ಕುಮಟಾ ಕ್ಷೇತ್ರದಲ್ಲಿ ಶಾರದಾ ಶೆಟ್ಟಿ ಪಕ್ಷೇತರ ಅಭ್ಯರ್ಥಿ? ಶಾರದಾ ಶೆಟ್ಟಿ ಬೆಂಬಲಿಸಿ ಬ್ಲಾಕ್ ಅಧ್ಯಕ್ಷ ಸೇರಿದಂತೆ 22 ಪದಾಧಿಕಾರಿಗಳ ರಾಜಿನಾಮೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಭಿನ್ನಮತದ ಉರಿ ಹೆಚ್ಚುತ್ತಿದ್ದು ಕುಮಟಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಶಾರದಾ ಶೆಟ್ಟಿಯವರನ್ನು ಬೆಂಬಲಿಸಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಎಲ್.ನಾಯ್ಕ ರವಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ

ಇವರೊಂದಿಗೆ ಕುಮಟಾ ತಾಲೂಕಿನ ಪದಾಧಿಕಾರಿಗಳಾದ
ಕಾಂಗ್ರೆಸ್ ಸೇವಾದಳ ತಾಲೂಕಾಧ್ಯಕ್ಷ ಸ್ಥಾನಕ್ಕೆ ನಿತ್ಯಾನಂದ ನಾಯ್ಕ, ಕಾಂಗ್ರೆಸ್ ಬ್ರಿಗೇಡ್ ಸೇವಾದಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಕ್ಷಯ ನಾಯ್ಕ, ಕಾರ್ಮಿಕ ವಿಭಾಗದ ಮನೋಜ ನಾಯ್ಕ ತೊರ್ಕೆ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ ನಾಯ್ಕ ಬರ್ಗಿ, ಪ್ರಚಾರ ಸಮಿತಿ ಸಂಚಾಲಕಿ ತಾರಾ ಗೌಡ, ಮಹಿಳಾ ಕಾಂಗ್ರೆಸ್ ತಾಲೂಕಾಧ್ಯಕ್ಷ ಸ್ಥಾನಕ್ಕೆ ಸುರೇಖಾ ವಾರೇಕರ, ಸಾಮಾಜಿಕ ಜಾಲತಾಣ ವಿಭಾಗದ ತಾಲೂಕಾಧ್ಯಕ್ಷ ಸ್ಥಾನಕ್ಕೆ ವಿಜಯ ವೆರ್ಣೇಕರ, ಹಿಂದುಳಿದ ವರ್ಗಗಳ ವಿಭಾಗದ ತಾಲೂಕಾಧ್ಯಕ್ಷ ಸ್ಥಾನಕ್ಕೆ ಹನುಮಂತ ಪಟಗಾರ ಸೇರಿದಂತೆ ೨೨ ಘಟಕಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ನಿವೇದಿತ್ ಆಳ್ವಾ ರವರಿಗೆ ಬಿ.ಫಾರ್ಮ್ ನೀಡಿದೆ.ಇದನ್ನು ಈ ಭಾಗದ ಕಾಂಗ್ರೆಸ್ ಪ್ರಮುಖರು ವಿರೋಧಿಸುತ್ತಿದ್ದಾರೆ.

About the author

Adyot

Leave a Comment