ಆದ್ಯೋತ್ ಸುದ್ದಿನಿಧಿ:
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ ಗುರುವಾರ ಸಿದ್ದಾಪುರ ದಿಂದ ಶಿರಸಿಯವರಗೆ ಪಾದಯಾತ್ರೆ ನಡೆಯಿತು.
ಪಾದಯಾತ್ರೆಗೆ ಚಾಲನೆ ನೀಡಿದ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತಾ ಆಳ್ವಾ,ನಮ್ಮ ರಾಜ್ಯಕ್ಕೆ ಪ್ರವಾಹ,ಕೊವಿಡ್ ಸೇರಿದಂತೆ ಸಾಕಷ್ಟು ಸಂಕಟಗಳು ಬಂದಾಗಲು ಬಾರದಿದ್ದ ಪ್ರದಾನಿ ನರೇಂದ್ರ ಮೋದಿ ಈಗ ಚುನಾವಣೆಯ ಸಮಯದಲ್ಲಿ ಪದೇ ಪದೇ ಭೇಟಿ ನೀಡಿ ರಾಜ್ಯದ ಜನರನ್ನು ಮರಳು ಮಾಡುತ್ತಿದ್ದಾರೆ ಬಿಜೆಪಿ ಸರಕಾರ ಜನರಿಂದ ಆಯ್ಕೆಯಾದ ಸರಕಾರವಲ್ಲ ಕಾಂಗ್ರೆಸ್ ಮತ್ತ ಜೆಡಿಎಸ್ ಶಾಸಕರನ್ನು ಖರೀದಿಸಿ ಬ್ರಷ್ಟಮಾರ್ಗದಿಂದಲೇ ರಚನೆಯಾದ ಸರಕಾರ ಹೀಗಾಗಿ ಈಗ ಬ್ರಷ್ಟಾಚಾರ ತುಂಬಿತುಳಕಾಡುತ್ತಿದೆ ಶೇ.೪೦ರ ಸರಕಾರ ಎಂಬ ಕೀರ್ತಿಯನ್ನೂ ಪಡೆದಿದೆ. ಎಷ್ಟೋಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಬಲ್ ಇಂಜಿನ್ ಸರಕಾರ ಎಂದು ಹೇಳುತ್ತಾರೆ ಆದರೆ ಇದರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ.
ಬರುವ ವಾರದಲ್ಲಿ ಪ್ರಜಾ ಧ್ವನಿ ಯಾತ್ರೆ ನಮ್ಮ ರಾಜ್ಯ ನಾಯಕರ ಮುಖಂಡತ್ವದಲ್ಲಿ ಶಿರಸಿಗೆ ಬರುತ್ತಾ ಇದೆ
ಇದೇ ಬರುವ 15ನೇ ತಾರೀಕಿನಂದು ಶಿರಸಿ ಸಿದ್ದಾಪುರ ತಾಲೂಕಿನಲ್ಲಿ ಐದು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಸಭೆ ಮಾಡಲಿದ್ದೇವೆ. ಆ ಸಭೆಗೆ ನಿಮ್ಮ ನಿಮ್ಮ ಜಿಲ್ಲಾ ಪಂಚಾಯತ್ ವ್ಯಾಪ್ತಿ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಬೇಕು. 16ನೇ ತಾರೀಖಿನಂದು ಪ್ರಜಾ ಧ್ವನಿ ಯಾತ್ರೆ ಕಾರ್ಯಕ್ರಮ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ನಡೆಯಲಿದೆ. ನಾವೆಲ್ಲ ಒಂದಾಗಿ ಕೆಲಸ ಮಾಡಿ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳೋಣ ಎಂದು ಹೇಳಿದರು.
ಭೀಮಣ್ಣ ನಾಯ್ಕ ಮಾತನಾಡಿ,ಜನಪರವಾದ ಕಾರ್ಯಕ್ರಮವನ್ನು ಕೊಡುವುದಾಗಿ ಚುನಾವಣಾ ಸಮಯದಲ್ಲಿ ಮಾತನ್ನು ನೀಡಿ ಆಡಳಿತಕ್ಕೆ ಬಂದ ಬಿಜೆಪಿ ಪಕ್ಷ ಕೊಟ್ಟ ಮಾತುಗಳನ್ನೆಲ್ಲ ಗಾಳಿಗೆ ತೂರಿ ಬರೀ ಭ್ರಷ್ಟಾಚಾರದಲ್ಲಿ ತೊಡಗಿದೆ.೪೦% ಸರ್ಕಾರ ಎಂದು ಏನು ಜನಗಳು ಹೇಳುತ್ತಿದ್ದಾರೋ ಮಾಧ್ಯಮಗಳು ಹೇಳುತ್ತಿವೆಯೋ ಅದೇ ರೀತಿಯಾಗಿ ಅವರದೇ ಪಕ್ಷದ ಅನೇಕ ಕಾರ್ಯಕರ್ತರು ಕೂಡ ಹೇಳಿಕೊಳ್ಳುತ್ತಿದ್ದಾರೆ ಈ ೪೦% ಸರ್ಕಾರದಲ್ಲಿ ಜನರಿಗೆ ರಕ್ಷಣೆ ಇಲ್ಲ, ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಈ ಸರ್ಕಾರ ಜನರ ಪರವಾಗಿ ಬಡವರ ಪರವಾಗಿ ಇಲ್ಲ ಅನೇಕ ಸಮಸ್ಯೆಗಳನ್ನು ಹೊಂದಿರುವ ನಮ್ಮ ಜಿಲ್ಲೆಯಲ್ಲಿ ಅತಿಕ್ರಮಣದಾರರ ಸಮಸ್ಯೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ, ಅತಿಕ್ರಮಣದಾರರನ್ನು ಒಕ್ಕಲಿಬ್ಬಿಸುತ್ತಿರುವುದು, ಮನೆ ಮಂಜೂರಿಯಾಗಿ ಬಂದರೂ ಅವರಿಗೆ ಒಂದು ಗುಂಟೆ ಜಾಗ ನೀಡದೆ ಮನೆ ವಾಪಸ್ ಹೋಗುತ್ತಿದೆ. ಬಿಜೆಪಿ ಪಕ್ಷ ರೈತರಿಗೆ ಅನೇಕ ವಿಷಯಗಳಲ್ಲಿ ವಿರೋಧವನ್ನುಂಟು ಮಾಡುತ್ತಿದೆ. ಘಟ್ಟದ ಕೆಳಗೆ ಮೀನುಗಾರರಿಗೆ ಯಾವುದೇ ರೀತಿಯ ಸಹಕಾರವನ್ನು ನೀಡುತ್ತಿಲ್ಲ ಇಂತಹ ಬಿಜೆಪಿ ಸರ್ಕಾರ ಯಾಕೆ ಬೇಕು ಎಂಬುದು ಇಡೀ ಜಿಲ್ಲೆಯ ರಾಜ್ಯದ ಜನತೆಯ ಕೂಗಾಗಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಅನೇಕ ಜನಪರವಾದ ಯೋಜನೆಗಳನ್ನು ಈ ಜಿಲ್ಲೆ ತಾಲೂಕಿಗೆ ನೀಡಿದೆ. ಆಡಳಿತದ ಅವಧಿಯಲ್ಲಿ ಎಲ್ಲಾ ವರ್ಗದ ಜನರಿಗೆ ನೆಮ್ಮದಿಯನ್ನು ಕೊಟ್ಟಂತ ಯಾವುದಾದರೊಂದು ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಸ್ವಾಗತಿಸಿ ಪಾದಯಾತ್ರೆಯ ಉದ್ದೇಶವನ್ನು ವಿವರಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ವಿ.ಎನ್.ನಾಯ್ಕ,ನಾಸೀರ್ ವಲ್ಲಿಖಾನ್,ಸೀಮಾ ಹೆಗಡೆ, ಸುಮಂಗಲಾ ನಾಯ್ಕ ಸಾವೇರ್ ಡಿಸಿಲ್ವಾ,ಪ್ರಶಾಂತ ನಾಯ್ಕ ಹೊಸೂರು ಮುಂತಾದವರು ಉಪಸ್ಥಿತರಿದ್ದರು.
ಸಿದ್ದಾಪುರದಿಂದ ಪ್ರಾರಂಭವಾದ ಪಾದಯಾತ್ರೆ ಶಿರಸಿ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ನಡೆದು ಮುಕ್ತಾಯ ವಾಯಿತು.40 ಕಿಮಿ ದೂರದವರೆಗಿನ ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.