ಆದ್ಯೋತ್ ಸುದ್ದಿನಿಧಿ:
ಶಿರಸಿ-ಸಿದ್ದಾಪುರ ವಿಧಾನಸಭಾಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಸಿದ್ದಾಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಬಿಜೆಪಿ ಸರಕಾರ ಹಿಂದುತ್ವದ ಮೂಲಕ ಧರ್ಮದ್ವೇಷವನ್ನು ಬಿತ್ತುವುದರ ಜೊತೆಗೆ ಅನವಶ್ಯಕ ಗೊಂದಲ ಉಂಟುಮಾಡಿ ಯುವಕರನ್ನು ಭ್ರಮೆಗೆ ದೂಡಲಾಗುತ್ತಿದೆ ಇದು ರಾಷ್ಟ್ರ ಮ
ತ್ತು ರಾಜ್ಯದ ಹಿತದೃಷ್ಠಿಯಿಂದ ಒಳ್ಳೆಯದಲ್ಲ ದೇಶದಲ್ಲಿ ಬಡತನ,ನಿರುದ್ಯೋಗ ತಾಂಡವವಾಡುತ್ತಿದ್ದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎನ್ನುತ್ತಿದ್ದ ಮೋದಿಯವರು ಅಧಿಕಾರಕ್ಕೆ ಬಂದು ೯ ವರ್ಷ ಕಳೆದಿದೆ ಅವರ ಹೇಳಿಕೆಯ ಪ್ರಕಾರ ೧೮ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ಆದರೆ ಅವರ ಮಾತು ಹುಸಿಯಾಗಿದೆ. ಒಂದೇ ಒಂದು ಉದ್ಯೋಗವೂ ಸೃಷ್ಟಿಯಾಗಿಲ್ಲ. ರಾಜ್ಯಸರಕಾರ ನಿಷ್ಕೃಯವಾಗಿದೆ. ಟೆಂಡರ್ ಕರೆಯುವುದಕ್ಕೆ ಅಭಿವೃದ್ಧಿ ಸೀಮಿತವಾಗಿದ್ದು ಯಾವುದೇ ಕೆಲಸಗಳು ಆಗುತ್ತಿಲ್ಲ.ಇವತ್ತು ದೇಶದಲ್ಲಿ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಬೆಲೆ ಏರಿಕೆಯಿಂದಾಗಿ ಎಲ್ಲಾ ವರ್ಗಗಳ ಜನಜೀವನ ಕಷ್ಟವಾಗಿದೆ ಪೆಟ್ರೋಲ್, ಡೀಸೆಲ್, ಖಾದ್ಯ ತೈಲಗಳು, ತರಕಾರಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ತತ್ತರಗೊಂಡಿದೆ.ಚಾರಿತ್ರೆ,ಸAಸ್ಕೃತಿಯ ಜೊತೆಗೆ ಉದ್ಯೋಗ ಸೃಷ್ಟಿ ಯಾಗುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಗೆ ಜನಬೆಂಬಲ ದೊರಕುತ್ತಿದೆ ಪೂರ್ಣ ಪ್ರಮಾಣದ ಪ್ರಣಾಳಿಕೆ ಇನ್ನೂ ರೂಪಿಸಿಲ್ಲ ಆದರೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಮಹಿಳೆಗೆ ೨೦೦೦ ರೂ.ನೀಡುವ ಗೃಹಲಕ್ಷ್ಮೀ ಯೋಜನೆ ಹಾಗೂ ಪ್ರತಿಮನೆಗೆ ೨೦೦ ಯುನಿಟ್ ವಿದ್ಯುತ್ ನೀಡುವ ಯೋಜನೆ ಜಾರಿಗೆ ತರಲಾಗುವುದು ೨೦೧೩ರಲ್ಲಿ ನಾವು ನೀಡಿದ ಪ್ರಣಾಳಿಕೆಯನ್ನು ಶೇ.೧೦೦ ರಷ್ಟು ಜಾರಿಗೆ ತಂದಿದ್ದೆವೆ ಆದರೆ ಬಿಜೆಪಿ ತನ್ನ ಪ್ರಣಾಳಿಕೆ ಯ ಶೇ೨೫ನ್ನು ಜಾರಿಗೆ ತಂದಿಲ್ಲ ಎಂದು ದೇಶಪಾಂಡೆ ಕಿಡಿಕಾರಿದರು.
ಹಳಿಯಾಳದ ಘಟನೆ ಬಿಜೆಪಿ ಯ ಹಿಂದುತ್ವದ ಅಜೆಂಡಾಗಳಲ್ಲಿ ಒಂದಾಗಿದ್ದು ಇದು ಯಶಸ್ವಿಯಾಗುವುದಿಲ್ಲ ಭಗವಧ್ವಜ ನೆಟ್ಟವರೆ ಅದನ್ನು ತೆಗೆದಿದ್ದಾರೆ ಬಹಳ ವರ್ಷದಿಂದ ಅಲ್ಲಿ ಹಿಂದುಗಳು ದಸರಾ ಸಮಯದಲ್ಲಿ ಹಾಗು ಮುಸ್ಲಿಂರು ಅವರ ಹಬ್ಬದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದಾರೆ ಇವೆಲ್ಲವೂ ಸೌಹಾರ್ಧ ರೀತಿಯಲ್ಲಿ ಇಲ್ಲಿಯವರೆಗೆ ನಡೆಯುತ್ತಿದೆ ಆದರೆ ಈಗ ಅನವಶ್ಯಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆದ್ಯೋತ್ ನ್ಯೂಸ್‌ಗೆ ದೇಶಪಾಂಡೆಯವರು ಉತ್ತರಿಸಿದರು.
——
ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಬಗ್ಗೆ ಸ್ಕೂಟಿನಿ ಆಗಿದೆ ಇದೇ ತಿಂಗಳ ೨೪ ೨೫ ಹಾಗೂ ೨೬ರಂದು ರಾಯ
ಪುರದಲ್ಲಿ ಎಐಸಿಸಿ ಸಮಾವೇಶ ನಡೆಯಲಿದೆ ಅದರ ನಂತರ ಹೈಕಮಾಂಡ್ ಅಂತಿಮ ಪಟ್ಟಿ ಪ್ರಕಟಿಸಲಿದ್ದು ಅಂತಿಮ ಪಟ್ಟಿ ಈ ತಿಂಗಳ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ನಂತರ ಹೈಕಮಾಂಡ ಇದಕ್ಕೆ ಅದಿಕೃತ ಮುದ್ರೆ ಒತ್ತುತ್ತಾರೆ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಣೆಯನ್ನು ನಾವು ಮಾಡುವುದಿಲ್ಲ ಎಂದು ಆರ್.ವಿ.ದೇಶಪಾಂಡೆ ಹೇಳಿದರು.
—–