ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಶ್ರೀಮಾರಿಕಾಂಬಾ ಕಾಲೇಜ್ ಮೈದಾನಾದಲ್ಲಿರವಿವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಪಕ್ಷಾತೀತವಾಗಿ ಅವರ ಅಭಿಮಾನಿಗಳು ಅಭಿನಂದನಾ ಸಭೆ ಏರ್ಪಡಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಗೇರಿಯವರಿಗೆ ಅಭಿನಂದನೆ ಸಲ್ಲಿಸಿದರು.

ಉಸ್ತುವಾರಿ ಸಚೀವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚೀವ ಶಿವರಾಮ್ ಹೆಬ್ಬಾರ್,ಮಾಜಿ ಸಚೀವ ಆರ್.ವಿ.ದೇಶಪಾಂಡೆ,ಲೊಕೋಪಯೋಗಿ ಸಚೀವ ಸಿ.ಸಿ.ಪಾಟೀಲ,ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಶಾಸಕ ಸುನಿಲ್ ನಾಯ್ಕ,ದಿನಕರ ಶೆಟ್ಟಿ,ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರು,ಗಣಪತಿ ಉಳ್ವೇಕರ್,ಶಾಂತಾರಾಮ ಸಿದ್ದಿ,ನಿಗಮದ ಅಧ್ಯಕ್ಷ ಗೋವಿಂದ ನಾಯ್ಕ,ಹಾಲು ಒಕ್ಕೂಟದ ಶಂಕರ ಮೊಗದ ಮುಂತಾದವರು ಭಾಗವಹಿಸಿದ್ದರು.

ಬಸವರಾಜ ಬೊಮ್ಮಾಯಿ ಮಾತನಾಡಿ,ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಬಿವೃದ್ಧಿಯ ಹರಿಕಾರರಾಗಿದ್ದು ಅಜಾತಶತ್ರುವೂ ಆಗಿದ್ದಾರೆ. ಅವರ ಒತ್ತಾಸೆಯಿಂದಲೇ ಇಂದು ಸುಮಾರು ೨೫೦ಕೋಟಿರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.ಸಾರ್ವಜನಿಕ ಜೀವನಕ್ಕೆ ಒಬ್ಬ ಕಾರ್ಯಕರ್ತನಾಗಿ ಸಮಾಜ ಸೇವಕನಾಗಿ ಕಾಲಿಟ್ಟ ಕಾಗೇರಿಯವರು ಇಂದು ಈಡಿ ರಾಜ್ಯದ ಪ್ರತಿಯೊಬ್ಬ ಮನೆಯಲ್ಲಿ ಹಾಗೂ ಮನದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಘಟನಾ ಸಾಮರ್ಥ್ಯ,ಆದರ್ಶ ತತ್ವಗಳು,ಎಲ್ಲಿಯೂ ಕೂಡ ರಾಜಿ ಮಾಡಿಕೊಳ್ಳದೇ ಯಾವುದೇ ಆಸೆ ಆಮಿಷಗಳಿಗೆ ಒಳಗಾಗುವುದಿಲ್ಲ ಕೆಲವೇ ಕ್ಷಣದಲ್ಲಿ ಕಠೋರವಾದ ನಿರ್ದಾಕ್ಷಿಣ್ಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಶಾಸಕರಾಗಿ ಸಚಿವರಾಗಿ ಹಾಗೂ ಸಭಾದ್ಯಕ್ಷರಾಗಿ ಕರ್ತವ್ಯ ನಿರ್ವಹಿಸುವಾಗ ಆಯಾ ಸ್ಥಾನದ ಪ್ರಭಾವವನ್ನು ವಯಕ್ತಿಕವಾಗಿ ಬಳಸಿಕೊಂಡಿದ್ದು ಇಲ್ಲ.

ಎಲ್ಲರ ಜೊತೆ ಸ್ನೇಹಮಯವಾಗಿ ವರ್ತಿಸುತ್ತಾರೆ. ಅವರು ಯಾವ ಕೆಲಸವನ್ನು ವಹಿಸಿಕೊಳ್ಳುತ್ತಾರೋ ಅದು ಶಾಸಕ, ಸಚಿವ, ಕಾರ್ಯಕರ್ತ, ಸಭಾದ್ಯಕ್ಷ ಯಾವುದೇ ಆಗಿರಲಿ ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಶಿಕ್ಷಣ ಮಂತ್ರಿಯಾಗಿ ಅವರು ಮಾಡಿರುವ ಕೆಲಸಗಳು, ಶಿಕ್ಷಣಕ್ಕೆ ಹೊಸ ದಿಕ್ಕನ್ನು ಕೊಟ್ಟವರು.ವಿಧಾನ ಸಭೆಯಲ್ಲಿ ಕಾಗೇರಿಯವರು ಸಂವಿಧಾನದ ಬಗ್ಗೆ ಜಾಗ್ರತಿ ಮೂಡಿಸಲು ಒಂದು ಚಿಂತನ ಮಂತನ ಮಾಡಿದ ಹೆಗ್ಗಳಿಕೆ ಕಾಗೇರಿಯವರಿಗೆ ಸಲ್ಲುತ್ತದೆ. ಚುಣಾವಣೆಯಲ್ಲಿ ಬದಲಾವಣೆಗಳನ್ನು ತರಲು ಹಾಗೂ ಒಂದು ದೇಶ ಒಂದೇ ಚುಣಾವಣೆ ನಡೆಸುವ ಬಗ್ಗೆ ಚರ್ಚೆ ಮಾಡಿರುವ ಹಿರಿಮೆ ಅವರಿಗೆ ಸಲ್ಲುತ್ತದೆ. ತಮ್ಮ ಕರ್ತವ್ಯದಲ್ಲಿ ಬದ್ದತೆಯಿಂದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಪತ್ರಿಕಾರಂಗಕ್ಕೆ ಚ್ಯುತಿ ಬಾರದಂತೆ ಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರಕಾರ ಕಟಿಬದ್ದವಾಗಿದೆ ಜಿಲ್ಲೆಯ ಜನರ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುಮಟಾದಲ್ಲಿ ಮಾಡುವ ತೀರ್ಮಾನ ಮಾಡಿದ್ದೇವೆ.ವಿಶ್ವವಿದ್ಯಾಲಯ ಬೇಕೆಂಬ ಬೇಡಿಕೆ ಇದೆ ಈ ಭಾಗಕ್ಕೆ ಸಂಪೂರ್ಣ ಆಗಬೇಕು ಎಂದರೆ ಇನ್ವಾರಮೆಂಟ್ ವಿಶ್ವವಿದ್ಯಾಲಯವನ್ನು ಮಾಡಬೇಕೆಂದು ತೀರ್ಮಾನಿಸಿದ್ದೇನೆ.ಅರಣ್ಯ ಅತಿಕ್ರಮಣದಾರರ ವಿಚಾರವಾಗಿ ಅವರೆಲ್ಲರ ಹಿತರಕ್ಷಣೆಗಾಗಿ ಮತ್ತೊಮ್ಮೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಫೀಲು ಕೊಡುತ್ತೇವೆ. ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಕೊಡದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಸುಪ್ರೀಂ ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೆ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ, ಅರಣ್ಯ ರಕ್ಷಣೆ ಮತ್ತು ಜೀವ ವೈವಿಧ್ಯತೆಯನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಹೇಳಿದರು. ಈಗಾಗಲೇ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಮೂರು ತಲೆಮಾರಿನ ದಾಖಲೆ ಕೊಡಬೇಕು ಎಂಬ ನಿಯಮವಿದೆ. ಅದನ್ನು ಒಂದು ತಲೆಮಾರಿಗೆ ಇಳಿಸಬೇಕು ಎಂದು ನಾವು ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವರದಿ ನೀಡಲಿದೆ. ಆದರೆ, ಅಲ್ಲಿಯವರೆಗೆ ಅತಿಕ್ರಮಣದಾರರಿಗೆ ತೊಂದರೆಕೊಡುವ ಪ್ರಶ್ನೆಯೇ ಇಲ್ಲ ಎಂದು ಬೊಮ್ಮಾಯಿ ಭರವಸೆ ನೀಡಿದರು.

ಅಭಿನಂದನೆ ಸ್ವೀಕರಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಅಭಿನಂದನಾ ಸಮಾರಂಭ ವೈಯಕ್ತಿಕವಾಗಿ ಮುಜುಗರ ಪಡುವ ಸನ್ನಿವೇಶವಾದರೂ ಮುಂದಿನ ದಿನಗಳಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕುಟುಂಬದಲ್ಲಿ ಸಿಕ್ಕಿರುವ ಸಂಸ್ಕಾರ ಹಾಗೂ ಪ್ರೋತ್ಸಾಹವೇ ನಾನು ಈ ಮಟ್ಟಕ್ಕೆ ಏರಲು ಕಾರಣವಾಗಿದೆ.ಅಂಕೋಲಾ ಹಾಗೂ ಶಿರಸಿ ಕ್ಷೇತ್ರದ ಜನ ನೀಡಿದ ಬೆಂಬಲ ಯಾವತ್ತೂ ಮರೆಯಲು ಸಾಧ್ಯವಿಲ್ಲ. ತಮ್ಮ ಮನೆಯ ಸದಸ್ಯ ಎಂದು ಕೈಹಿಡಿದು ಮುನ್ನಡೆಸಿದ್ದೀರಿ. ನಿಮ್ಮ ಋಣ ತೀರಿಸುವುದು ನನ್ನ ಕರ್ತವ್ಯವಾಗಿದೆ.ಪರಿಸರ ವಿಶ್ವವಿದ್ಯಾಲಯ ಘೋಷಣೆಯಿಂದ ರಾಜ್ಯದ ಹಿತದೃಷ್ಟಿಯಿಂದ ತುಂಬಾ ಮುಖ್ಯವಾಗಿದೆ. ಗ್ಲೋಬಲ್ ವಾರ್ಮಿಂಗ್ ತಡೆಯಲು ಪರಿಸರ ವಿವಿ ತುಂಬಾ ಸಹಕಾರಿಯಾಗಲಿದೆ.ಉತ್ತರ ಕನ್ನಡ ವಿಶೇಷವಾದ ಜಿಲ್ಲೆಯಾಗಿದ್ದು ಅಭಿವೃದ್ಧಿ ದೃಷ್ಟಿಯಿಂದ ತಾಳಗುಪ್ಪಾ-ಹುಬ್ಬಳ್ಳಿ ರೈಲ್ವೆ ಯೋಜನೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.


#################


About the author

Adyot

Leave a Comment