ಆದ್ಯೋತ್ ಸುದ್ದಿನಿಧಿ
ಸಿದ್ದಾಪುರ ನ್ಯಾಯಾಲಯದಲ್ಲಿ ಫೆ.11 ರಂದು ಲೋಕ್‌ಅದಾಲತ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ನ್ಯಾಯಾಧೀಶ ತಿಮ್ಮಯ್ಯ ಜಿ. ಮಾಹಿತಿ ನೀಡಿದರು.
ಲೊಕ್‌ಅದಾಲತ್ ನಲ್ಲಿ ರಾಜಿ ಮಾಡುವ ಮೂಲಕ ಕೇಸ್ ಬಗೆಹರಿಸಲಾಗುವುದು ಇದರಿಂದ ಸಮಯ,ಹಣ ಉಳಿತಾಯ ವಾಗುತ್ತದೆ. ಚೆಕ್ ಬೌನ್ಸ್ ವ್ಯಾಜ್ಯ,ಜಮೀನಿನ ಬೆಟ್ಟದ ತಕರಾರು ವ್ಯಾಜ್ಯ,ಗಂಡ- ಹೆಂಡತಿ ವ್ಯಾಜ್ಯ,ಹೆಸ್ಕಾಂ,ಬ್ಯಾಂಕ್ ಸೇರಿದಂತೆ ರಾಜಿಸಂಧಾನದ ಮೂಲಕ ಬಗೆಹರಿಸಬಹುದಾದ ವ್ಯಾಜ್ಯಗಳನ್ನು ಬಗೆಹರಿಸಲಾಗುವುದು. ಇದಲ್ಲದೆ ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಬಗೆಹರಿಸಲಾಗುವುದು. ಇಲ್ಲಿ ಒಮ್ಮೆ ಬಗೆಹರಿದರೆ ಪುನಃ ಕೋರ್ಟ್ ಗೆ ಅಲೆದಾಡುವ ಕೆಲಸವಿಲ್ಲ ವ್ಯಾಜ್ಯ ನಡೆಸಿದರೆ ಮನಸ್ತಾಪ ಮುಂದುವರಿಯುತ್ತದೆ ಇದರಿಂದ ಸಾಕಷ್ಟು ನಷ್ಟವೂ ಆಗುತ್ತದೆ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಳೆದ ಬಾರಿ ನಡೆದ ಲೋಕ್‌ಅದಾಲತ್‌ನಲ್ಲಿ ಬಹಳ ಹಳೆಯದಾದ ವ್ಯಾಜ್ಯಗಳೂ ಸೇರಿದಂತೆ 132 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಜಿಲ್ಲೆಯಲ್ಲಿ ಅತಿಸಣ್ಣ ನ್ಯಾಯಾಲಯ ನಮ್ಮದಾಗಿದೆ ಆದರೆ ನಾವು ವ್ಯಾಜ್ಯಗಳ ಬಗೆಹರಿಸುವಲ್ಲಿ ಜಿಲ್ಲೆಯಲ್ಲೆ ಪ್ರಥಮ ಸ್ಥಾನದಲ್ಲಿದ್ದೆವೆ. ನ್ಯಾಯಾಲಯದಲ್ಲಿ
13೦೦ಕ್ಕೂ ಹೆಚ್ಚು ಪ್ರಕರಣಗಳಿತ್ತು ಕಳೆದ ಆರು ತಿಂಗಳ ಅವಧಿಯಲ್ಲಿ ಸಾಕಷ್ಟು ವ್ಯಾಜ್ಯಗಳು ಬಗೆಹರಿದಿದ್ದು ಈಗ ಕೇವಲ 75೦ ಪ್ರಕರಣಗಳಿವೆ ಇದಕ್ಕೆ ಇಲ್ಲಿಯ ಜನತೆ,ವಕೀಲರು,ಪೊಲೀಸ್,ಹೆಸ್ಕಾಮ,ಬ್ಯಾಂಕ್ ಅಧಿಕಾರಿಗಳ ಸಹಕಾರವೇ ಕಾರಣವಾಗಿದೆ ಎಂದು ಹೇಳಿದರು.
#####
ತಹಸೀಲ್ದಾರ ಕಚೇರಿಯಲ್ಲಿ ಮತದಾನ ಪ್ರಾತ್ಯಕ್ಷಿಕೆ
ಸಿದ್ದಾಪುರ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ತಹಸೀಲ್ದಾರ ಮಂಜುನಾಥ ಮುನ್ನೋಳಿ ಅಧ್ಯಕ್ಷತೆಯಲ್ಲಿ ಮತದಾನ ಪ್ರಾತ್ಯಕ್ಷಿಕೆ ನಡೆಯಿತು.
ಮಂಜುನಾಥ ಮುನ್ನೋಳ್ಳಿ ಮಾತನಾಡಿ,ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಮತದಾನದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಮತದಾನದ ಯಂತ್ರದ ಬಗ್ಗೆ ನಾವು ಚಲಾಯಿಸುವ ಮತದ ಖಚಿತತೆಯ ಬಗ್ಗೆ ಇಲ್ಲಿ ತಿಳಿಸಲಾಗುವುದು ಜನರು ಇಲ್ಲಿ ಮತಚಲಾಯಿಸುವ ಮೂಲಕ ತಿಳಿದುಕೊಳ್ಳಬಹುದು ನಾವು ಯೋಚಿಸಿದ ವ್ಯಕ್ತಿಗೆ ಮತಚಲಾಯಿಸಿದ್ದೆವೆ ಎನ್ನುವ ಖಚಿತತೆ ಈ ವಿವಿಪ್ಯಾಟ್‌ನಲ್ಲಿ ತಿಳಿಯುತ್ತದೆ ಇದು ಸತ್ಯದ ಕೈಗನ್ನಡಿಯಾಗಿದೆ ಇದು ಈ ಪ್ರಾತ್ಯಕ್ಷಿಕೆಯ ಘೋಷಣೆಯೂ ಆಗಿದೆ. ಮುಂದೆ ನಡೆಯುವ ಚುನಾವಣೆಯಲ್ಲಿ ವಿಶ್ವಾಸದಿಂದ ಮತದಾನ ಮಾಡಲು ಇದು ಅನುಕೂಲವಾಗುತ್ತದೆ. ಇದೊಂದು ಅಣುಕು ಮತದಾನವಾಗಿದ್ದು ತಾಲೂಕಿನಾದ್ಯಂತ ಪ್ರತಿ ಗ್ರಾಪಂ ಮಟ್ಟದಲ್ಲೂ ಈ ಪ್ರಾತ್ಯಕ್ಷಿಕೆ ವಾಹನ ಸಂಚರಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಭಾಗ ಚುನಾವಣಾಧಿಕಾರಿ ಅರವಿಂದ ಪಾಟೀಲ,ಶಿರಸ್ತೆದಾರ ಎನ್.ಐ.ಗೌಡ, ಸಂಗೀತಾ ಭಟ್ಟ ಡಿ.ಎಂ.ನಾಯ್ಕ,ರವಿ ಗೌಡರ್,ಎಪಿಎಂಸಿ ಅಧಿಕಾರಿಗಳಾದ ಮಂಗೇಶ ನಾಯಕ,ನಾಗರಾಜ ನಾಯ್ಕ, ಕಾಂಗ್ರೆಸ್ ಪಕ್ಷದ ಕೆ.ಟಿ.ಹೊನ್ನೆಗುಂಡಿ ಮುಂತಾಧವರು ಉಪಸ್ಥಿತರಿದ್ದರು.