ಆದ್ಯೋತ್ ಸುದ್ದಿನಿಧಿ:
ಬೆಂಗಳೂರು ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ರವಿವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿ ಮಾಡಿದ ಶ್ರೀನಿವಾಸಮೂರ್ತಿ ರಾಜೀನಾಮೆ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ, ಪಕ್ಷದ ಕೆಲ ಹಿರಿಯ ನಾಯಕರ ಕುತಂತ್ರದಿಂದಾಗಿ ನನಗೆ ಟಿಕೆಟ್ ಕೈ ತಪ್ಪಿದೆ. ಕಾಂಗ್ರೆಸ್ ನ ಮೂರೂ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟಗೊಂಡಿಲ್ಲ. ನನಗೆ ಟಿಕೆಟ್ ವಂಚಿಸಿರುವುದು ರಾಜ್ಯಕ್ಕೇ ಗೊತ್ತಿದೆ. ನಮ್ಮ ತಂದೆ ಸಹ 40 ವರ್ಷಗಳ ಕಾಲ ಕಾಂಗ್ರೆಸ್ ಗಾಗಿ ಶ್ರಮಿಸಿದವರು. ನಾನು ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಆರಿಸಿ ಬಂದಿದ್ದರೂ ನನ್ನನ್ನು ಪರಿಗಣಿಸದಿರುವುದು ನೋವು ತಂದಿದೆ.ಕ್ಷೇತ್ರದ ಜನತೆ ಆಕಾಂಕ್ಷೆಯಂತೆ ಟಿಕೆಟ್ ಘೋಷಣೆ ಆಗಿಲ್ಲ. ಈ ಕುರಿತು ನಾಯಕರೊಂದಿಗೆ ಮಾತನಾಡಿದರೂ ಪಕ್ಷದಿಂದ ನಿರೀಕ್ಷಿತ ಸ್ಪಂದನೆ ಇಲ್ಲ. ನಮ್ಮ ಕ್ಷೇತ್ರದಲ್ಲಿ ಎಲ್ಲ ಜಾತಿ ಸಮುದಾಯ ಒಟ್ಟಿಗಿದ್ದೇವೆ.ಕೆ ಜೆ ಹಳ್ಳಿ, ಡಿಜೆ ಹಳ್ಳಿ ಗಲಾಟೆ ಹೊರಗಡೆಯವರು ಬಂದು ಮಾಡಿದ್ದಾರೆ. ನಮ್ಮ ಕ್ಷೇತ್ರದ ಜನತೆ ಎಲ್ಲಾ ಒಟ್ಟಿಗೆ ಇದ್ದೇವೆ ಎಂದರು.
2013ರಲ್ಲಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದು 2018ರಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದೆ ರಾಜೀನಾಮೆ ಬಳಿಕ ಮುಂದೇನು ಎಂದು ಇದುವರೆಗೂ ತೀರ್ಮಾನ ಮಾಡಿಲ್ಲ. ಕಾಂಗ್ರೆಸ್ ಗೆ ಇನ್ನೂ ರಾಜೀನಾಮೆ ನೀಡಿಲ್ಲ.ನಾನು 10 ವರ್ಷದಿಂದ ಶಾಸಕ ಆಗಿದ್ದವನು ಎಂದು ಹೇಳಿದ ಮೂರ್ತಿ ಜೆಡಿಎಸ್ ಸೇರುವುದನ್ನು ಪರೋಕ್ಷವಾಗಿ ತಿಳಿಸಿದರು