ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಗಂಗಾಂಬಿಕಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರಂಭವಾದ ವಿಜಯಸಂಕಲ್ಪ ಯಾತ್ರೆ ರಾಮಕೃಷ್ಣ ಹೆಗಡೆ ವೃತ್ತ,ರಾಜಮಾರ್ಗದ ಮೂಲಕ ಭಗತ್ ಸಿಂಗ್ ವೃತ್ತದಲ್ಲಿ ಮುಕ್ತಾಯವಾಯಿತು.
ಭಗತಸಿಂಗ್ ವೃತ್ತದ ಸಮೀಪ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,
ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿದ್ದರೆ ಕಾಂಗ್ರೆಸ್ ಮುಖಂಡರು ಮಂತ್ರಿಯಾಘುವ ಕನಸು ಕಾನುತ್ತಿದ್ದಾರೆ ಒಟ್ಟಾರೆ ಕಾಂಗ್ರೆಸ್‌ನವರು ಅಧಿಕಾರದ ಕನಸು ಕಾಣುತ್ತಿದ್ದು ಇದು ತಿರುಕನ ಕನಸಾಗಿರುತ್ತದೆ ಇತ್ತೀಚೆಗಷ್ಟೆ ಮುರು ರಾಜ್ಯಗಳ ಚುನಾವಣೆ ನಡೆದಿದೆ ಅಲ್ಲೆಲ್ಲ ಬಿಜೆಪಿ ಗೆಲುವು ಸಾಧಿಸಿದೆ ಈ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ದೇಶದ ಬಗ್ಗೆ,ಇಲ್ಲಿಯ ಸಂವಿಧಾನದ ಬಗ್ಗೆ ವಿದೆಶದಲ್ಲಿ ನಿಂತು ಮಾತನಾಡುವ ರಾಹುಲ್ ಗಾಂಧಿ ಇಲ್ಲೆಲ್ಲ ಪ್ರಚಾರಕ್ಕೆ ಬಂದಿದ್ದರು. ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರ ಮಾಡಿದ್ದರೋ ಅಲ್ಲೆಲ್ಲ ಕಾಂಗ್ರೆಸ್ ಸೋತಿದೆ ಈಗ ರಾಜ್ಯಕ್ಕೆ ಬರುತ್ತಿದ್ದಾರೆ ಅಂದರೆ ಇಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ.
ಕಾಂಗ್ರೆಸ್‌ನವರು ೨೦೦ಯುನಿಟ್ ವಿದ್ಯುತ್,ಮಹಿಳೆಯರಿಗೆ ದುಡ್ಡು ಕೊಡುತ್ತೆವೆ ಎಂದು ಗ್ಯಾರಂಟಿ ಪತ್ರ ಕೊಡುತ್ತಿದ್ದಾರೆ. ಆದರೆ ಐದು ವರ್ಷ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಆಗ ಯಾಕೆ ಕೊಟ್ಟಿಲ್ಲ ಇದರಿಂದ ತಿಳಿಯುತ್ತದೆ ಇದು ಬೋಗಸ್ ಗ್ಯಾರಂಟಿ ಪತ್ರ ಎಂದು ಜನತೆಗೆ ತಿಳಿದಿದೆ. ಸಿದ್ದರಾಮಯ್ಯ ರಾಜ್ಯದ ನಾಯಕ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ ಆದರೆ ಅವರಿಗೆ ಚುನಾವಣೆಯಲ್ಲಿ ನಿಲ್ಲಲು ಒಂದು ಕ್ಷೇತ್ರವೂ ಇಲ್ಲ ಎಂದು ಶೆಟ್ಟರ್ ಲೇವಡಿ ಮಾಡಿದರು.
ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವೇ ಪ್ರಾರಂಭವಾಗಿದೆ ಆರು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅತ್ಯತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ವಿಧಾನಸಭಾಧ್ಯಕ್ಷರಾಗಿ ಮಹತ್ತರ ಕೆಲಸ ಮಾಡಿದ್ದಾರೆ ಈಗ ಏಳನೇ ಬಾರಿಯೂ ಚುನಾವಣೆಯಲ್ಲಿ ನಿಲ್ಲುತ್ತಿದ್ದಾರೆ ಅವರು ಈ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಅದೇ ರೀತಿ ರಾಜ್ಯದ ೧೪೦ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ರಾಜ್ಯದ್ಯಂತ ಬಿಜೆಪಿಯ ಅಲೆ ಎದ್ದಿದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಈಗ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ವಿಜಯೋತ್ಸವ ಯಾತ್ರೆಯಾಗಿದೆ. ಕಾಂಗ್ರೆಸ್ ಗ್ಯಾರಂಟಿ ಪತ್ರ ಕೊಡಲು ಹೊರಟಿದೆ ಆದರೆ ಇಂದಿರಾಗಾAಧಿಯವರು ಗರೀಭಿ ಹಟಾವೋ ಮಾಡುವ ಮೂಲಕ ಬಡತನ ತೊಲಗಿಸುತ್ತೇನೆ ಎಂದರು ಆದರೆ ಬಡತನ ಹೋಗಿದ್ದು ಕಾಂಗ್ರೆಸ್‌ನವರದ್ದು ಕಾಂಗ್ರೆಸ್‌ನ ಯೋಜನೆಗಳು ಯಾರೊ ಕೆಲವರನ್ನು ಮೆಚ್ಚಿಸಲು ಆದರೆ ಬಿಜೆಪಿ ಯೋಜನೆಗಳು ಎಲ್ಲರನ್ನೂ ತಲುಪುವಂತಹ ಯೋಜನೆಯಾಗಿದೆ ಎಂದು ಹೇಳಿದರು.
ಉಸ್ತುವಾರಿ ಸಚೀವ ಕೋಟಾ ಶ್ರೀನಿವಾಸ ಪೂಜಾರಿ,ಇಂದು ದೇಶಕ್ಕೆ ಮೋದಿಯಂತಹ ಪ್ರಧಾನಿಯ ಅವಶ್ಯಕತೆ ಇದೆ.ಈಡೀ ಜಗತ್ತು ಭಾರತದ ಕಡೆಗೆ ನೋಡುವಂತೆ ಮಾಡಿದ್ದು ನರೇಂದ್ರ ಮೋದಿಯವರು. ಕಾಂಗ್ರೆಸ್ ನವರಿಗೆ ದೇಶದ ಬಗ್ಗೆ,ದೇಶದ ಮಾನ ಕಾಪಾಡುವ ಬಗ್ಗೆ ಗೊತ್ತಿಲ್ಲ ಹಲವು ಭಾಗ್ಯಗಳನ್ನು ಕೊಟ್ಟಿದ್ದೆವೆ ಎನ್ನುವ ಸಿದ್ದರಾಮಯ್ಯನವರು ಅದಕ್ಕೆ ಸಹಾಯ ಮಾಡಿದ ಕೇಂದ್ರಸರಕಾರದ ಬಗ್ಗೆ ಹೇಳುವುದಿಲ್ಲ.ಅನ್ನಭಾಗ್ಯದ ಅಕ್ಕಿಗೆ32ರೂ. ವೆಚ್ಚ ತಗಲುತ್ತದೆ,29ರೂ. ಕೇಂದ್ರ ಸರಕಾರ ನೀಡುತ್ತದೆ 3ರೂ. ರಾಜ್ಯಸರಕಾರ ಕೊಡುತ್ತದೆ ಯೋಜನೆಗೆ ಕೇಂದ್ರದ ಸಹಾಯ ಪಡೆದು ತಾನು ಮಾಡಿದ್ದು ಎಂದು ಹೇಳುವ ಕಾಂಗ್ರೆಸ್ ಸುಳ್ಳು ಹೇಳುತ್ತಲೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ ಎಂದರು.
ಕಾರ್ಮಿಕ ಸಚೀವ ಶಿವರಾಮ ಹೆಬ್ಬಾರ ಮಾತನಾಡಿದರು. ಯಾತ್ರೆಯಲ್ಲಿ ಬಿಜೆಪಿ ಪ್ರಮುಖರಾದ ಗೋವಿಂದ ನಾಯ್ಕ,ಸುನಿಲ ಹೆಗಡೆ, ಕೆ.ಜಿ.ನಾಯ್ಕಹಣಜೀಬೈಲ್,ಗುರುಪ್ರಸಾದ ಹೆಗಡೆ,ಬಿಜೆಪಿ ಮಂಡಳ ಅಧ್ಯಕ್ಷ ಮಾರುತಿ ನಾಯ್ಕ ಮುಂತಾಧವರು ಉಪಸ್ಥಿತ
ರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಸ್ವಾಗತಿಸಿದರು.