ಆದ್ಯೋತ್ ಸುದ್ದಿನಿಧಿ:
ಕಾರವಾರದಲ್ಲಿ “ಪಠಾಣ್” ಹಿಂದಿ ಚಲನಚಿತ್ರವನ್ನು ಪ್ರದರ್ಶಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.
ಕಾರವಾರದ ಕೋಡಿಭಾಗದಲ್ಲಿರುವ ಅರ್ಜುನ್ ಟಾಕೀಸ್ ನಲ್ಲಿ ಪಠಾಣ ಚಿತ್ರ ಪ್ರದರ್ಶನವಾಗುತ್ತಿತ್ತು.ಕಾರವಾರ ತಾಲೂಕಿನ ಮುಡಗೇರಿ ಗ್ರಾಮದ ಗ್ರಾಪಂ ಸದಸ್ಯನಂದ ಕಿಶೋರ ನಾಯ್ಕ ನೇತೃತ್ವದಲ್ಲಿ ಟಾಕೀಸ್ ಮುಂದುಗಡೆ ಪ್ರತಿಭಟನೆ ನಡೆಸಿದರು.
ಟಾಕೀಸ್ ಮೆನೆಜರ್ ಸ್ಥಳಕ್ಕೆ ಬಂದು ಸಂಜೆ ಎರಡು ಪ್ರದರ್ಶನ ಮಾಡುತ್ತಿದ್ದೆವೆ ಪ್ರತಿಭಟನೆ ಮಾಡಬೇಡಿ ಎಂದು ವಿನಂತಿಸಿದರೂ ಪ್ರತಿಭಟನಕಾರರು ಒಪ್ಪದೆ ಪ್ರತಿಭಟನೆ ಮುಂದುವರಿಸಿ ಟಾಕೀಸ್ ಒಳಗಡೆ ನುಗ್ಗಲು ಪ್ರಯತ್ನಿಸಿದರು ಈ ಸಂದರ್ಭದಲ್ಲಿ ಪೊಲೀಸ್ ರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.