ಸಿದ್ದಾಪುರ ಟಿಎಂಎಸ್ ಕಟ್ಟಡಗಳ ಉದ್ಘಾಟನೆ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರದ ಪ್ರತಿಷ್ಠಿತ,ರೈತಸ್ನೇಹಿ ಸಂಸ್ಥೆಯಾದ ಟಿಎಂಎಸ್ ನಿಂದ ರೈತರಿಗೆ ಇನ್ನೊಂದು ಕೊಡುಗೆ ನೀಡಲಾಗುತ್ತಿದ್ದು ಒಂದು ಕಟ್ಟಡದ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲಾ ಸಾಮಗ್ರಿಗಳು ಒಂದೇ ಸೂರಿನಡಿಯಲ್ಲಿ ಸಿಗುವ ವ್ಯವಸ್ಥೆ ಮಾಡಲಾಗಿದೆ.ಒಂದುಕೋಟಿರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,
ಅಡಿಕೆ ಬೆಳೆಗಾರರು ಸೇರಿದಂತೆ ರೈತರು ಸಂಕಷ್ಟದಲ್ಲಿದ್ದು ಪಾರಂಪರಿಕ ರೈತರಿಗೆ ಭದ್ರತೆಯನ್ನು ಕೊಡುವ ಕೆಲಸ ಸಹಕಾರಿ ಕ್ಷೇತ್ರದಿಂದ ಆಗಬೇಕು.ಇಂದು ಅಡಿಕೆಗೆ ಬೆಲೆ ಬಂದಿದೆ ಹಾಗಂತ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಇಲ್ಲ ಎಂದಲ್ಲ ಅಷ್ಟೆ ಖರ್ಚು ಹೆಚ್ಚಾಗಿದೆ ಕೂಲಿ ಸಮಸ್ಯೆಯಂತೂ ಬೆಟ್ಟದಷ್ಟಾಗಿದೆ,ಪ್ರಾಕೃತಿಕ ವಿಕೋಪ,ಪ್ರಾಣಿಗಳ ಕಾಟ ಹೀಗೆ ಹಲವಾರು ಸಮಸ್ಯೆಗಳಿವೆ ಸರಕಾರ ಸಾಕಷ್ಟು ಸಹಾಯಹಸ್ತವನ್ನು ರೈತರಿಗೆ ನೀಡುತ್ತಿದೆ ಆದರೆ ಸಹಕಾರಿ ಸಂಸ್ಥೆಗಳುನೀಡುವ ಸಹಾಯ ರೈತರಿಗೆ ಅತ್ಯಾಪ್ತವಾಗಿರುತ್ತದೆ ಕೃಷಿಯಲ್ಲಿ ಯಾಂತ್ರಿಕೃತೆಯನ್ನು ಬಳಸಬೇಕು ಕೃಷಿ ಕೆಲಸ ಮಾಡುವವರು ಬಡವರು ಎನ್ನುವ ಭಾವನೆ ಬಿತ್ತಲಾಗುತ್ತಿದೆ ಇದನ್ನು ಹೋಗಲಾಡಿಸಬೇಕು. ಯುವಕರು ಹಳ್ಳಿಯನ್ನು ತೊರೆಯುತ್ತಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ ಯುವಕರನ್ನು ಇಲ್ಲಿ ಉಳಿಸಿಕೊಳ್ಳಲು ನಮ್ಮಲ್ಲಿ ಉದ್ಯಮ ಸ್ಥಾಪಿತವಾಗಬೇಕು ಸಹಕಾರಿ ಸಂಘಗಳು ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡುತ್ತಿದೆ ಉದ್ಯಮವನ್ನು ಸಹಕಾರಿ ಸಂಸ್ಥೆಗಳು ಮಾಡುವ ಮೂಲಕ ಯುವಕರ ವಲಸೆಯನ್ನು ತಡೆಗಟ್ಟಬೇಕು ಎಂದು ಹೇಳಿದರು.

ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಪ್ರಮಾಣಿಕ ಸೇವೆಯಿಂದ ಬೆಳೆಯುತ್ತಿದೆ ರೈತರ ಒಂದು ಭಾಗವಾಗಿ ಪ್ರಾಥಮಿಕ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. ಟಿಎಂಎಸ್ ಸಂಸ್ಥೆ ಕೇವಲ ಅಡಿಕೆ ಮಾರಾಟಕ್ಕೆ ಸೀಮಿತಗೊಳ್ಳದೆ ಹಲವು ಭಾಗದಲ್ಲಿ ರೈತಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ದಿನಸಿ,ಹಣ್ಣು,ಔಷಧ ಮಾರಾಟವನ್ನು ಮಾಡುತ್ತಿದೆ ಈಗ ಕಟ್ಟಡ ಸಾಮಾಗ್ರಿಗಳು ಒಂದೇ ಸೂರಿನಲ್ಲಿ ನೀಡುವ ಕೆಲಸವನ್ನು ಮಾಡುತ್ತಿದೆ ಈ ಸಂಸ್ಥೆಯು ಉದ್ಯಮವನ್ನು ಸ್ಥಾಪಿಸುವಂತಾಗಲಿ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ,ಹಲವು ಏಳು-ಬೀಳುಗಳನ್ನು ಕಂಡಿರುವ ಟಿಎಂಎಸ್ ಸಂಸ್ಥೆ ಇಂದು ಸದೃಢವಾಗಿ ಬೆಳೆದಿದೆ ಸದಸ್ಯರಿಗೆ ಪ್ರಯೋಜನವಾಗುವಂತಹ ಹಲವು ಯೋಜನೆಗಳನ್ನು ತರಲಾಗುತ್ತಿದೆ ಅಡಿಕೆ ಬೆಳೆಗೆ ಸ್ಥಿರ ಬೆಲೆ ಸಿಗುತ್ತಿದ್ದರೂ ಅಡಿಕೆ ಬೆಳೆಯುವ ಕ್ಷೇತ್ರ ವಿಸ್ತರಣೆಯಾಗುತ್ತಿರುವುದು ಕಳವಳಕಾರಿಯಾಗಿದೆ ಇದರಿಂದ ಪಾರಂಪರಿಕ ಅಡಿಕೆ ಬೆಳೆಗಾರರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಸರಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ.ಆರ್.ಎಂ ಅಧ್ಯಕ್ಷ ಹೆಚ್.ಎಸ್.ಮಂಜಪ್ಪ,ಸಹಕಾರಿ ಮಹಾಮಂಡಳದ ಉಪಾಧ್ಯಕ್ಷ ಶಿವಕುಮಾರ ಗೌಡ ಪಾಟೀಲ,ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್ಟ ಅಳ್ಳಂಕಿ ಮಾತನಾಡಿದರು. ಟಿಎಂಎಸ್ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ,ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಹಾಗೂ ಟಿಎಂಎಸ್ ನಿರ್ದೇಶಕ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿವಕುಮಾರ ಗೌಡ ಪಾಟೀಲ ಹಾಗು ವಿ.ಎನ್.ಭಟ್ಟ ಅಳ್ಳಂಕಿಯವರನ್ನು ಟಿಎಂಎಸ್‌ವತಿಯಿಂದ ಸನ್ಮಾನಿಂಸಲಾಯಿತು.
ಗಣೇಶ ಭಟ್ಟ ಕಾಜಿನಮನೆ ಸ್ವಾಗತಿಸಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಣೆ ಮಾಡಿದರು.

ಯಕ್ಷಗಾನ ಕಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹಾಗೂ ಅವರ ತಂಡ ಈ ಬಾರಿಯೂ ಯಕ್ಷಗಾನದ ಪದ್ಯಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು‌
ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ,ಶ್ರೀರಕ್ಷಾ ಹೆಗಡೆ(ಭಾಗವತ) ಶಂಕರ ಭಾಗವತ ಯಲ್ಲಾಪುರ(ಮದ್ದಳೆ)ಯಲ್ಲಿ ಯಕ್ಷಗಾನ ಹಾಡುಗಳನ್ನು ಪ್ರಸ್ತುತಿ ಪಡಿಸಲಾಯಿತು.ಬಾಲಪ್ರತಿಭೆ ಭೂಮಿಕಾ ಹೆಗಡೆ ಹೊಸಗದ್ದೆ ಯಕ್ಷಗಾನ ಪದ್ಯಕ್ಕೆ ಹೆಜ್ಜೆ ಹಾಕಿದಳು.

About the author

Adyot

Leave a Comment