ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಶ್ರೀಸಿದ್ದಿವಿನಾಯಕ ವಿದ್ಯಾಸಮುಚ್ಛಯದಲ್ಲಿ ಶ್ರೀರಾಮಕ್ರಷ್ನ ಹೆಗಡೆ ದೊಡ್ಮನೆ ವೇದಿಕೆಯಲ್ಲಿ ಶ್ರೀಗಣೇಶ ಹೆಗಡೆ ಶತಸ್ಮೃತಿ ಸಮಿತಿಯವರು ಆಯೋಜಿಸಿದ್ದ ಗಣೇಶ ಹೆಗಡೆಯವರ ಶತಮಾನೋತ್ಸವ -೨೦೨೩ ಶತಸ್ಮೃತಿ ಕಾರ್ಯಕ್ರಮದಲ್ಲಿ ಗಣೇಶ ಹೆಗಡೆಯವರ ಕುರಿತಾದ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಸಂಪಾದಿಸಿದ ಸೂರ್ಯ ವರ್ಚಸ್ವಿ ಗ್ರಂಥವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಿಡುಗಡೆಗೊಳಿಸಿ ಉದ್ಘಾಟಿಸಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ,
ಇಂದು ಸಂಬಂಧಗಳು ವ್ಯವಹಾರಿಕವಾಗಿದ್ದು ಎಲ್ಲಿಯೂ ಭಾವನಾತ್ಮಕ ಸಂಬಂಧ ಕಾಣುತ್ತಿಲ್ಲ ಹಿಂದೆ ಕೇವಲ ಕೌಟಂಬಿಕವಾಗಿಯಷ್ಟೆ ಅಲ್ಲ ರಾಜಕೀಯದಲ್ಲೂ ಭಾವನಾತ್ಮಕ ಸಂಬಂದ ಇರುತ್ತಿತ್ತು ಆದರೆ ಈಗ ಎಲ್ಲವೂ ವ್ಯವಹಾರವಾಗಿದೆ.ನಾವೆಲ್ಲ ಸಮಾನತೆಯ ಬಗ್ಗೆ ಮಾತನಾಡುತ್ತೇವೆ ಆದರೆ ಹುಟ್ಟು-ಸಾವಿನಂತಹ ಸಮಾನತೆ ಮತ್ತೆಲ್ಲೂ ಕಾಣುವುದಿಲ್ಲ ಮುಗ್ದತೆ ಮತ್ತು ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಕಷ್ಟ ಆದರೆ ಗಣೇಶ ಹೆಗಡೆಯವರು ತಮ್ಮ ಆತ್ಮಸಾಕ್ಷತೆಗೆ ಅನುಗುಣವಾಗಿ ನಡೆದರು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದಲ್ಲಂತೂ ಅತಿಮುಖ್ಯವಾದ ಸಾಧನೆ ಮಾಡಿದರು.ಯಶಸ್ಸನ್ನು ಹಲವರು ಕಾಣುತ್ತಾರೆ ಆದರೆ ಸಾಧನೆ ಸುಲಭವಲ್ಲ ಗಣೇಶ ಹೆಗಡೆಯವರು ಕೈಹಾಕಿದೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸೂ ಅಷ್ಟೆ ಅಲ್ಲ ಸಾಧನೆ ಮಾಡಿದರು. ಇಂತಹ ಮಹನೀಯರ ಸಾಧನೆ ನಮಗೆಲ್ಲರಿಗೂ ದಾರಿದೀಪವಾಗಬೇಕು.ರಾಮಕೃಷ್ಣ ಹೆಗಡೆ ಹಾಗೂ ಗಣೇಶ ಹೆಗಡೆಯವರ ಕುಟುಂಬದೊಡನೆ ನಮ್ಮ ಕುಟುಂಬದ ನಂಟು ಇದೆ ಅದು ಕೇವಲ ರಾಜಕೀಯ ನಂಟಲ್ಲ ಕೌಟಂಬಿಕ ನಂಟು ಇಂತಹ ಕುಟುಂಬದ ಕಾರ್ಯಕ್ರಮಕ್ಕೆ ನಾನು ಬಂದಿರುವುದು ನನಗೆ ಅತೀವ ಸಂತೋಷ ಉಂಟುಮಾಡಿದೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಗಣೇಶ ಹೆಗಡೆಯವರು ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.ಜನಪ್ರತಿನಿಧಿ ಅಲ್ಲದೆಯೂ ಜನರ ಸೇವೆ ಮಾಡಬಹುದು ಎಂದು ತೋರಿಸಿಕೊಟ್ಟವರು ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಗಣೇಶ ಹೆಗಡೆಯವರ ಆದರ್ಶ ನಮಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಸಚೀವ ಗೋವಿಂದ ಕಾರಜೋಳ ಮಾತನಾಡಿ, ಕೆಲವರು ತನಾಗಾಗಿ ಬದುಕುತ್ತಾರೆ ಕೆಲವರು ಸಮಾಜಕ್ಕಾಗಿ ಬದುಕುತ್ತಾರೆ ಗಣೇಶ ಹೆಗಡೆಯವರು ಸಮಾಜಕ್ಕಾಗಿ ಬದುಕಿದವರು ಅಧಿಕಾರಕ್ಕೆ ಆಸೆಪಡಲಿಲ್ಲ ಸಮಾಜಸೇವೆಯೇ ತನ್ನ ಧ್ಯೇಯ ಎಂದು ತಿಳಿದು ಅದರಂತೆ ನಡೆದುಕೊಂಡರು.ಅವರ ಸಹೋದರ ರಾಮಕೃಷ್ಣ ಹೆಗಡೆಯವರು ನಮ್ಮ ರಾಜಕೀಯ ಗುರುಗಳು ಅವರ ದಾರಿಯಲ್ಲೆ ನಾವು ಸಾಗುತ್ತಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ,ರಾಷ್ಟ್ರೀಯ ನವನಿರ್ಮಣ ವೇದಿಕೆ ಅಧ್ಯಕ್ಷ ಮಮತಾ ನಿಚ್ಚಾನಿ ಮಾತನಾಡಿದರು. ರಾಮಕೃಷ್ಣ ಹೆಗಡೆಯವರ ಕುರಿತಾದ ಇ-ಪುಸ್ತಕವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ,ಶತಸ್ಮೃತಿ ಸಮಿತಿಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಉಪಸ್ಥಿತರಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಸ್ವಾಗತಿಸಿದರು, ಗೌರವಾಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ ಪ್ರಾಸ್ತಾವಿಕ ಮಾತನಾಡಿದರು.