ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಆರನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕು ಸಾಹಿತ್ಯಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ನೇತೃತ್ವದಲ್ಲಿ ಹೊಸುರು ಶಂಕರಮಠದಲ್ಲಿ ವಿಜೃಂಭಣೆಯಿಂದ ನಡೆಯಿತು
ಆರನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಆರ್.ಕೆ.ಹೊನ್ನೆಗುಂಡಿ ಮಾತನಾಡಿ,ಆಂಗ್ಲ ಭಾಷೆಯಿಂದ ನಮ್ಮ ಸಂಸ್ಕೃತಿಯು ಹಾಳಾಗುತ್ತಿದ್ದು ಸಂಸ್ಕಾರವAತ ಹಿರಿಯ ಜೀವಿಗಳು ತಲೆತಗ್ಗಿಸುವಂತಾಗಿದೆ ನಮ್ಮ ಮಾತೃಭಾಷೆ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹದ್ದು ಸಂಸ್ಕಾರವನ್ನು ಕಲಿಸುವಂತಹದ್ದು ಆದರೆ ಆಂಗ್ಲಭಾಷೆಯಲ್ಲಿ ಸಂಸ್ಕೃತಿಯ ಲವಲೇಶವೂ ಇಲ್ಲ. ಸರಕಾರಗಳು ಆಂಗ್ಲಮಾಧ್ಯಮದ ಶಾಲೆಗಳನ್ನು ತೆರಯಲು ಪ್ರೋತ್ಸಾಹ ನೀಡಬಾರದು ಮಾತೃಭಾ಼ಎಯಲ್ಲಿ ಕಲಿತು ಹಲವು ಸಾಧನೆ ಮಾಡಿದವರು ಉದಾಹರಣೆ ನಮ್ಮ ಮುಂದಿದೆ.ಆAಗ್ಲಭಾಷೆ ಕಲಿಯುವುದು ಮೋಹವೇ ಹೊರತು ಅದು ಅನಿವಾರ್ಯವಲ್ಲ.ಉತ್ತಮ ಸಾಹಿತ್ಯ ರಚನೆಗೆ ಪೂರ್ವಸಿದ್ದತೆ ಬೇಕು. ಗ್ರಂಥಗಳನ್ನು ಓದುವ,ಸಮಾಜದ ಮಧ್ಯದಲ್ಲಿ ಆಗುತ್ತಿರುವ ಘಟನೆಗಳನ್ನು ಅವಲೋಕಿಸುವ ಪ್ರಕೃತಿಯನ್ನು ಬೆರಗುಗಣ್ಣಿನಿಂದ ನೋಡಿ ಅನುಭವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಆಗ ಉತ್ತಮ,ಮೌಲ್ಯಯುತ ಸಾಹಿತ್ಯ ರಚನೆ ಸಾದ್ಯ ಎಂದು ಹೇಳಿದರು.
ಸಮ್ಮೇಳನವನ್ನು ಉದ್ಘಾಟಿಸಿದ ಹಿರಿಯ ವಿಜ್ಞಾನ ಲೇಖಕ ಪ್ರೋ.ನಾಗೇಶ ಹೆಗಡೆ ಮಾತನಾಡಿ,ಸರಕಾರಕ್ಕೆ ಸಾಹಿತ್ಯ ಬೇಕಾಗಿಲ್ಲ,ಭಾಷೆಯನ್ನು ಬೆಳೆಸುವುದು ಬೇಕಾಗಿಲ್ಲ ಗ್ರಂಥಾಲಯದ ಹೆಸರಿನಲ್ಲಿ ನಮ್ಮಿಮದ ಕೋಟ್ಯಂತರ ತೆರಿಗೆ ಸಂಗ್ರಹಿಸುತ್ತದೆ ಆದರೆ ಕಳೆದ ಮುರುವರ್ಷದಿಮದ ಗ್ರಂಥಾಲಯಕ್ಕೆ ಹಣಕೊಡುತ್ತಿಲ್ಲ ಹೊಸಪುಸ್ತಕಗಳನ್ನು ಖರೀದಿಸುತ್ತಿಲ್ಲ.ಪ್ರತಿಯೊಮದು ಮನೆಯಲ್ಲೂ ಪುಸ್ತಕ ಗ್ರಂಥಾಲಯ ಇರಬೇಕು ಎಂದು ಹೇಳುತ್ತಾರೆ ಆದರೆ ಯುವಕರು ನಗರಾಭಿಮುಖರಾಗಿದ್ದಾರೆ ಮೊಬೈಲ್‌ನಿಂದ ಪುಸ್ತಕ ಪ್ರೀತಿ ಮಾಯವಾಗಿದೆ ಅಕ್ಷರಲೋಕದ ಅಧಃಪತನವಾಗುತ್ತಿದೆ ಸಮ್ಮೇಳನ್ದಲ್ಲಿ ಇದರ ಬಗ್ಗೆ ಚರ್ಚೆಯಾಗಬೇಕಾಗಿದೆ. ನಮ್ಮ ಸಾಹಿತ್ಯ ಕತೆ,ಕವನ ಮನೋರಂಜನೆಗೆ ಸೀಮಿತವಾಗದೆ ಬದುಕಲು ಬೇಕಾಗುವ ವಿಷಯಗಳನ್ನು ನೀಡಬೇಕಾಗಿದೆ ನಮ್ಮ ಕೃಷಿಯಲ್ಲಿನ ಹೊಸ ಸಾಧ್ಯತೆ,ಲಾಭದಾಯಕ ಉದ್ಯೋಗ,ಜ್ಞಾನವನ್ನು ಹೆಚ್ಚಿಸುವ ವಿಷಯಗಳ ಸಾಹಿತ್ಯ ರಚನೆಯಾಗಬೇಕು ಎಂದು ಹೇಳಿದರು.
ಜಿ.ಜಿ.ಹೆಗಡೆ ಬಾಳಗೋಡ ಸಂಪಾದಕತ್ವದಲ್ಲಿ ಹೊರಬಂದ ಸಮ್ಮೇಳನದ ಸ್ಮರಸಂಚಿಕೆ ಬಿಡುಗಡೆ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಕನ್ನಡದ ಪ್ರಥಮ ರಾಜಧಾನಿ ಬನವಾಸಿ,ಕನ್ನಡಮ್ಮನ ಏಕೈಕ ದೇಗುಲ ಇರುವುದು ಭುವನಗಿರಿಯಲ್ಲಿ ಇಂತಹ ಕನ್ನಡ ವಾತಾವರಣ ಇರುವುದು ನಮ್ಮ ಜಿಲ್ಲೆಯಲ್ಲಿ ಎಂಬ ಹೆಮ್ಮೆ ನಮಗೆ ಇರಬೇಕು ಕನ್ನಡ ಭಾಷೆಗೆ ಸಹಸ್ರಮಾನದ ಇತಿಹಾಸವಿದೆ ಸಂಸ್ಕಾರವನ್ನು-ಸAಸ್ಕೃತಿಯನ್ನು ಬೆಸೆಯುವ ಶಕ್ತಿ ಭಾಷೆಗೆ ಇದೆ ಆದರೆ ಭಾಷೆಗೆ ಇಂದು ಸವಾಲು ಎದುರಾಗಿದೆ ಇದರಿಂದ ಭಾಷೆಯ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಇಂತಹ ಸಮ್ಮೇಳನದ ಮೂಲಕ ನಡೆಯಬೇಕಿದೆ ಎಂದು ಹೇಳಿದರು.
ಆಶಯ ನುಡಿಯಾಡಿದ ಸಾಹಿತ್ಯಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ,ಕೆಲವು ವ್ಯಕ್ತಿಗಳು ಮಾಧ್ಯಮಗಳಲ್ಲಿ ಪರಿಷತ್ ಅಧ್ಯಕ್ಷರು ಜೋಳಿಗೆ ಹಿಡಿದು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇಂದು ರಾಜಕೀಯ,ಧಾರ್ಮಿಕ,ಶೈಕ್ಷಣಿಕ,ಸಾಹಿತ್ಯ ಸೇರಿದಂತೆ ಯಾವುದೇ ಕೆಲಸ ಮಾಡಬೇಕಾದರೂ ಜೋಳಿಗೆ ಹಿಡಿಯಲೇ ಬೇಕು ನಾನಾಗಲಿ ನಮ್ಮ ಪರಿಷತ್‌ನ ಯಾವುದೇ ಘಟಕದವರಾಗಲಿ ಅವರ ವಯಕ್ತಿಕ ಲಾಭಕ್ಕಾಗಿ ಜೋಳಿಗೆ ಹಿಡಿಯುತ್ತಿಲ್ಲ ಕನ್ನಡಕ್ಕಾಗಿ,ಭಾಷೆಯ ಒಳಿತಿಗಾಗಿ ಎಲ್ಲಿ ಬೇಕಾದರೂ ನಾನು ಜೋಳಿಗೆ ಹಿಡಿಯಲು ಸಿದ್ದ ಹಿಂದೆ ಅಧ್ಯಕ್ಷರಾಧವರು,ಸಮ್ಮೇಳನ ನಡೆಸಿದವರು ಜೋಳಿಗೆ ಹಿಡಿಯದೇ ಮಾಡಿದ್ದಾರಯೇ? ಎಂದು ಪ್ರಶ್ನಿಸಿದರು.
ಪ್ರಾಸ್ತಾವಿಕ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ತಾಲೂಕಿನಲ್ಲಿ ಈ ಹಿಂದೆ ಐದು ತಾಲೂಕು ಸಮ್ಮೇಳನ ಹಾಗೂ ಮೂರು ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಈ ಬಾರಿಯೂ ಸಂಘಟನಾತ್ಮಕವಾಗಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಎಲ್ಲರೂ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಹೊಸಪುಸ್ತಕವನ್ನು ತಮ್ಮಣ್ಣ ಬೀಗಾರ ಬಿಡುಗಡೆಗೊಳಿಸಿ ಮಾತನಾಡಿದರು.ವಿವಿಧ ಉದ್ಘಾಟನೆ ಮಾಡಿದ ಡಾ.ಶ್ರೀಧರ ವೈದ್ಯ,ಸುಬ್ರಾಯ ಮತ್ತಿಹಳ್ಳಿ,ಮಾತನಾಡಿದರು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ,ಡಾ.ಶಶಿಭೂಷಣ ಹೆಗಡೆ,ಕೆ.ಜಿ.ನಾಗರಾಜ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಸಿ.ಎಸ್.ಗೌಡರ್,ಗುರುಪ್ರಶಾಂತ ಮುಂತಾಧವರು ಉಪಸ್ಥಿತರಿದ್ದರು.
ಸಾಹಿತ್ಯಕ ಸೇವೆ ಸಲ್ಲಿಸಿದ ಮಹನೀಯರಾದ ಡಾ.ಆರ್.ಪಿ.ಹೆಗಡೆ ಸೂಳಗಾರ,ಗೋಪಾಲ ಮಾಸ್ತರ್,ಪ್ರೋ.ವಿಠ್ಠಲ ಭಂಡಾರಿ,ರವೀAದ್ರ ಭಟ್ ಬಳಗುಳಿಯವರ ಹೆಸರಿನಲ್ಲಿ ವಿವಿಧ ದ್ವಾರಗಳನ್ನು ನಿರ್ಮಿಸಲಾಗಿತ್ತು ಸ್ವಾತಂತ್ರö್ಯ ಹೋರಾಟದಲ್ಲಿ ಭಾಘವಹಿಸಿದ್ದ ಹುಸೂರು ರಾಮ-ಲಕ್ಷö್ಮಣರ ಹೆಸರನ್ನು ಪ್ರಧಾನ ವೇದಿಕೆಗೆ ಇಡಲಾಗಿತ್ತು ವೇದಿಕೆ ಹಾಗೂ ದ್ವಾರದ ವಿಶೇಷತೆಯ ಬಗ್ಗೆ ನಾಗರಾಜ ನಾಯ್ಕ ಮಾಳಕೋಡು ವಿವರಿಸಿದರು.
ಪುಸ್ತಕದ ಮಳಿಗೆಗಳು,ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ತಹಸೀಲ್ದಾರ ಸಂತೋಷ ಭಂಡಾರಿ ಸ್ವಾಗತಿಸಿದರು. ನಿಶಾ ಮಂಜುನಾಥ ನಾಯ್ಕ ಯಕ್ಷನೃತ್ಯ ಪ್ರಸ್ತುತ ಪಡಿಸಿದರು.
ಇದಕ್ಕೂ ಮೊದಲು ಹೊಸೂರು ಬಂಕೇಶ್ವರ ವೃತ್ತದಿಂದ ಶಂಕರಮಠದವರಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.