ಸಿದ್ದಾಪುರ ಬೊಗ್ರಿಮಕ್ಕಿಯಲ್ಲಿ ವಾರ್ಷಿಕೋತ್ಸವ ಹಾಗೂ ಸನ್ಮಾನ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಬೊಗ್ರಿಮಕ್ಕಿ ಶೀರಳ್ಳಿ ಗಂಗಾ‌ಕಲ್ಲೇಶ್ವರ ದೇವಸ್ಥಾನದ ವಾರ್ಷಿಕೋತ್ಸವ, ಸಮ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಸನಾತನ ಧರ್ಮದ ಪರಿಚಯ‌ ನಮ್ಮ ಮಕ್ಕಳಿಗೆ‌ ಕಲಿಸಬೇಕು ಮನೆ ಮನಗಳಲ್ಲಿ ಧರ್ಮ ಸಂಸ್ಕೃತಿ ಹೆಚ್ಚಬೇಕು. ಮಕ್ಕಳಿಗೂ ಸಂಸ್ಕಾರ ಕಲಿಸಬೇಕು. ಸನಾತನ ಧರ್ಮದ ಪರಿಚಯ‌ ಮಕ್ಕಳಿಗೆ‌ ಕಲಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ನಮ್ಮ ತನದ ಜಾಗೃತಿ ಹೆಚ್ಚಳ ಆಗುತ್ತಿದೆ. ಗುಲಾಮಿ ತನದ ಮಾನಸಿಕತೆಯಿಂದ ಹೊರ ಬಂದು ನಮ್ಮ ತನ ಉಳಿಸಿ ಬೆಳೆಸಿಕೊಳ್ಳುವದು ಇನ್ನಷ್ಟು ಜವಬ್ದಾರಿಯಿಂದ‌ ಮುಂದೆ ಹೋಗಬೇಕು ಎಂದ ಅವರು, ಸಾರ್ವಜನಿಕ ಜೀವನದಲ್ಲಿ ಯಾರ್ಯಾರ ಜೊತೆ ಇರುತ್ತೇವೆ ಗೊತ್ತಿಲ್ಲ. ಸದಾ‌ ಕಾಲ ಒಟ್ಟಿಗೆ‌ ಇರುವದು ದೇವರಲ್ಲಿ ಮಾತ್ರ. ಶ್ರದ್ಧಾ ಭಕ್ತಿಯಿಂದ ಇರಬೇಕಾದ್ದು ದೇವರಲ್ಲಿ ಮಾತ್ರ. ಗ್ರಾಮಸ್ಥರು ಸೇರಿ‌ ಪುನರ್ ಕಟ್ಟಿದ್ದು ಅಭಿನಂದನೀಯ ಎಂದರು.

ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ,
ಗಂಗಾ ಕಲ್ಲೇಶ್ವರ ದೇವಸ್ಥಾನ ಅಪರೂಪದ ದೇವಸ್ಥಾನ. ಗಂಗಾಷ್ಟಮಿ‌ ದಿನದಂದು ಗಂಗೋದ್ಭವಾಗಿ ಶಿವನ ಶಿರದ ಮೇಲೆ ಬೀಳುವದು ಅಂದರೆ ಅದಕ್ಕಿಂತ ಪುಣ್ಯ ಬೇರಿಲ್ಲ. ಇದೊಂದು ಧಾರ್ಮಿಕ‌ ಮಹತ್ವದ ಕ್ಷೇತ್ರ. ಆಧ್ಯಾತ್ಮಿಕ ನೆಲೆ ಎಂದರು.
ಜನ ಮನಸ್ಸು‌ ಮಾಡಿದರೆ ಏನೂ ಸಾಧ್ಯ. ದೇವಸ್ಥಾನಗಳೂ ಕೂಡ ಅಭಿವೃದ್ದಿ ಆಗುತ್ತಿದೆ. ದೇವರೇ ತನ್ನ ಜನರಿಗೆ ಮನಸ್ಸು ಕೊಟ್ಟು ದೇಗುಲ ಅಭಿವೃದ್ಧಿ ಮಾಡಿಸಿಕೊಂಡಂತೆ ಆಗಿದೆ ಎಂದರು.
ಸಿಇಓ ಮೋಹನ ಭಾಸ್ಕರ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ,ಸಾಮಾಜಿಕ ಕಾರ್ಯಕರ್ತ ದಿವಾಕರ ನಾಯ್ಕ ಹೆಮ್ಮನಬೈಲ, ಗ್ರಾ.ಪಂ.ಅಧ್ಯಕ್ಷ ಮೋಹನ ಗೌಡ, ಸದಸ್ಯರಾದ ಗಿರೀಶ ಶೇಟ್, ಗಣಪತಿ ಗೌಡ ಇತರರು ಇದ್ದರು.
ಇದೇ ವೇಳೆ ಹಿರಿಯ ವೈದಿಕ ಗಜಾನನ ರಾ.ಭಟ್ಟ ಜಾತಕ, ಪ್ರಸಾದನ ಕಲಾವಿದ ಎಂ.ಆರ್.ನಾಯ್ಕ ಕರ್ಸೇಬೈಲ್, ನಿವೃತ್ತ ಶಿಕ್ಷಕ ಎಂ.ಟಿ.ವೈದ್ಯ ಊರಕೇರಿ, ಶಿಕ್ಷಕ ಮನೋಜಕುಮಾರ, ಆಯುರ್ವೇದ ವೈದ್ಯ ಕೃಷ್ಣ ನಾಯ್ಕ ಒಡ್ಡಿನಕೊಪ್ಪ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ದೇವಸ್ಥಾನದ ಅಧ್ಯಕ್ಷ
ರಾಮಚಂದ್ರ ಹೆಗಡೆ ಓಜಗಾರು ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಬೊಗ್ರಿಮಕ್ಕಿ ಸ್ವಾಗತಿಸಿದರು. ವಿನಾಯಕ ಗೌಡ, ದೇವಸ್ಥಾನ ಕಾರ್ಯದರ್ಶಿ ರಾಜು ಹೆಗಡೆ ನಿರ್ವಹಿಸಿದರು. ಗೀತಾ ಭಟ್ಟ ಓಜಗಾರು ವಂದಿಸಿದರು.

About the author

Adyot

Leave a Comment