಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#######
ಸಿದ್ದಾಪುರದಲ್ಲಿ ಅಪರಿಚಿತ ಶವ ಪತ್ತೆ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತಿಹಳ್ಳಿ ಗ್ರಾಮದ ಇರಾಸೆ ಅರಣ್ಯದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ
25 ರಿಂದ 30 ವರ್ಷ ಪ್ರಾಯದ ಯುವಕನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ