ಆದ್ಯೋತ್ ಸುದ್ದಿನಿಧಿ
ಸಿದ್ದಾಪುರ ಪಟ್ಟಣದ ನೆಹರು ಮೈದಾನದಲ್ಲಿ ಫೆ. 17 ರಿಂದ 19 ರವರೆಗೆ ನಡೆಯಲಿರುವ ಸಿದ್ದಾಪುರ ಉತ್ಸವದಲ್ಲಿ ತಾಲೂಕಿನ ಸ್ಥಳೀಯರಿಗೆ ಸಮಿತಿವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಿದ್ದಾಪುರ ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಿ ಕ್ರೀಡಾಕೂಟ ಸ್ಪರ್ಧೆ
ಉತ್ಸವದ ಪ್ರಯುಕ್ತ ಪಟ್ಟಣದ ನೆಹರು ಮೈದಾನದಲ್ಲಿ
ಫೆ.17 ರಂದು ಬೆಳಗ್ಗೆ 9:30 ರಿಂದ ನಡೆಯಲಿರುವ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ಇರಲಿದ್ದು, ಸ್ಪರ್ಧೆಗೆ ಪ್ರತಿ ಗ್ರಾಮ ಪಂಚಾಯತನಿಂದ 7 ಜನರ ಒಂದು ಪುರುಷ ಹಾಗೂ ಒಂದು ಮಹಿಳಾ ತಂಡಗಳಿಗೆ ಅವಕಾಶವಿರುತ್ತದೆ. ಅಲ್ಲದೇ ವಯಕ್ತಿಕ ಸ್ಪರ್ಧೆಯಲ್ಲಿ ರಸ್ತೆ ಓಟ (ಕ್ರಾಸ್ ಕಂಟ್ರಿ), ಮಹಿಳೆಯರಿಗೆ ಸಂಗೀತ ಖುರ್ಚಿ ಸ್ಪರ್ಧೆ, ಪುರುಷರಿಗೆ ಗೋಣಿಚೀಲ ಓಟದ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ಸ್ಪರ್ಧಿಗಳಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಆಸಕ್ತರು ಫೆ.15 ರೊಳಗೆ ತಮ್ಮ ಹೆಸರನ್ನು ಮಾಧವ ಎಮ್. ನಾಯ್ಕ – 9449360803 ಇವರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.
ರಂಗೋಲಿ ಸ್ಪರ್ಧೆ
ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿಯ ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆ.17ರಂದು ಮಧ್ಯಾಹ್ನ 3.30 ರಿಂದ ಸಂಜೆ 5 ಗಂಟೆಯವರೆಗೆ ರಂಗೋಲಿ ಸ್ಪರ್ಧೆಯನ್ನು ಸಮಿತಿ ವತಿಯಿಂದ ತಾಲೂಕಿನ ಸ್ಥಳೀಯರಿಗೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಚುಕ್ಕಿ ರಂಗೋಲಿ ಬಿಡಿಸಲು ಮಾತ್ರ ಅವಕಾಶವಿದ್ದು, ರಂಗೋಲಿ ಬಿಡಿಸಲು ಬೇಕಾದ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕಾಗಿದೆ. ನಿಗದಿಪಡಿಸಲಾದ ಸಮಯದ ಅವಧಿಯು 1 ಗಂಟೆ 30 ನಿಮಿಷವಿರಲಿದ್ದು ಸ್ಪರ್ಧಿಗಳು 30 ನಿಮಿಷ ಮೊದಲು ಸ್ಥಳದಲ್ಲಿ ಹಾಜರಿರಬೇಕು. ಒದಗಿಸಿದ ಜಾಗವು 4 * 4 ಅಡಿ ಅಳತೆಯಾಗಿರುತ್ತದೆ. ಅಲ್ಲದೇ ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ಸಮಯವನ್ನು ನೀಡಲಾಗುವುದಿಲ್ಲ. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ಸ್ಪರ್ಧಿಗಳಿಗೆ ಸೂಕ್ತ ಬಹುಮಾನ ನೀಡಲಾಗುತ್ತಿದ್ದು, ಹೆಸರು ನೋಂದಾಯಿಸಲು ಫೆ.15 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ರಾಘವೇಂದ್ರ ರಾಯ್ಕರ್ 9845297298, ಶಂಕರಮೂರ್ತಿ ನಾಯ್ಕ 8861212683, ಚಂದ್ರಕಲಾ ನಾಯ್ಕ 8123680716, ಸುಮನಾ ಕಾಮತ್ 9945190466, ರಾಧಿಕಾ ಕಾನಗೋಡ 9945105200 ಇವರನ್ನು ಸಂಪರ್ಕಿಸಬಹುದು.
ಅಂಗಡಿ ಮುಂಗಟ್ಟುಗಳಿಗೆ ಅವಕಾಶ
3 ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲಿರುವ ಹಿನ್ನೆಲೆಯಲ್ಲಿ ವಿವಿಧ ಬಗೆಯ ಖಾದ್ಯ, ವಸ್ತ್ರದ ಮಳಿಗೆ, ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳು ಹಾಕುವವರಿಗೆ ಸ್ಥಳಾವಕಾಶ ನೀಡಲಾಗುತ್ತಿದ್ದು, ಅಂಗಡಿ ಮುಂಗಟ್ಟುಗಳಿಗೆ ಸ್ಥಳ ಬೇಕಾದಲ್ಲಿ ಸಮಿತಿಯ ಕೋಶಾಧ್ಯಕ್ಷ ವಿನಯ ಹೊನ್ನೆಗುಂಡಿ 9606730284 ಇವರನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.