ಆದ್ಯೋತ್ ಸುದ್ದಿನಿಧಿ
ಸಿದ್ದಾಪುರ ಪಟ್ಟಣದಲ್ಲಿ ಕರ್ಣಾಟಕ ಬ್ಯಾಂಕ್ ನ 902ನೇ ಶಾಖೆ ಮತ್ತು ಮಿನಿ ಇ-ಲಾಬಿಯನ್ನು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಿದರು.
ಕರ್ಣಾಟಕ ಎನ್ನುವುದು ಶುದ್ಧರೂಪವಾಗಿದ್ದು ಇಂದು ಪ್ರತಿಯೊಂದರಲ್ಲೂ ಅಶುದ್ಧರೂಪವನ್ನೆ ಕಾಣುತ್ತಿದ್ದೆವೆ ದೇಶದಲ್ಲಿ ನಮ್ಮತನವನ್ನು ಉಳಿಸುವ ಕೆಲಸ ಮಾಡಬೇಕು.ಕರ್ಣಾಟಕ ಎನ್ನುವ ಹೆಸರು ನಮ್ಮತನದ ಸೊಗಡನ್ನು ತಿಳಿಸುತ್ತದೆ ನಮ್ಮ ರಾಜ್ಯಕ್ಕೆ ಅದೇ ಹೆಸರನ್ನು ಇಡಬೇಕಿತ್ತು
ಅದೇ ರೀತಿ ಕರ್ಣಾಟಕ ಬ್ಯಾಂಕ್ ನಮ್ಮದೇ ಆಗಿದ್ದು ನಮ್ಮತನವನ್ನು ಹೊಂದಿದೆ. ಅನ್ಯಭಾಷೆಗಳು ನಮ್ಮ ತಲೆಗೆ ಹೆಬ್ಬಾವಿನಂತೆ ಬಾಯಿ ಹಾಕಿರುವ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ನ ಇಂದಿನ ಕಾರ್ಯಕ್ರಮವೂ ನಮ್ಮತನದಿಂದಲೇ ಕೂಡಿದ್ದು ಕರ್ಣಾಟಕದ ಸಂಸ್ಕೃತಿಯನ್ನು ಉಳಿಸುವಂತಹದ್ದಾಗಿದೆ.ವಿದ್ಯೆಯನ್ನು ಕಲಿತೊಡನೆ ನಮ್ಮ ಸಂಸ್ಕೃತಿಯಿಂದ ದೂರಾಗುತ್ತಿದ್ದೆವೆ. ಇದು ಸರಿಯಲ್ಲ ಎಂದು ಹೇಳಿದರು.
ಸಮಾಜ ತುಂಬಿ ತುಳುಕಿದರೆ ಬ್ಯಾಂಕ್ ಸದೃಢವಾಗಿರುತ್ತದೆ. ಬ್ಯಾಂಕ್ ಜನರಿಗೆ ಅಗತ್ಯ ಇದ್ದಾಗ ಸ್ಪಂದಿಸುವ ಕೆಲಸ ಮಾಡಬೇಕು.ದೇಶದಲ್ಲೇ ಮೇಲಸ್ತರದಲ್ಲಿರುವ ಬ್ಯಾಂಕ್.
ಅನೇಕ ಜನರಿಗೆ ಬೆಳಕು ನೀಡುವ ಕೆಲಸವಾಗಬೇಕು. ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಲಯದ ಪ್ರಥಮ ಅಂತಸ್ತನ್ನು ಕಣಾಟಕ ಬ್ಯಾಂಕ್ ನಿಮಿಸಿಕೊಟ್ಟಿರುವುದು ಅದರ ಸಮಾಜಮುಖಿ ಕೆಲಸವನ್ನು ಸೂಚಿಸುತ್ತದೆ ಇಂತಹ ಬ್ಯಾಂಕ್ನ ಅಭಿವೃದ್ಧಿ ಮಾಡುವ ಕೆಲಸ ಸಮಾಜದಿಂದ ಆಗಬೇಕು ಎಂದು ಹೇಳಿದರು.
ಕರ್ಣಾಟಕ ಬ್ಯಾಂಕ್ನ ಎಂ.ಡಿ.ಮಹಾಬಲೇಶ್ವರ ಎಂ.ಎಸ್.ಮಾತನಾಡಿ,ಇಂದು ಐತಿಹಾಸಿಕ ದಿನವಾಗಿದೆ. 99 ವರ್ಷ ಮುಗಿಸಿ 1೦೦ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಈ ಶಾಖೆ ಉದ್ಘಾಟನೆಯಾಗುತ್ತಿದೆ ಪ್ರಥಮ ದಿನದಂದೆ 4೦೦ಖಾತೆಗಳು ಪ್ರಾರಂಭವಾಗಿ ಬ್ಯಾಂಕ್ನ ಇಷ್ಟುವರ್ಷದ ಇತಿಹಾಸದಲ್ಲಿ ದಾಖಲೆ ನಿರ್ಮಾಣವಾಗಿದೆ.ಇದು ಶ್ರೀ ಗಳ ಆಶೀರ್ವಾದ. ಇತ್ತೀಚೆಗೆ ಕೇಂದ್ರ ಸರಕಾರ ತಾವುಗಳಿಸಿದ ಲಾಭಗಳ ಶೇ.1 ಸಮಾಜಕ್ಕೆ ನೀಡಬೇಕು ಎಂದು ಕಂಪನಿ ಕಾನೂನು ತಿದ್ದುಪಡಿ ತಂದಿದೆ. ಆದರೆ ನಮ್ಮ ಬ್ಯಾಂಕ್ 1924 ರಲ್ಲಿ ಪ್ರಾರಂಭವಾದಾಗಲೇ ತನ್ನ ನಿಯಮಾವಳಿಯಲ್ಲಿ ಇದನ್ನು ಸೇರಿಸಿತ್ತು ಅಲ್ಲದೆ ಕಳೆದ ನೂರು ವರ್ಷದಿಂದ ಸತತ ಲಾಭಗಳಿಸಿರುವ ಏಕೈಕ ಬ್ಯಾಂಕ್ ನಮ್ಮದಾಗಿದೆ ಬ್ಯಾಂಕ್ನ ಪ್ರಗತಿ ದೇಶದ ಉಳಿದ ಬ್ಯಾಂಕ್ ಗಿಂತ ಮೇಲಿದ್ದೇವೆ. ಇದು ಜನಸಾಮಾನ್ಯರ ಬ್ಯಾಂಕ್ ಆಗಿದ್ದು ಲಾಭಕ್ಕಾಗಿ ಬ್ಯಾಂಕ್ ಇಲ್ಲ ಉತ್ತಮ ಸೇವೆ ನೀಡುವ ಧ್ಯೇಯ ಹೊಂದಿದೆ
ಶತಮಾನದ ಹೊಸ್ತಿಲಲ್ಲಿರುವ ಬ್ಯಾಂಕ್ ಹಲವು ಜನಪರ ಯೋಜನೆಗಳನ್ನು ತರುತ್ತಿದ್ದು ಲಾಭದ ಹಿಂದೆ ನಾವು ಹೋಗಿಲ್ಲ ಲಾಭ ನಮ್ಮ ಹಿಂದೆ ಬಂದಿದೆ. ಗ್ರಾಹಕರು ಬ್ಯಾಂಕಿಂಗ್ ಸೇವೆಯನ್ನು ದುರುಪಯೋಗ ಮಾಡದೆ ಸದ್ವಿನಿಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಮಹಾಪ್ರಬಂಧಕ ರಾಜಗೋಪಾಲ ಬಿ. ಸ್ವಾಗತಿಸಿದರು. ಮುಖ್ಯ ಪ್ರಬಂಧಕ ಚಕ್ರಪಾಣಿ ನಿರೂಪಣೆ ಮಾಡಿದರು.ವಿಜೇತಾ ಹೆಗಡೆ ಪ್ರಾರ್ಥನೆ ಹಾಡಿದರು