ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಚಿತ್ತಾಪುರದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಮಂಗಳೂರಿನಿಂದ ಬೆಂಗಳೂರಿನವರೆಗೆ ನಡೆಯುತ್ತಿರುವ ಪಾದಯಾತ್ರೆಯ ಜಾಗೃತಿ ಸಭೆ ಗುರುವಾರ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ,ರಾಜ್ಯದಲ್ಲಿ ಸುಮಾರು ೭೦ಲಕ್ಷದಷ್ಟಿರುವ ನಾಮದಾರಿ,ಬಿಲ್ಲವ,ಪೂಜಾರಿ,ದೀವರು ಸಮುದಾಯದವರು ಒಗ್ಗಟ್ಟಾಗದಂತೆ ಕೆಲವರು ನಮ್ಮ ಧಾರ್ಮಿಕ ಕೇಂದ್ರದ ಮೇಲೆ ಕಣ್ಣು ಹಾಕಿ ದೌರ್ಜನ್ಯ ಎಸಗುತ್ತಿದ್ದು ನಮ್ಮ ಸಮುದಾಯದವರನ್ನು ಒಡೆಯುವ ಕೆಲಸಕ್ಕೆ ಮುಂದಾದರೆ ಸಮುದಾಯ ಕ್ಷಮಿಸುವುದಿಲ್ಲ.ನಮ್ಮ ಸಮಾಜದ ಸಚಿವರು ಹಾಗೂ ಶಾಸಕರಿಂದ ಸಮಾಜಕ್ಕೆ ಪ್ರಯೋಜನ ಇಲ್ಲ.
ಸೇಂದಿಯ ಹೆಸರಿನಲ್ಲಿ ಈಡಿಗರು ಒಗ್ಗಟ್ಟಾಗದಂತೆ ಸೇಂದಿ ಬಂದ ಮಾಡಿದ ಸರಕಾರ ನಮ್ಮನ್ನು ತುಳಿಯುತ್ತಿದೆ. ಬೇರೆ ಸಮಾಜದ, ಬೇರೆ ಸಮುದಾಯದವರಲ್ಲಿ ಇರುವಷ್ಟು ಸಂಘಟನೆಯ ಒಗ್ಗಟ್ಟು ನಮ್ಮಲ್ಲಿ ಇಲ್ಲ. ಇದರಿಂದ ನಾವು ರಾಜಕೀಯವಾಗಿ,ಶಿಕ್ಷಣ,ಆರ್ಥಿಕ,ಧಾರ್ಮಿಕ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ.ಸ್ವಾಭಿಮಾನದ ಸಮಾÀಜದವರು ನಾವಾಗದಿದ್ದರೆ ಸಮಾಜದ ಅಭಿವೃದ್ಧಿ ಅಸಾಧ್ಯ.ರಾಜ್ಯಕಂಡ ಧೀಮಂತ ಮುಖ್ಯಮಂತ್ರಿ ದಿ ಎಸ್.ಬಂಗಾರಪ್ಪನವರು. ಅವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬೇಕೆಂಬುದು ನಮ್ಮ ಒತ್ತಾಯ. ಯಡಿಯೂರಪ್ಪನವರ ಹೆಸರಿಡುವ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಆದರೆ ಬಡವರಿಗೆ ಹಲವಾರು ಯೋಜನೆ ತಂದ ಬಂಗಾರಪ್ಪನವರ ಹೆಸರಿಡುವುದು ಸೂಕ್ತ. ಬ್ರಹ್ಮಶ್ರೀ ನಾರಾಯಣಗುರುಗಳ ಶಕ್ತಿಪೀoದ ಶಾಖಾ ಮಠವನ್ನು ಸಿದ್ದಾಪುರದಲ್ಲಿ ಸ್ಥಾಪಿಸುವ ಗುರಿ ಇದೆ ಎಂದು ಹೇಳಿದರು.
ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಕಾರ್ಯಕ್ರಮ ಉದ್ಘಾಟಿಸಿ ರಾಜಕೀಯವಾಗಿ ಹಾಗೂ ವಿವಿಧ ಕ್ಷೇತ್ರದಲ್ಲಿ ನಮ್ಮ ಸಮಾಜ ಹಿಂದೆ ಉಳಿಯಲ್ಲು ಸಮಾಜದಲ್ಲಿ ಒಗ್ಗಟ್ಟು ಇಲ್ಲದಿರುವುದೇ ಮುಖ್ಯವಾಗಿದೆ. ಗುರುಗಳ ನೇತೃತ್ವದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರೆಯುವAತಾಗಬೇಕು ಎಂದು ಹೇಳಿದರು.
ಪಾದಯಾತ್ರೆ ಸಮಿತಿ ಅಧ್ಯಕ್ಷ ಕನ್ನೇಶ ಕೋಲಸಿರ್ಸಿ ಅಧ್ಯಕ್ಷತೆವಹಿಸಿದ್ದರು. ವಸಂತ ನಾಯ್ಕ ರವೀಂದ್ರ ನಾಯ್ಕ, ಸಿ.ಎಫ್.ನಾಯ್ಕ,ರವೀಂದ್ರ ನಾಯ್ಕ, ವಿ.ಎನ್.ನಾಯ್ಕ, ಪಿ.ವಿ.ನಾಯ್ಕ ಬೇಡ್ಕಣಿ, ವಿನಾಯಕ ಕೆ.ಆರ್,ಸುರೇಶ ನಾಯ್ಕ ಸೇರಿದಂತೆ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಗರಾಜ ನಾಯ್ಕ ಮುಗದೂರು, ಈಶ್ವರ ನಾಯ್ಕ ಹಸ್ವಂತೆ, ಎಂ.ಬಿ.ನಾಯ್ಕ ಕಡಕೇರಿ, ಅರ್ಚನಾ ಸುರೇಶ ನಾಯ್ಕ ತೆಂಗಿನಮನೆ, ಶ್ರೀಧರ ನಾಯ್ಕ ಮಾವಿನಗುಂಡಿ, ಗಣಪತಿ ನಾಯ್ಕ ಕೊಂಡ್ಲಿ, ಹನುಮಂತ ಪರಶುರಾಮ ನಾಯ್ಕ ಕುಣಜಿ, ನಂದನ ನಾಯ್ಕ ಅರಶೀನಗೋಡ, ವಿನಾಯಕ ನಾಯ್ಕ ಕೊಂಡ್ಲಿ ಅವರನ್ನು ಸನ್ಮಾನಿಸಲಾಯಿತು.
ಪಾದಯಾತ್ರೆ ಸಮಿತಿ ಗೌರವಾಧ್ಯಕ್ಷ ವೀರಭದ್ರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ನಾಯ್ಕ ಕೊಂಡ್ಲಿ ನಿರ್ವಹಿಸಿದರು. ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಕನ್ನೇಶ ಕೋಲಸಿರ್ಸಿ ವಂದಿಸಿದರು. ಜಾಗೃತಿ ಸಭೆಯ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಗಳು ಪಾದಯಾತ್ರೆ ನಡೆಸಿದರು.