ಆದ್ಯೋತ್ ಸುದ್ದಿನಿಧಿ
ಮನುವಿಕಾಸ ಸಂಸ್ಥೆಯಿಂದ ಆಯೋಜಿಸಿದ್ದ ಮಹಿಳಾ ಸಮಾವೇಶ ಹಾಗೂ 20ನೇ ವರ್ಷದ ಸಮನ್ವಯ ಕಾರ್ಯಕ್ರಮವನ್ನು ಸಿದ್ದಾಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಪರಿಚಯ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಸಂಸ್ಥೆ ಬೆಳೆದು ಬಂದ ರೀತಿಯ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಿರಸಿ ಮತ್ತು ಸಿದ್ದಾಪುರ ತಾಲೂಕಿನ ಶಾಸಕರು ಮತ್ತು ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಮಾತನಾಡಿ,ಮನುವಿಕಾಸ ಸಂಸ್ಥೆಯ 20ನೇ ವರ್ಷದ ವಾರ್ಷಿಕೋತ್ಸವಕ್ಕೆ ಅಭಿನಂದಿಸಿದರು.ಮನುವಿಕಾಸ ಮನುವಿಕಾಸ ಸಂಸ್ಥೆಯು ತನ್ನ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದೆ. ಮಹಿಳಾ ಸಬಲೀಕರಣ, ಕೆರೆಗಳ ಅಭಿವೃದ್ಧಿಗೆ ಮನುವಿಕಾಸ ಸಂಸ್ಥೆಯು ಶ್ರಮಿಸಿದೆ. ಸಸಿಯಾಗಿ ಬೆಳೆಯುತ್ತಿರುವ ಈ ಸಂಸ್ಥೆ ಬೆಳೆದು ಬೃಹತ್ ಹೆಮ್ಮರವಾಗಲಿ ಎಂದು ಹೇಳಿದರು.
ಉಪೇಂದ್ರ ಪೈ ಮಾತನಾಡಿ, ಮನುವಿಕಾಸ ಸಂಸ್ಥೆಯು ಜನರಿಗೆ ಏನು ಅವಶ್ಯಕತೆಯಿದೆ ಎಂದು ತಿಳಿದು ಅದರಂತೆ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಮಹಿಳೆಯರಿಗೆ ಸ್ವಉದ್ಯೋಗ ಮಾಡುವುದಕ್ಕೆ ಪ್ರೋತ್ಸಾಹವನ್ನು ನೀಡಿದೆ ಎಂದು ಹೇಳಿದರು.
ವೆಂಕಟೇಶ್ ಹೊಸಬಾಳೆ ಮನುವಿಕಾಸ ಸಂಸ್ಥೆಯ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸದಾನಂದ ಭಟ್ ಪ್ರದೀಪ್ ಹೆಗ್ಡೆ ಗೀತಾ ಪಾಟೀಲ್ ನಾಗರಾಜ್ ಹೆಗಡೆ ಕೆ ಎನ್ ಹೊಸಮನಿ ಎಂ ಎನ್ ಶೆಟ್ಟಿ ವೆಂಕಟೇಶ್ ಹೆಗಡೆ ಪ್ರವೀಣ್ ಹೆಗಡೆ ಶೋಭಾ ಸುಜಾತ ಪ್ರಕಾಶ್ ಮೇಸ್ತ ವಿವೇಕ್ ಹೆಗಡೆ ಮನುವಿಕಾಸ ಸಂಸ್ಥೆಯ ಸಂಸ್ಥಾಪಕರಾದ ಹರಿಶ್ಚಂದ್ರ ಭಟ್ ಉಪಸ್ಥಿತರಿದ್ದರು.