ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಐತಿಹಾಸಿಕ ನೆಹರೂ ಮೈದಾನದಲ್ಲಿ ಸ್ಥಳೀಯ ಯುಗಾದಿ ಉತ್ಸವ ಸಮಿತಿಯವರು ಛತ್ರಪತಿ ಶಿವಾಜಿ ಮಹಾರಾಜ ವೇದಿಕೆಯಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ-೨೦೨೩ ಕಾರ್ಯಕ್ರಮ
ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಮುಖ್ಯವಕ್ತಾರರಾಗಿ ಭಾಗವಹಿಸಿದ್ದ ಚೈತ್ರಾ ಕುಂದಾಪುರ ಮಾತನಾಡಿ,ನಮ್ಮ ಶ್ರೀರಾಮ ಪಟ್ಟಾಭಿಷಿಕ್ತನಾದ ದಿನ ಯುಗಾದಿ .ನಮ್ಮ ಹೊಸವರ್ಷ ಯುಗಾದಿಯಿಂದ ಪ್ರಾರಂಭವಾಗುತ್ತದೆ ಕೇವಲ ಮನುಷ್ಯರದಷ್ಟೆ ಅಲ್ಲ,ಪಶು,ಪಕ್ಷಿ,ಪರಿಸರ ಎಲ್ಲದರಲ್ಲೂ ಬದಲಾವಣೆ ಪ್ರಾರಂಭವಾಗುವ ದಿನ.ಕುಡಿದು,ಕುಣಿದು,ನಶೆ ಏರಿಸಿಕೊಂಡು ಕುಣಿಯುವ ಹೊಸವರ್ಷ ನಮ್ಮದಲ್ಲ ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಹಬ್ಬಗಳ ವೈಶಿಷ್ಟ್ಯ.ಧರ್ಮದ ಆಚರಣೆಗಳು ನಮ್ಮ ಬದ್ಧತೆ ಎಂದು ತಿಳಿಯ ಬೇಕಾದ ಸಮಯ ಈಗ ಬಂದಿದೆ.ಟಿಪ್ಪು,ಘಜನಿ ಮುಂತಾದ ದರೋಡೆಕೋರರ ಚರಿತ್ರೆಯನ್ನು ನಾವು ಇತಿಹಾಸ ಎಂದು ತಿಳಿದುಕೊಂಡಿದ್ದೆವೆ ನಮ್ಮ ಇತಿಹಾಸವಿರುವುದು ರಾಮಾಯಣ,ಮಹಾಭಾರತದಲ್ಲಿ ನಮ್ಮ ನಾಗರಪಂಚಮಿ,ಗಣೇಶ ಹಬ್ಬ,ದೀಪಾವಳಿ,ಹೋಳಿ ಮುಂತಾದ ಹಬ್ಬಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲು ಪ್ರಾರಂಭವಾಗಿದೆ. ಹೀಗೆ ಆಚರಿಸಬೇಕು ಹಾಗೆ ಆಚರಿಸಬೇಕು ಎಂಬ ಹೇರಿಕೆಯನ್ನು ಕೆಲವು ಸ್ವಘೋಷಿತರು ಮಾಡುತ್ತಿದ್ದಾರೆ ನಮ್ಮ ಹಬ್ಬಗಳು ಕೇವಲ ಮನುಷ್ಯರ ಹೊಟ್ಟೆ ತುಂಬಿಸುವುದಕ್ಕಲ್ಲ ಭೂಮಿಯ ಪ್ರತಿಯೊಂದೂ ಜೀವಿಗೂ ಬದುಕಲು ಹಕ್ಕಿದೆ ಎಂದು ಸಾರಲು ಎಂದು ಹೇಳಿದರು.
ಹಿಂದುಗಳು ನಾವೆಲ್ಲ ಅಣ್ಣ ತಮ್ಮಂದಿರು ಎಂಬ ಭ್ರಮೆಯಲ್ಲಿದ್ದಾರೆ ಇದನ್ನು ಬಿಡಬೇಕು ಸಿದ್ದಾಪುರ ದಂತಹ ಊರಿನಲ್ಲಿ ಅಡಿಕೆ ಬೆಳೆಯುವವರು ಶೇ.೧೦೦ರಷ್ಟು ಹಿಂದುಗಳು ಆದರೆ ಕೋಟ್ಯಂತರ ಲಾಭ ಮಾಡಿಕೊಳ್ಳುತ್ತಿರುವವರು ಮುಸ್ಲಿಂರು.ನಮ್ಮ ಹಬ್ಬ ಹರಿದಿನಗಳ ವ್ಯಾಪಾರ ನಮ್ಮವರ ಬದುಕನ್ನು ಕಟ್ಟಿಕೊಡಬೇಕು ನಮ್ಮ ವ್ಯಾಪಾರ- ವಹಿವಾಟು ನಮ್ಮ ಹಿಂದುಗಳ ಜೊತೆಗೆ ನಡೆಯ ಬೇಕು ಇಲ್ಲವಾದಲ್ಲಿ ನಮ್ಮ ಗೋಮಾತೆಯ ಕುತ್ತಿಗೆಗೆ ಅವರ ಕತ್ತಿ ಬೀಳುತ್ತದೆ ಲವ್ ಜಿಹಾದ್ ಎಂದು ನಮ್ಮ ಹೆಣ್ಣುಮಕ್ಕಳು ಅವರ ಪಾಲಾಗುತ್ತಾರೆ ಹಿಂದುಗಳು ತಮ್ಮ ಬಲವನ್ನು ಬಿಟ್ಟಾಗ ಸೋಲಾಗುತ್ತದೆ.
ನಾವು ಯಾವುದೇ ಪಕ್ಷದವರಿರಲಿ,ಯಾವುದೇ ಜಾತಿಯವರಿರಲಿ ನಾವು ಹಿಂದುಗಳು ಎಂದಾಗ ಒಂದಾಗಬೇಕು ಇಲ್ಲವಾದಲ್ಲಿ ಇಂದು ಕಾಶ್ಮೀರ ದಲ್ಲಿ ನಡೆಯುತ್ತಿರುವುದು ನಾಳೆ ಇಲ್ಲಿಯೂ ಆಗಬಹುದು.ನಮ್ಮ ಆಚರಣೆಗಳು ಪುಸ್ತಕದಲ್ಲಿ ಬರೆದಿದ್ದಲ್ಲ ಇದು ಪರಂಪರೆಯಿಂದ ಬಂದಿದ್ದು ಇದನ್ನು ಉಳಿಸಲು ನಾವು ನಮ್ಮ ವ್ಯಾಪಾರ-ವಹಿವಾಟು ಹಿಂದುಗಳೊಂದಿಗೆ ಮಾಡಬೇಕು,ವಾರದಲ್ಲಿ ಒಂದು ದಿನವಾದರೂ ಕುಟುಂಬ ಸಹಿತವಾಗಿ ದೇವಸ್ಥಾನಗಳಿಗೆ ಹೋಗಬೇಕು,ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡಬೇಕು ಇದರಿಂದ ನಮ್ಮ ಮಕ್ಕಳು ನಮ್ಮ ಪರಂಪರೆಯಲ್ಲಿ ಮುಂದುವರಿಯುತ್ತಿದ್ದಾರೆಯೋ ಇಲ್ಲವೋ ತಿಳಿಯುತ್ತದೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಸಿದ್ದಾಪುರದಲ್ಲಿ ಪಕ್ಷಭೆದ ಮರೆತು ಯುಗಾದಿ ಉತ್ಸವವನ್ನು ಮಾಡುತ್ತಿದ್ದಾರೆ. ಯುವಕರು ಸಕ್ರೀಯವಾಗಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಇಂತಹ ಉತ್ಸವವನ್ನು ಆಯೋಜಿಸಿ ಧರ್ಮ ಜಾಗೃತಿ ಮಾಡುತ್ತಿರುವ ಸಮಿತಿಯವರನ್ನು ನಾನು ಅಭಿನಂದಿಸುತ್ತೆನೆ ಎಂದು ಹೇಳಿದರು.
ಸಭೆಯ ದಿವ್ಯಸಾನ್ನಿಧ್ಯವಹಿಸಿದ್ದ ಶಿಗ್ಗಾಂವ ವಿರಕ್ತಮಠದ ಶ್ರೀಗದಿಗೇಶ್ವರ ಮಹಾಸ್ವಾಮಿಜಿಯವರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಡಾ.ಶಶಿಭೂಷಣ ಹೆಗಡೆ,ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಸಮಿತಿಯ ಗೌರವಾಧ್ಯಕ್ಷ ಆನಂದ ನಾಯ್ಕ, ಅಧ್ಯಕ್ಷ ಡಾ.ಶ್ರೀಧರ ವೈದ್ಯ,ಕಾರ್ಯಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪಟ್ಟನದ ಚಂದ್ರಘಟಕಿ ಪಟಾಂಗಣದಿAದ ಹೊಸೂರು ಬಂಕೇಶ್ವರ ವೃತ್ತ,ರಾಜಮಾರ್ಗ,ರಾಮಕೃಷ್ಣ ವೃತ್ತದ ಮೂಲಕ ನೆಹರೂ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ,ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ,ಅರಣ್ಯಹಕ್ಕು ಹೋರಾಟಗಾರ ರವೀಂದ್ರ ನಾಯ್ಕ,ಆಮ್‌ಆದ್ಮಿ ಜಿಲ್ಲಾಉಪಾಧ್ಯಕ್ಷ ವೀರಭದ್ರ ನಾಯ್ಕ,ಜೆಡಿಎಸ್ ತಾಲೂಕಾಧ್ಯಕ್ಷ ಸತೀಶ ಹೆಗಡೆ ಸೇರಿದಂತೆ ಮೂರುಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು