ಆದ್ಯೋತ್ ಸುದ್ದಿನಿಧಿ:
ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಡರು.
ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಜೆಡಿಎಸ್ ಧ್ವಜವನ್ನು ಹಾಗೂ ಶಿವಾಜಿ ಮಹಾರಾಜರ ಫೋಟೊ
ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಉಪಸ್ಥಿತರಿದ್ದರು
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳದಿಂದ ಘೋಟ್ನೇಕರ ಅಥವಾ ಅವರ ಮಗ ಶ್ರೀನಿವಾಸ ಘೋಟ್ನೇಕರ್ ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಆರ್.ವಿ.ದೇಶಪಾಂಡೆಯವರ ಕಟ್ಟಾ ಅಭಿಮಾನಿಯಾಗಿದ್ದ ಘೋಟ್ನೇಕರ್ ಜನವರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದಿದ್ದರು.ಬಿಜೆಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ಕಳೆದವಾರ ಹಳಿಯಾಳ ಬಿಜೆಪಿ ಮಂಡಳ ಅಧ್ಯಕ್ಷರನ್ನು ಭೇಟಿ ಮಾಡಿದ್ದರು ಆದರೆ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜೆಡಿಎಸ್ ನಿಂದ ಹಿಂದೆಯೇ ಆಹ್ವಾನ ಬಂದಿದ್ದರೂ ಬಿಜೆಪಿ ಸೇರುವ ಉತ್ಸಾಹದಲ್ಲಿದ್ದ ಘೋಟ್ನೇಕರ ಅಲ್ಲಿಯ ನಿರಾಸಕ್ತಿಯನ್ನು ಕಂಡು ಈಗ ಜೆಡಿಎಸ್ ಸೇರಿದ್ದಾರೆ
▫️
▫