ಆದ್ಯೋತ್ ಸುದ್ದಿನಿಧಿ:
ಅನಧಿಕೃತ ಹಣದೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಹಣದ ಸಹಿತ ವಶಕ್ಕೆ ಪಡೆದ ರೇಲ್ವೆ ಪೊಲೀಸ್ ರು ಹೆಚ್ಚಿನ ವಿಚಾರಣೆಗೆ ಪೊಲಿಸ್ ರಿಗೆ ಒಪ್ಪಿಸಿದ್ದಾರೆ.
ಮಹಾರಾಷ್ಟ್ರದ ಸಾತಾರಾ ಪಟ್ಟಣದ ರಮೇಶ ಧೋಕಳೆ ಬಂಧಿತ ವ್ಯಕ್ತಿಯಾಗಿದ್ದು,20.09ಲಕ್ಷರೂ.ಹಣದೊಂದಿಗೆ ಮಡಗಾಂವ ದಿಂದ ಎರ್ನಾಕುಲಂಗೆ ಹೋಗುವ ಕೊಂಕಣರೇಲ್ವೆಯಲ್ಲಿ ಪ್ರಯಾಣಿಸುತ್ತಿದ್ದಾಗ ರೇಲ್ವೆ ಉಪನಿರೀಕ್ಷಕ ನಿಶಾಂತ ನೇತೃತ್ವದಲ್ಲಿ ಪರಿಶೀಲಿಸುತ್ತಿರುವಾಗ ಈ ಅಕ್ರಮ ಹಣದ ಮಾಹಿತಿ ತಿಳಿದುಬಂದಿದೆ ಆಗ ವ್ಯಕ್ತಿಯನ್ನು ರೇಲ್ವೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದಿಂದ ಕಾರವಾರದವರೆಗೆ ರಸ್ತೆಯ ಮೂಲಕ ಬಂದಿದ್ದ ವ್ಯಕ್ತಿ ಕಾರವಾರದಿಂದ ಪಣಂಬೂರ್ ಕಡೆಗೆ ಹೋಗುತ್ತಿದ್ದ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು ಪೊಲೀಸ್ ರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಆದ್ಯೋತ್ ನ್ಯೂಸ್ ಗೆ ಮಾಹಿತಿ ಲಭಿಸಿದೆ.