ಆದ್ಯೋತ್ ಸುದ್ದಿನಿಧಿ:
ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ದಿನೇ ದಿನೇ ಭ್ರಷ್ಟಾಚಾರ ಮಿತಿಮೀರುತ್ತಿದೆ.ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲಂಚ ಪಡೆಯುವಾಗಲೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.ಅವರ ಮನೆ ಹಾಗೂ ಕಛೇರಿಗಳಲ್ಲಿ ಕೋಟಿಕೋಟಿ ಹಣವನ್ನು ಜಪ್ತಿ ಮಾಡಿರುವುದು ಎಲ್ಲರಿಗೂ ತಿಳಿದಿದೆ.ಅಂತವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು.ಈ ಭ್ರಷ್ಟಾಚಾರವನ್ನು ವಿರೋಧಿಸಿ ತಕ್ಷಣ ಮುಖ್ಯಮಂತ್ರಿಗಳು ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸಿನಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದಿನ ಕಳೆದಂತೆ ಪಟ್ರೋಲ್, ಡಿಸೆಲ್, ಗ್ಯಾಸ್, ಸೇರಿದಂತೆ ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ.ಈ ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ನ್ಯಾಯಬೆಲೆ ಅಂಗಡಿಗಳಲ್ಲಿ ಜನರಿಗೆ ಸಿಗತ್ತಿದ್ದಂತಹ ಅಗತ್ಯ ವಸ್ತುಗಳಾದ ಸೀಮಎಣ್ಣೆ ಗೋಧಿ, ಅಡುಗೆಎಣ್ಣೆ, ಸಕ್ಕರೆ ಸೇರಿದಂತೆ ಯಾವುದೇ ವಸ್ತುಗಳು ಸಿಗುತ್ತಿಲ್ಲಾ, ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಒಂದೇಒಂದುರಸ್ತೆಯು.ಜನರ ಸಂಚಾರಕ್ಕೆಯೋಗ್ಯವಿಲ್ಲ, ಯಾವುದೇ ರಸ್ತೆಗಳ ಕಾಮಗಾರಿಯಕೂಡ ಸರಿಯಾಗಿ ನಡೆಯುತ್ತಿಲ್ಲ. ಸಕಾಲಕ್ಕೆ ವಿದ್ಯಾರ್ಥಿಗಳಿಗೆ, ರೈತರಿಗೆ, ರೋಗಿಗಳಿಗೆ, ಜನಸಾಮಾನ್ಯರಿಗೆ ಮತ್ತು ಸಾರ್ವಜನಿಕರಿಗೆ ಸರಕಾರಿ ಬಸ್‌ಗಳು ನಿಗದಿತ ಸಮಯಕ್ಕೆ ಇಲ್ಲದೇ ಇರುವುದರಿಂದ ಬಹಳ ತೊಂದರೆಆಗುತ್ತಿದೆ.
ಎಲ್ಲಾ ಇಲಾಖೆಗಳಲ್ಲಿಯೂ ಹಾಗೂ ಅಧಿಕಾರದಲ್ಲಿರುವ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲಿ ನೋಡಿದರೂ ಪರ್ಸೆಂಟೇಜ್ ಪದ ಕೇಳಿಬರುತ್ತಿದೆ. ಹಾಗೂ ನಮ್ಮ ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಯಲ್ಲಿಯೂ ಅರ್ಧಕ್ಕಿಂತ ಕಡಿಮೆ ಸಿಬ್ಬಂಧಿಗಳಿದ್ದು, ಜನರಿಗೆ ಸೇವೆ ನೀಡುವಲ್ಲಿ ವಿಫಲವಾಗಿದೆ. ೨ ವರ್ಷಗಳಿಂದ ಸರ್ಕಾರದಿಂದ ಬೆಳೆವಿಮೆ ಬಂದಿಲ್ಲಾ. ನಮ್ಮ ತಾಲೂಕಿನ ಪ್ರೌಢ ಮತ್ತು ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗಳಲ್ಲಿ ೨೫೦ ಕ್ಕೂ ಹೆಚ್ಚು ಮಣ್ಣಿನ ಕಟ್ಟಡಗಳಿದ್ದು, ಆ ಕಟ್ಟಡಗಳು ಅಸ್ಥಿರಗೊಂಡಿದ್ದು ವಿದ್ಯಾರ್ಥಿಗಳು ಆತಂಕದಿಂದ ವಿಧ್ಯಾಭ್ಯಾಸ ಮಾಡಬೇಕಾಗಿದೆ ಮತ್ತು ೧೦೦ ಕ್ಕೂ ಹೆಚ್ಚು ಶಾಲೆಗಳಲ್ಲಿ ಶೌಚಾಲಯಗಳಿಲ್ಲಾ. ಇದರಿಂದ ಬಹಳ ವಿದ್ಯಾರ್ಥಿಗಳಿಗೆ ತೊಂದರೆಆಗುತ್ತಿದೆ ಹಾಗೂ ಬಿಸಿಯೂಟ ವ್ಯವಸ್ಥೆಯಲ್ಲಿ ಕಳಪೆ ಮಟ್ಟದ ಅಕ್ಕಿ, ಬೇಳೆಗಳನ್ನು ನೀಡುತ್ತಿದ್ದಾರೆ.ಆಸ್ಪತ್ರೆಗಳಲ್ಲಿ ರೋಗಳಿಗೆ ಸೂಕ್ತವಾದಚಿಕಿತ್ಸೆ ಸಿಗುತ್ತಿಲ್ಲಾ, ರಾಜ್ಯದಲ್ಲೂಕೂಡ ಬಿಜೆಪಿಯ ಆಡಳಿತ
ಜನಸೋಧಿಯಾಗಿದೆ, ಬಿಜೆಪಿ ಎಂದರೆ ೪೦% ಸರ್ಕಾರ ಎನ್ನುವಂತಾಗಿದೆ, ಮತ್ತು ಈ ಸರ್ಕಾರವು ಸಂವಿಧಾನ ವಿರೋಧಿಯಾಗಿ ಆಡಳಿತ ನಡೆಸುತ್ತಿದ್ದು, ಜನ-ಜೀವನ ಸರಳುವಂತಾಗಿವೆ.ಈ ನಿಟ್ಟಿನಲ್ಲಿ ಸಂವಿಧಾನದ ಚೌಕಟ್ಟನ್ನು ಮೀರಿ ಆಡಳಿತ ನಡೆಸುತ್ತಿರುವ ಈ ಬಿಜೆಪಿ ಸರ್ಕಾರವನ್ನು ತಕ್ಷಣ ಅಧಿಕಾರದಿಂದ ವಜಾಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯ ನೆತೃತ್ವವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಎಲ್. ನಾಯ್ಕ ಹಾಗೂ ಪ್ರಮುಖರಾದ ಬಿ.ಆರ್.ನಾಯ್ಕ ಹೆಗ್ಗಾರಕೈ, ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿದರು. ತಹಶೀಲ್ದಾರ ರಮೇಶ ಹೆಗಡೆ ಮನವಿ ಸ್ವೀಕರಿಸಿದರು. ಪ್ರಮುಖರಾದ ಮಾರುತಿ ಕೀಂದ್ರಿ, ಮುನಾವರ್ ಗುರಕರ್, ಬಾಲಕೃಷ್ಣ ನಾಯ್ಕ ಕೋಲಶಿರ್ಸಿ, ಅಬ್ದುಲ್ ಸಾಬ್ ಹೇರೂರು, ಕೆ.ಟಿ.ಹೊನ್ನೆಗುಂಡಿ, ಎಸ್.ಕೆ.ನಾಯ್ಕ ಕಡಕಢರಿ, .ಎನ್.ಟಿ.ನಾಯ್ಕ, ಪ್ರಶಾಂತ ನಾಯ್ಕ ಹೊಸೂರು, ಅರುಣಕುಮಾರ ನಾಯ್ಕ ಬಣಗಾರ, ಚಂದ್ರಕಾಂತ ನಾಯ್ಕ ಕಲ್ಲೂರು ಮೊದಲಾದವರಿದ್ದರು.