ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಜೊಯಿಡಾ ತಾಲೂಕಿನ ರಾಮನಗರದ ಸೀತಾವಾಡ ಗ್ರಾಮದ ಹುಬ್ಬಳ್ಳಿ- ಗೋವಾ ಮಾರ್ಗದಲ್ಲಿ ತಮಿಳುನಾಡು ಮೂಲದ ಮಹೇಂದ್ರ ಬೊಲೇರೊ ವಾಹನ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೆ ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ.
ಖಾನಾಪುರದ ಘಾರ್ಲಿ ಮೂಲದ ಪಾರ್ವತಿ ಗಾವಡಾ,ದುರ್ಗೆ ಕೊಲ್ಸೇಕರ,ತುಳಸಿ ಗಾವಡಾ ಮೃತಪಟ್ಟ ದುರ್ದೈವಿಗಳಾಗಿದ್ದು ರಾಮನಗರದ ಪಿಗ್ಮಿ ಏಜಂಟ್ ವಿಪನ್ ತಾಳ್ವೆ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶುಕ್ರವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು
ತಮಿಳುನಾಡಿನಿಂದ ಪ್ರವಾಸೋದ್ಯಮಕ್ಕಾಗಿ ಗೋವಾಕ್ಕೆ ತೆರಳುತ್ತಿದ್ದ ಟಿಎನ್ 69ಬಿ ಕ್ಯೂವಿ 8067 ಸಂಖ್ಯೆಯ ಮಹೀಂದ್ರಾ ಬೊಲೆರೊ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.