ಆದ್ಯೋತ್ ಸುದ್ದಿನಿಧಿ:
ಈಡೀ ದೇಶಾದ್ಯಂತ ಇಂದು ಚರ್ಚೆ ನಡೆಯುತ್ತಿರುವ ವಿಷಯ ಎಂದರೆ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನದ ಬಗ್ಗೆ. ಕರ್ನಾಟಕ ವಿಧಾನಸಭೆಯಲ್ಲಿ ಇಲ್ಲಿಯವರೆಗೆ ಸಭಾಧ್ಯಕ್ಷರಾದವರು ಒಲ್ಲದ ಮನಸ್ಸಿನಿಂದಲೇ ಹುದ್ದೆಯನ್ನು ಅಲಂಕರಿಸಿದ್ದರು ಅವಧಿ ಮುಗಿಯುವವರೆಗೂ ಕೆಂಡದ ಮೇಲೆ ಕುಳಿತಂತೆ ಆಡುತ್ತಿದ್ದರು. ಆದರೆ ಈ ಬಾರಿ ಭಾರತೀಯ ಜನತಾಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಭಾಧ್ಯಕ್ಷ ಸ್ಥಾನಕ್ಕೆ ಯಾರು? ಎನ್ನುವ ಪ್ರಶ್ನೆ ಎದ್ದಿತ್ತು. ರಾಜಕೀಯ ಲೆಕ್ಕಾಚಾರ ಏನೇ ಇರಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಭಾಧ್ಯಕ್ಷರಾಗುತ್ತಾರೆ ಎಂದಾಗ ಪಕ್ಷಾತೀತವಾಗಿ ಅದನ್ನು ಸ್ವಾಗತಿಸಲಾಯಿತು.
ಕಾರಣ ಅವರು ಅಜಾತಶತ್ರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಇವರು ಪಕ್ಷ ನೀಡಿದ ಯಾವುದೇ ಕೆಲಸವನ್ನು ಇಲ್ಲ ಎಂದವರಲ್ಲ ಹೀಗಾಗಿ ಕಾಗೇರಿಯವರು ಖುಷಿಯಿಂದಲೇ ಒಪ್ಪಿದರು. ಇದು ಅವರ ಪಕ್ಷದ ನಿಷ್ಠೆ.
ಯಾವಾಗಲೂ ಶಾಂತವಾಗಿರುವ,ಹಸನ್ಮುಖಿಗಳಾಗಿರುವ ಕಾಗೇರಿಯವರು ಸಭಾಧ್ಯಕ್ಷರಾದರೆ ಅಧಿವೇಶನದಲ್ಲಿ ಸರಕಾರವನ್ನು ಹಣಿದು ಹಾಕಬಹುದು ಎಂದು ವಿರೋದಪಕ್ಷಗಳು, ಯಾವ ರೀತಿ ಬೇಕಾದರೂ ಹಾರಿಕೆಯ ಉತ್ತರ ನೀಡಿ ಅಧಿವೇಶನ ಮುಗಿಸಬಹುದು ಎಂದು ಆಡಳಿತ ಪಕ್ಷ ಲೆಕ್ಕಾಚಾರ ಹಾಕಿತ್ತು ಆದರೆ ಮೊದಲ ಅಧಿವೇಶನದಿಂದಲೇ ತಾನೇಷ್ಟು ಖಡಕ್ ಮನುಷ್ಯ ಎನ್ನುವುದನ್ನು ಸಾಬೀತುಪಡಿಸಿದರು.
ಅನವಶ್ಯಕ ಗಲಾಟೆ ಮಾಡುವ ವಿರೋಧ ಪಕ್ಷದವರನ್ನು ನಿಯಮಾವಳಿಯ ಬಗ್ಗೆ ಎಚ್ಚರಿಸಿ ತಹಬಂದಿಗೆ ತಂದರಲ್ಲದೆ ಅಧಿವೇಶನಕ್ಕೆ ಗೈರಾಗುವ, ತಯಾರಿಯಿಲ್ಲದೆ ಬರುವ ಸಚೀವರಿಗೆ ಬಿಸಿ ಮುಟ್ಟಿಸಿ ತಾನು ಏನು ಎನ್ನುವುದನ್ನು ತೋರಿಸಿದರು. ಜನರ ಸಮಸ್ಯೆಗಳಿಗೆ ಸರಕಾರದ ಸ್ಪಂದನೆ ಸಿಗದಿದ್ದರೆ ಗರಂ ಆದ ಉದಾಹರಣೆ ಕಳೆದ ಮೂರೂವರೆ ವರ್ಷದಲ್ಲಿ ಸಾಕಷ್ಟು ಇದೆ. ಸಾರ್ವಜನಿಕ ಸಮಸ್ಯೆಯ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳಿಗೆ ಅವಕಾಶ ಕೊಟ್ಟು ಎಷ್ಟೋ ಸಮಸ್ಯೆ ಬಗೆಹರಿದು ಜನರಿಗೆ ಅನುಕೂಲವಾಗಿದೆ. ಇದು ಸರಕಾರದ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಮೂಡಲು ಕಾರಣವಾಗಿದೆ.
ಸಂವಿಧಾನ ಎನ್ನುವುದರ ಬಗ್ಗೆ ಅರಿವಿಲ್ಲದೆ ಶಾಸನಸಭೆಗೆ ಬರುವವರಿಗೆ ಸಂವಿಧಾನ ಓದು ಎನ್ನುವ ಕಾರ್ಯಕ್ರಮ ಮಾಡುವ ಮೂಲಕ ಅರಿವು ಮೂಡಿಸಿದವರು ಕಾಗೇರಿಯವರು. ಈಡೀ ದೇಶ ಕರ್ನಾಟಕ ವಿಧಾನಸಭೆಯತ್ತ ಮುಖ ಮಾಡುವಂತೆ ಮಾಡಿದರು. ಜಡ್ಡುಗಟ್ಟಿದ್ದ ಸ್ಪೀಕರ್ ಕಚೇರಿಯವರು ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡಿದರು. ಇಲ್ಲಿಯವರೆಗೆ ಸಭಾಧ್ಯಕ್ಷ ಸ್ಥಾನ ಎನ್ನುವುದು ಸ್ಟಾರ್ ಅಲ್ಲದ ಹುದ್ದೆಯಾಗಿತ್ತು ಆದರೆ ಕಾಗೇರಿ ಈ ಹುದ್ದೆ ಮುಖ್ಯಮಂತ್ರಿ ಹುದ್ದೆಗಿಂತ ಹೆಚ್ಚಿನದು ಎಂದು ಸಾಬೀತು ಪಡಿಸಿದರಲ್ಲದೆ ಈ ಹುದ್ದೆಗೆ ಸ್ಟಾರ್ ವ್ಯಾಲ್ಯೂವನ್ನು ತಂದರು.
ಮುಂದಿನ ದಿನಗಳಲ್ಲಿ ಸಭಾಧ್ಯಕ್ಷರ ಹುದ್ದೆಗೆ ಎಲ್ಲಾ ಪಕ್ಷದ ಸದಸ್ಯರೂ ಮುಗಿಬಿದ್ದರೂ ಆಶ್ಚರ್ಯವಿಲ್ಲ. ಆದರೆ ಕಾಗೇರಿಯವರಂತೆ ಹುದ್ದೆಯನ್ನು ನೀಭಾಯಿಸುವುದು ಅಷ್ಟು ಸುಲಭವಲ್ಲ
ರವಿವಾರ ನಡೆಯಲಿರುವ ಅಭಿನಂದನಾ ಸಭೆಗೆ ಎಲ್ಲಾ ಪಕ್ಷದ ಗಣ್ಯರು ಬರಲಿದ್ದಾರೆ. ವಿವಿಧ ಗಣ್ಯರು ಬರಲಿದ್ದಾರೆ ಅಭಿಮಾನಿಗಳಂತೂ ಬರುತ್ತಾರೆ ಇದು ನಮ್ಮ ಕಾಗೇರಿ ನಮ್ಮ ಹೆಮ್ಮೆ ಎಂಬ ಅಭಿಮಾನದಿಂದ
#####
#####
#####